Showing posts with label ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ. Show all posts
Showing posts with label ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ. Show all posts

Wednesday, February 8, 2012

ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ (156)

ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ ? |
ಬಗೆಬಗೆಯ ಜೀವಲೀಲೆಗಳದರ ಸರಸ ||
ಜಗವ ತೊರೆಯೆಂಬವರೆ ನೀಂ ಬೆದಕುತಿಹುದೇನು ? |
ಸಿಗದೆ ಕಣ್ಗದು ಜಗದಿ ? - ಮರುಳ ಮುನಿಯ || (೧೫೬)

(ಬೇಡದೆ+ಇರೆ)(ಜೀವಲೀಲೆಗಳು+ಅದರ)(ಬೆದಕುತಿಹುದು+ಏನು)(ಕಣ್ಗೆ+ಅದು)

ಬ್ರಹ್ಮನಿಗೆ ಜಗತ್ತು ಬೇಕು. ಅದಕ್ಕೋಸ್ಕರವೇ ಅವನು ಈ ಜಗತ್ತನ್ನು ಸೃಷ್ಟಿಸಿ(ಸೃಜಿಸು)ದ್ದಾನೆ. ವಿಧವಿಧವಾದ ಜೀವಿಗಳ ಆಟಗಳು ಬ್ರಹ್ಮನ ವಿನೋದವಾದ ಚೆಲ್ಲಾಟ. ಈ ಜಗತ್ತಿನಲ್ಲಿ ಬಾಳಿ ಉಪಯೋಗವಿಲ್ಲ, ಇದನ್ನು ಬಿಟ್ಟು ಹೋಗುವುದೇ ಒಳಿತು ಎನ್ನುವ ನೀವೆಲ್ಲ ಏನನ್ನು ತಾನೇ ಹುಡುಕುತ್ತಿದ್ದೀರಿ? ಅದು ಜಗತ್ತಿನಲ್ಲಿ ನಿಮ್ಮ ಕಣ್ಣುಗಳಿಗೆ ಸಿಗುವುದಿಲ್ಲವೇ?