Showing posts with label ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು. Show all posts
Showing posts with label ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು. Show all posts

Thursday, October 20, 2011

ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು (90)


ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು |
ಸಿಕ್ಕಿರ‍್ಪುದರೊಳವನ ಕಾಣದಿಹರೇಕೆ ? ||
ಲೆಕ್ಕಿಲ್ಲದ ವೊಡಲ ಪೊತ್ತನನು ಕಂಡುದರೊಳ್ |
ಪೊಕ್ಕು ನೋಡದರೇಕೆ? - ಮರುಳ ಮುನಿಯ || (೯೦)

(ಸಿಕ್ಕಿಲ್ಲ+ಅವನ್+ಎಮ್ಮ)(ಕಣ್ಣಿಗೆ+ಎಂಬವರು)(ಸಿಕ್ಕಿ+ಇರ‍್ಪುದರೊಳ್+ಅವನ)
(ಕಾಣದಿಹರ್+ಏಕೆ)(ಲೆಕ್ಕ+ಇಲ್ಲದ)(ಕಂಡು+ಅದರೊಳ್)(ನೋಡದರ್+ಅದೇಕೆ)

ಮರಮಾತ್ಮನು ನಮ್ಮ ಕೈ ಮತ್ತು ಕಣ್ಣುಗಳಿಗೆ ಸಿಕ್ಕಿಲ್ಲವೆನ್ನುವವರು, ತಮಗೆ ಸಿಕ್ಕಿರುವುದರೊಳಗೇ ಅವನನ್ನು ಏಕೆ ಕಾಣಲಾರರು ? ಲೆಕ್ಕಕ್ಕೆ ಸಿಗದಷ್ಟು ದೇಹ(ಒಡಲು)ಗಳನ್ನು ಧರಿಸಿಕೊಂಡಿರುವವನನ್ನು ನೋಡಿ ಅದರೊಳಗೆ ಹೊಕ್ಕು (ಪೊಕ್ಕು) ಅವನನ್ನು ಕಾಣಲಾರರೇಕೆ?