Showing posts with label ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ. Show all posts
Showing posts with label ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ. Show all posts

Monday, May 23, 2011

ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ (13)

ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ |
ವಿತತ ಶಾಂತಿಯ ರಾಶಿಯದು ತೆರೆಗಳಡಿಯೋಳ್ ||
ಕೃತಕ ಸಂಸಾರಿ ದಶೆ ಮೇಲಂತು ಬೊಮ್ಮಂಗೆ |
ಸ್ವತ ಅವನು ನಿಶ್ಚೇಷ್ಟ - ಮರುಳ ಮುನಿಯ || (೧೩)

(ತೆರೆಗಳ+ಅಡಿಯೋಳ್)

 ಸಮುದ್ರದ(ಜಲಧಿ) ಮೇಲ್ಭಾಗ ಬೃಹತ್ ಅಲೆಗಳ(ಕಲ್ಲೋಲ) ನೋಟದಿಂದ ಕೂಡಿರುತ್ತದೆ. ಆದರೆ ಆ ಅಲೆಗಳ ತಳದಲ್ಲಿ ವಿಸ್ತಾರವಾದ (ವಿತತ) ನೆಮ್ಮದಿಯ ರಾಶಿ ಇರುತ್ತದೆ. ಅಂತೆಯೇ ಹೊರನೋಟಕ್ಕೆ ಬ್ರಹ್ಮನಿಗೆ ಅಸಹಜವಾದ(ಕೃತಕ) ಸಂಸಾರಿಯ ಸ್ಥಿತಿ. ವಾಸ್ತವದಲ್ಲಿ ಹಾಗೂ ಆಂತರ್ಯದಲ್ಲಿ ಪರಬ್ರಹ್ಮ ತಾನು ಸ್ಥಾವರ (ಕ್ರಿಯಾತೀತ).