ಸ್ವಾಂತದಿರ‍್ಕೊರಲೊಂದೆ ಪದವ ಪಾಡುವನಾಗು |
ಸಂತತ ಜಗದ್ಗ್ರಂಥಿ ಸಡಿಲಿದವನಾಗು ||
ಅಂತರಾತ್ಮದಿನಿತರಮೊಂದುಮಿಲ್ಲದನಾಗು |
ಶಾಂತಿಸಂಸ್ಥಿತನಾಗು - ಮರುಳ ಮುನಿಯ || (೭೬೭)
(ಸ್ವಾಂತದ+ಇರ‍್ಕ+ಒರಲ್+ಒಂದೆ)(ಪಾಡುವನ್+ಆಗು)(ಜಗತ್+ಗ್ರಂಥಿ)(ಸಡಿಲಿದವನ್+ಆಗು)(ಅಂತರಾತ್ಮದಿನ್+ಇತರಂ+ಒಂದುಂ+ಇಲ್ಲದನ್+ಆಗು)(ಶಾಂತಿಸಂಸ್ಥಿತನ್+ಆಗು)
ನಿನ್ನ ಮನಸ್ಸಿ(ಸ್ವಾಂತ)ನ ಕೂಗಿನಿಂದ (ಒರಲ್) ಒಂದೇ ಹಾಡನ್ನು ಹಾಡುವನಾಗು. ಸದಾಕಾಲವೂ ಜಗತ್ತಿನ ಒಡನೆ ಇರುವ ಗಂಟುಗಳನ್ನು ಸಡಿಲಿಸಿಕೊಂಡು ಇರು. ನಿನ್ನ ಅಂತರಾತ್ಮವೊಂದನ್ನು ಬಿಟ್ಟು, ಇನ್ಯಾವುದನ್ನೂ ಇಲ್ಲದವನಾಗು. ಸದಾ ನೆಮ್ಮದಿಯ ಸ್ಥಿತಿಯನ್ನು ಹೊಂದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Sing a happy song when you are in yourself and the throat cooperates
Keep all the worldly bonds always loose,
Have nothing else in your indwelling self,
Be ever established in peace – Marula Muniya (767)
(Translation from "Thus Sang Marula Muniya" by Sri. Narasimha Bhat)

No comments:
Post a Comment