Showing posts with label ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ. Show all posts
Showing posts with label ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ. Show all posts

Wednesday, May 9, 2012

ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ (204)

ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ |
ಚೇಷ್ಟೆ ಸುಪ್ತಿಗಳ ಪರ್ಯಾಯವದರ ಕಥೆ ||
ಪುಷ್ಟವದರಿಂ ಕಂಪು ವಿಶ್ವ ಮಾಯಾವೃಕ್ಷ |
ಶಿಷ್ಟಮಿಹುದು ಪರಾತ್ಮ - ಮರುಳ ಮುನಿಯ || (೨೦೪)

(ಬೀಜ+ಅನಾದಿ)(ಸತ್ತ್ವ+ಅನಂತ)(ಪರ್ಯಾಯ+ಅದರ)(ಪುಷ್ಟ+ಅದರಿಂ)(ಶಿಷ್ಟಂ+ಇಹುದು)

ಈ ಉತ್ಪತ್ತಿಯ ಬೀಜವು ಬಹಳ ಪುರಾತನಕಾಲದಿಂದ ಬಂದಿದೆ ಮತ್ತು ಅದಕ್ಕೆ ಮೊದಲಿಲ್ಲ. ಅದರ ತಿರುಳೂ ಸಹ ಕೊನೆಯಿಲ್ಲದ್ದು. ಚಲನವಲನ ಮತ್ತು ನಿದ್ರಿಸುವಿಕೆಗಳ (ಸುಪ್ತಿ) ಸರದಿಗಳು ಇವುಗಳ ಕಥೆ. ಈ ವಿಶ್ವವೆಂಬ ಮಾಯಾವೃಕ್ಷವು ಇದರಿಂದ ಪುಷ್ಟಿಗೊಂಡು ಸುಗಂಧ(ಕಂಪು)ವನ್ನು ಹರಡುತ್ತದೆ. ಅಲ್ಲಿ ಪರಬ್ರಹ್ಮ ಶುದ್ಧರೂಪದಲ್ಲಿ ಅಳವಟ್ಟಿರುತ್ತಾನೆ.