Showing posts with label ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ. Show all posts
Showing posts with label ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ. Show all posts

Monday, December 19, 2011

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ (126)

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ - ಮರುಳ ಮುನಿಯ || (೧೨೬)

(ಸಿರಿದೇವಿಯ+ಅಂಗಡಿಯನ್+ಅರಸಿ)(ಹೊಳಪಿನ+ಆಸೆಯಿಂದ+ಒಳಮಬ್ಬನ್+ಅಪ್ಪುವನು)

ಸರಸ್ವತಿದೇವಿಯ ಛತ್ರ ತನ್ನ ಹತ್ರದಲ್ಲೇ ಇದ್ದರೂ ಸಹ, ಅದನ್ನು ಬಿಟ್ಟು ದೂರದಲ್ಲಿರುವ ಲಕ್ಷ್ಮಿದೇವಿಯ ಅಂಗಡಿಯನ್ನು ಹುಡುಕಿಕೊಂಡುಹೋಗಿ, ಮೋಸಹೋಗಿ, ಹೊರಗಿನ ಕಾಂತಿಯ (ಹೊಳಪು) ಆಸೆಯಿಂದ ತನ್ನ ಒಳಗಡೆ ಕತ್ತಲೆ(ಮಬ್ಬು)ಯನ್ನು ಹೊಂದುತ್ತಾನೆ. ಅವನು ಒಬ್ಬ ಕುರುಡನೇ ಎಂದು ತಿಳಿ.