Showing posts with label ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ. Show all posts
Showing posts with label ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ. Show all posts

Monday, October 3, 2011

ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ (78)


ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ |
ಎತ್ತೆತ್ತಲ್ ಎಂದೆಂದುಂ ಇರುವುದದು ಸತ್ಯ ||
ಗೊತ್ತಿಲ್ಲ ಗುರಿಯಿಲ್ಲ ಗುರುತು ಗೆಯ್ಮೆಗಳಿಲ್ಲ |
ಸತ್ ಒಳ್ಮೆಯೊಳ್ಳಿತದು - ಮರುಳ ಮುನಿಯ || (೭೮)

(ಇರುವಿಕೆಯದ+ಅಸ್ತಿತ್ವ)(ಇರುವುದು+ಅದು)(ಒಳ್ಮೆಯ+ಒಳ್ಳಿತು+ಅದು)

ಶ್ರೇಷ್ಠವಾಗಿರುವ ವಸ್ತು ಎನ್ನುವುದರ ಇರುವಿಕೆ ಬರಿಯ ಇರುವಿಕೆಯೇ ಹೌದು. ಎಲ್ಲೆಲ್ಲಿಯೂ ಎಂದೆಂದಿಗೂ ಇರುವುದು ಸತ್ಯ. ಅದಕ್ಕೆ ಒಂದು ಗೊತ್ತು, ಗುರಿ, ಗುರುತು ಮತ್ತು ಕಾರ್ಯ(ಗೆಯ್ಮೆ)ಗಳಿಲ್ಲ. ಅದು ಒಳ್ಳೆಯದರಲ್ಲಿ ಒಳ್ಳೆಯದು. ಶ್ರೇಷ್ಠವಾಗಿರುವುದರಲ್ಲಿ ಶ್ರೇಷ್ಠವಾದುದು.