ಧರಣಿ ತರಣಿಗಳ
ಗತಿಕ್ಲ್‍ಪ್ತವೆನುವವೊಲಿಹುದು |
ಚಲಿಸುತಿರಲವರ ಬಲ
ವೆಯವಾಗದಿಹುದೇಂ? ||ಕರಗುವುದವರ‍್ಗಳೊಡಲವರಡಿಗಳದುರುವುವು |
ಕೊರೆಯಾರಿಗದರಿಂದೆ? - ಮರುಳ ಮುನಿಯ || (೩೩೦)
(ಕ್ಲ್‍ಪ್ತ+ಎನುವವೊಲ್+ಇಹುದು)(ಚಲಿಸುತಿರಲ್+ಅವರ)(ವೆಯ+ಆಗದೆ+ಇಹುದೇಂ)(ಕರಗುವುದು+ಅವರ‍್ಗಳ+ಒಡಲು+ಅವರ+ಅಡಿಗಳ್+ಅದುರುವುವು)
ಭೂಮಿ(ಧರಣಿ) ಮತ್ತು
ಸೂರ್ಯ(ತರಣಿ)ರುಗಳ ಚಲನೆಗಳು ಒಂದು ನಿಗದಿಯಾದ ವ್ಯವಸ್ಥೆಗೆ ಮತ್ತು ಮಿತ ಜ್ಞಾನಕ್ಕೆ
ಒಳಪಟ್ಟಿರುವೆಂತಿದೆ. ಆದರೂ ಅವುಗಳು ಚಲಿಸುತ್ತಿರುವಾಗ ಅವರುಗಳ ಶಕ್ತಿಯು ಖರ್ಚಾ(ವೆಯ)ಗದೆ
ಇರುವುದೇನು? ಅವರ ದೇಹಗಳು ಕರಗಿಹೋಗುತ್ತವೆ ಮತ್ತು ಅವರ ಪಾದಗಳು ನಡಗುವುವು. ಇದರಿಂದ ಯಾರಿಗೆ
ಕೊರತೆ ಅಥವಾ ನ್ಯೂನತೆಗಳುಂಟಾಗುತ್ತವೆ?
(ಕೃಪೆ: ಶ್ರೀ.
ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")The movements of the earth and the sun seem to be regular and prompt
Would not their energy get spent as they go on moving?
Their bodies may melt and their feet mat falter,
Who will be the loser on this account? – Marula Muniya
(Translation from "Thus Sang Marula Muniya" by Sri. Narasimha Bhat)
No comments:
Post a Comment