Showing posts with label ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ. Show all posts
Showing posts with label ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ. Show all posts

Wednesday, December 21, 2011

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ (128)

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ |
ಮನುಜರನುದಿನದ ಸಂಸರ್ಗ ಸಂಸ್ಕೃತಿಯಿಂ ||
ಜನಿಸುವುವು ನೂತನ ಜ್ಞಾನ ನವಭಾವಗಳು |
ಅನುಪೂರ್ವರೀತಿಯಲಿ - ಮರುಳ ಮುನಿಯ || (೧೨೮)

(ಮತಿಗಳುಂ+ಅಂತೆ)(ಬೆಳೆವುವು+ಒಂದು)(ಮನುಜರ+ಅನುದಿನದ)

ಮನಸ್ಸು ಮತ್ತು ಬುದ್ಧಿಶಕ್ತಿಗಳು, ಹಾಗೆಯೇ, ಒಂದು ನಿಯಮ ಮತ್ತು ರೀತಿಯಲ್ಲಿ ಬೆಳೆಯುತ್ತವೆ. ಮನುಷ್ಯರ ಪ್ರತಿನಿತ್ಯದ ಸಂಪರ್ಕ (ಸಂಸರ್ಗ) ಮತ್ತು ಬೌದ್ಧಿ ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ ವಿಕಾಸದಿಂದ ಹೊಸ ತಿಳಿವು ಮತ್ತು ಅಭಿಪ್ರಾಯಗಳು ಒಂದು ಕ್ರಮದಲ್ಲಿ (ಅನುಪೂರ್ವ) ಹುಟ್ಟುತ್ತವೆ.