ಏಕದಿನನೇಕಗಳನಾಗಿಪುದು ನೈಸರ್ಗ |
ಏಕತೆಗನೇಕಗಳ ಮರಳಿಪನು ಪುರುಷಂ ||ಲೋಕ ಸಂಸೃತಿಗೆ ನಾನಾತ್ವ ಮುಕ್ತಿಗಭೇದ |
ಸಾಕಲ್ಯ ಮತಿಯೆ ಪಥ - ಮರುಳ ಮುನಿಯ || (೧೯೨)
(ಏಕದಿನ್+ಅನೇಕಗಳನ್+ಆಗಿಪುದು)(ಏಕತೆಗೆ+ಅನೇಕಗಳ)(ಮುಕ್ತಿಗೆ+ಅಭೇದ)
ಪ್ರಕೃತಿಯು ಒಂದರಿಂದ ಅನೇಕಗಳನ್ನು ಮಾಡುತ್ತದೆ. ಪುರುಷನು ತನ್ನ ಶಕ್ತಿಯಿಂದ ಈ ಅನೇಕಗಳನ್ನು ಪುನಃ ಹಿಂದಿರುಗಿಸುತ್ತಾನೆ. ಈ ಪ್ರಪಂಚದ ಜೀವನಕ್ಕೆ ನಾನಾ ರೂಪಗಳಿಂದ ಮುಕ್ತಿ ಹೊಂದುವ ವ್ಯತ್ಯಾಸಗಳು ಇವೆ. ಪರಿಪೂರ್ಣತೆಯ ಜ್ಞಾನಮಾರ್ಗವೇ ಇದಕ್ಕೆ ತಕ್ಕ ದಾರಿ.
No comments:
Post a Comment