Showing posts with label ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ. Show all posts
Showing posts with label ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ. Show all posts

Wednesday, February 22, 2012

ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ (165)

ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ |
ಕುತ್ಸಿತವ ಹೇಳಿಸು(ತೊಳಗೆ) ನಗುವರಿರರೆ ||
ಪ್ರತ್ಯಕ್ಷಕಳುಕುವಾಶೆಗಳು ಮನಸಿನ ಕುಳಿಯ |
ಗುಪ್ತದಿಂ ಚೇಷ್ಟಿಸವೆ? - ಮರುಳ ಮುನಿಯ || (೧೬೫)
 
(ಹೇಳಿಸುತ+ಒಳಗೆ)(ನಗುವರ್+ಇರರೆ)(ಪ್ರತ್ಯಕ್ಷಕೆ+ಅಳುಕುವ+ಅಶೆಗಳು)
 
ನಿಜವನ್ನು ಮಾತ್ರ ಕೇಳುವ ಹಟದ ನೆಪದಿಂದ, ಬೇರೆಯವರ (ಹೆರರ) ನಿಂದೆಗಳನ್ನು(ಕುತ್ಸಿತ) ಹೇಳುತ್ತಾ ಒಳಗಡೆ ನಗುವರು ಇರಲಾರರೇನು? ಎದುರಿಗೆ ಕಾಣಿಸಲು ಹಿಂಜರಿಯುವ (ಅಳುಕುವ) ಬಯಕೆಗಳು ಮನಸ್ಸಿನ ಒಳಗೆ ಅಡಗಿರುವ ಆಸೆ(ಗುಳಿ)ಗಳನ್ನು ಗುಟ್ಟಿನಲ್ಲಿ (ಗುಪ್ತದಿಂ) ಕಾರ್ಯನಿರ್ವಹಿಸುವಂತೆ ಮಾಡಲಾರವೇನು?