Showing posts with label ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ. Show all posts
Showing posts with label ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ. Show all posts

Thursday, August 25, 2011

ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ (59)


ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ |
ಮಾವ ಮಾವಂದಿರಿಂದಗಣಿತಾದಿಗಳಿಂ ||
ಜೀವವೊಂದುದಿಸಿಹುದು ಹೀರಿ ಸಾರಗಳನಿತ-|
ನಾವನೆಣಿಸುವನದನು - ಮರುಳ ಮುನಿಯ || (೫೯)

(ಮಾವಂದಿರಿಂದ+ಅಗಣಿತಾದಿಗಳಿಂ)(ಜೀವವೊಂದು+ಉದಿಸಿಹುದು)
(ಸಾರಗಳನ್+ಅನಿತನ್+ಅವನ್+ಎಣಿಸುವನ್+ಅದನು)

ಸಾವಿರಾರು ವಂಶ(ಕುಲ)ಗಳಿಂದ, ತಾಯಿ ತಂದೆಯರು, ಅತ್ತೆ ಮಾವಂದಿರು ಮತ್ತು ಲೆಕ್ಕಕ್ಕೆ ಸಿಗದಿರುವ ಇತ್ಯಾದಿಗಳಿಂದ (ಅಗಣಿತಾದಿಗಳಿಂ), ಒಂದು ಜೀವವು ಈ ಪ್ರಪಂಚದಲ್ಲಿ ಹುಟ್ಟಿದೆ (ಉದಿಸಿಹುದು). ಇದು ಸ್ವಲ್ಪ ಸ್ವಲ್ಪ (ಅನಿತು) ಸಾರಗಳನ್ನು ಇವರೆಲ್ಲರಿಂದ ಹೀರಿಕೊಂಡು ಹುಟ್ಟಿದೆ. ಇದನ್ನು ಲೆಕ್ಕ ಹಾಕಲಿಕ್ಕೆ ಯಾರಿಂದ ಸಾಧ್ಯ?