ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? |
ಆರು ತನ್ನೇಳ್ಗೆಯನು ತಾನರಿತ ಕುಶಲಂ? ||
ಹೇರದಿರು ನಿನ್ನ ಕಣ್ಗಾಜನಿನ್ನೊರ‍್ವಂಗೆ |
ದಾರಿಯವನದವಂಗೆ - ಮರುಳ ಮುನಿಯ || (೬೮೮)
(ತಾನ್+ಅರಿತನ್+ಇನ್ನೊರ‍್ವನ+ಏಳ್ಗೆಯ)(ತನ್+ಏಳ್ಗೆಯನು)(ಕಣ್+ಗಾಜನು+ಇನ್ನೊರ‍್ವಂಗೆ)(ದಾರಿ+ಅವನದು+ಅವಂಗೆ)
ಇನ್ನೊಬ್ಬನ ಏಳಿಗೆಯ ಬಗೆಯನ್ನು ಯಾವನು ತಿಳಿದುಕೊಂಡಿದ್ದಾನೆ? ಅಥವಾ ತನ್ನ ಉನ್ನತಿಯ ಮಾರ್ಗವನ್ನೇ ತಿಳಿದುಕೊಂಡಿರುವ ಚತುರನು ಯಾರು? ನಿನ್ನ ಉದ್ಧಾರದ ಮಾರ್ಗಗಳೇ ನಿನಗೆ ತಿಳಿಯದಿರುವಾಗ ನಿನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಬೇಡ. ಅವರವರ ದಾರಿ ಅವರವರಿಗೆ ಬಿಟ್ಟಿದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Who knows how to achieve the good of others?
Who knows how to accomplish one’s own good?
Thrust not your eyeglasses on the eyes of others.
Each has his own path marked out for him – Marula Muniya (688)
(Translation from "Thus Sang Marula Muniya" by Sri. Narasimha Bhat)

No comments:
Post a Comment