ನಾನು ನಾನೆನ್ನುತಿಹನಾರು? ನೀನೊರ‍್ವನೇಂ? |
ಲೀನರಲ್ಲವೆ ನಿನ್ನೊಳೆಲ್ಲ ಪೂರ್ವಿಕರು? ||
ಅನ್ನವಿಡುವರಿವೀವ ಬಾಳಿಸುವರೆಲ್ಲರುಂ |
ಪ್ರಾಣದೊಳವೊಗದಿಹರೆ - ಮರುಳ ಮುನಿಯ || (೭೩೦)
(ನಾನ್+ಎನ್ನುತ+ಇಹನ್+ಆರು)(ನೀನ್+ಒರ‍್ವನೇಂ)(ಅನ್ನ+ಇಡುವ+ಅರಿವು+ಈವ)(ಬಾಳಿಸುವರ್+ಎಲ್ಲರುಂ)(ಪ್ರಾಣದ+ಒಳು+ವೊಗದೆ+ಇಹರೆ)
"ನಾನು ನಾನು" ಎನ್ನುತ್ತಿರುವವರು ಯಾರು? ನೀನು ಒಬ್ಬನೇ ಏನು? ನಿನ್ನ ಒಳಗಡೆ ನಿನ್ನ ಪೂರ್ವಿಕರೆಲ್ಲರೂ ಸೇರಿಕೊಂಡಿಲ್ಲವೇನು? ಅನ್ನವನ್ನು ಇಟ್ಟು, ತಿಳುವಳಿಕೆಯನ್ನು ನೀಡಿ, ನೀನು ಜೀವನವನ್ನು ನಡೆಸುವಂತೆ ಮಾಡುವವರೆಲ್ಲರೂ ನಿನ್ನ ಪ್ರಾಣದೊಳಗೆ ಸೇರಿ ಕೊಂಡಿರದಿರುವರೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Who is it who says I, I and I? Is it you alone?
Don’t all your ancestors remain merged in you?
Won’t all those who feed and bless you with knowledge
And help you to live, enter into your soul? – Marula Muniya (730)
(Translation from "Thus Sang Marula Muniya" by Sri. Narasimha Bhat)