ಅರ್ಧಾರ್ಧರುಚಿಗಳಿಂ
ಕಣ್ಮನಂಗಳ ಕೆಣಕು- |
ತುದ್ಯಮಂಗಳ ಗೆಯ್ಸಿ
ಮನುಜನಿಂ ಪ್ರಕೃತಿ ||ಬದ್ಧನಂಗೆಯ್ವಳುಳಿದರ್ಧಮಂ ಕೆಣಕಿಪಳು |
ವೃದ್ಧಿಯಿಂತವಳ ಸಿರಿ - ಮರುಳ ಮುನಿಯ || (೩೩೭)
(ಅರ್ಧ+ಅರ್ಧ+ರುಚಿಗಳಿಂ)(ಕಣ್+ಮನಂಗಳ)(ಕೆಣಕುತ+ಉದ್ಯಮಂಗಳ) (ಬದ್ಧನಂ+ಗೆಯ್ವಳು+ಉಳಿದ+ಅರ್ಧಮಂ)(ವೃದ್ಧಿಯಿಂತು+ಅವಳ)
ಪ್ರಕೃತಿಯ ಅರ್ಧಂಬರ್ಧ
ಸವಿಗಳಿಂದ ಕಣ್ಣು ಮತ್ತು ಮನಸ್ಸುಗಳನ್ನು ಕೆರಳಿಸುತ್ತ, ಕೆಲಸಗಳಲ್ಲಿ (ಉದ್ಯಮಂ) ಅವನನ್ನು
ತೊಡಗಿಸುತ್ತ, ಆ ಕಾರ್ಯದ ಅರ್ಧದಲ್ಲಿ ಅವನನ್ನು ಒಂದು ಕಟ್ಟುಪಾಡಿಗೆ ಒಳಪಡಿಸುತ್ತಾಳೆ.
ಉಳಿದರ್ಧದಲ್ಲಿ ಅವನ ಮನಸ್ಸನ್ನು ಕೆರಳಿಸುತ್ತಾಳೆ. ಅವಳು ತನ್ನ ಸಂಪತ್ತನ್ನು ಈ ರೀತಿಯಾಗಿ
ವೃದ್ಧಿಸಿಕೊಳ್ಳುತ್ತಾಳೆ.
(ಕೃಪೆ: ಶ್ರೀ.
ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Making us taste the first half and tempting our eyes and mind,
Nature encourages us to engage ourselves in varied occupations
Thus she holds in bondage and entices us to taste the other half
So increases Her wealth – Marula Muniya
(Translation from "Thus Sang Marula Muniya" by Sri. Narasimha Bhat)
No comments:
Post a Comment