Showing posts with label ಏನೇನೊ ನಡೆದಿಹುದು ವಿಜ್ಞಾನ ಸಂಧಾನ. Show all posts
Showing posts with label ಏನೇನೊ ನಡೆದಿಹುದು ವಿಜ್ಞಾನ ಸಂಧಾನ. Show all posts

Wednesday, December 14, 2011

ಏನೇನೊ ನಡೆದಿಹುದು ವಿಜ್ಞಾನ ಸಂಧಾನ (123)

ಏನೇನೊ ನಡೆದಿಹುದು ವಿಜ್ಞಾನ ಸಂಧಾನ |
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ||
ತಾನೊಡರ‍್ಚಿದ ಹೊನ್ನರಸವೆ ಕೊರಳ್ಗೆ |
ನೇಣಾಗಿಹುದು ನೋಡು - ಮರುಳ ಮುನಿಯ || (೧೨೩)

(ನಡೆದು+ಇಹುದು)(ಮುರಿದು+ಇಹುದು)(ತಾನ್+ಒಡರ‍್ಚಿದ)(ನೇಣ್+ಆಗಿಹುದು)

ವಿಜ್ಞಾನದ ಹೊಂದಾಣಿಕೆಯಲ್ಲಿ ಮನುಷ್ಯನು ಸಾಕಷ್ಟು ಸಾಧಿಸಿದ್ದಾನೆ. ಇನ್ನೂ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನ ಸಂಬಂಧಗಳು ಮಾತ್ರ ಮುರಿದುಹೋಗುತ್ತಿವೆ. ತಾನು ನಿರ್ಮಿಸಿದ (ಒಡರ‍್ಚಿದ) ಬಂಗಾರದ ರಸವೇ (ಇದು ಹೊನ್ನರಸ, ಬಂಗಾರದ ಸರ ಎಂದಿರಬಹುದೇ?) ಮನುಷ್ಯನ ಕುತ್ತಿಗೆಗೆ ನೇಣುಹಗ್ಗವಾಗಿರುವುದನ್ನು ನೋಡು.