ಏನೇನೊ ನಡೆದಿಹುದು ವಿಜ್ಞಾನ ಸಂಧಾನ |
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ||
ತಾನೊಡರ‍್ಚಿದ ಹೊನ್ನರಸವೆ ಕೊರಳ್ಗೆ |
ನೇಣಾಗಿಹುದು ನೋಡು - ಮರುಳ ಮುನಿಯ || (೧೨೩)
(ನಡೆದು+ಇಹುದು)(ಮುರಿದು+ಇಹುದು)(ತಾನ್+ಒಡರ‍್ಚಿದ)(ನೇಣ್+ಆಗಿಹುದು)
ವಿಜ್ಞಾನದ ಹೊಂದಾಣಿಕೆಯಲ್ಲಿ ಮನುಷ್ಯನು ಸಾಕಷ್ಟು ಸಾಧಿಸಿದ್ದಾನೆ. ಇನ್ನೂ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನ ಸಂಬಂಧಗಳು ಮಾತ್ರ ಮುರಿದುಹೋಗುತ್ತಿವೆ. ತಾನು ನಿರ್ಮಿಸಿದ (ಒಡರ‍್ಚಿದ) ಬಂಗಾರದ ರಸವೇ (ಇದು ಹೊನ್ನರಸ, ಬಂಗಾರದ ಸರ ಎಂದಿರಬಹುದೇ?) ಮನುಷ್ಯನ ಕುತ್ತಿಗೆಗೆ ನೇಣುಹಗ್ಗವಾಗಿರುವುದನ್ನು ನೋಡು.

No comments:
Post a Comment