Showing posts with label ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು. Show all posts
Showing posts with label ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು. Show all posts

Tuesday, December 27, 2011

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು (130)

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು ? |
ಆಂದೋಳನವೆ ವಾಸ್ತುಶುದ್ಧಿ ನಿಶ್ಚಿತಕೆ ||
ಅಂಧವಿಶ್ವಾಸಕಾತನುಭವಿಪ್ರಶ್ನೆ ಬಳಿ |
ಸಂದಿಹುದು ಸತ್ಯಕ್ಕೆ - ಮರುಳ ಮುನಿಯ || (೧೩೦)

(ಪಕ್ವ+ಎಂತು+ಅಹುದು)(ಅಂಧವಿಶ್ವಾಸಕೆ+ಆತ+ಅನುಭವಿಪ್ರಶ್ನೆ)

ಅನುಮಾನವೆಂಬ ಬೆಂಕಿ (ಶಿಖಿ) ಇಲ್ಲದಿದ್ದರೆ ಬುದ್ಧಿಯು ಹೇಗೆ ತಾನೇ ಮಾಗುತ್ತದೆ ? ವಸ್ತುವಿನ ಸತ್ಯಾಸತ್ಯದ ದರ್ಶನಕ್ಕೆ (ವಾಸ್ತುಶುದ್ಧಿ) ತರ್ಕಿಸುವುದೇ (ಆಂದೋಳನವೆ) ದಾರಿ. ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಅನುಭವಿ ಪ್ರಶ್ನೆಗಳು ಅವನನ್ನು ಸತ್ಯದ ಸಮೀಪಕ್ಕೆ ತೆಗೆದುಕೊಂಡು ಹೋಗುತ್ತವೆ.