ಪ್ರಕೃತಿ ಮನುಜನ ಮಾತೆಯವಳುದರ ಹುಳಿಯಾಗೆ |
ವಿಕೃತನಾಗನೆ ಹಸುಳೆಯಂತರಂಗದಲಿ? ||
ಸ್ವಕೃತ ಧರ್ಮದಿನವಂ ಪ್ರಕೃತಿಯಂ ಮೀರ‍್ದಂದು |
ನಿಕೃತಿ ತಪ್ಪುವುದಿಳೆಗೆ - ಮರುಳ ಮುನಿಯ || (೩೪೨)

(ಮಾತೆ+ಅವಳ್+ಉದರ)(ಹುಳಿ+ಆಗೆ)(ವಿಕೃ ತನ್+ಆಗನೆ)(ಹಸುಳೆ+ಅಂತರಂಗದಲಿ)(ಧರ್ ಮದಿನ್+ಅವಂ)(ಮೀರ‍್ದ+ಅಂದು)(ತಪ್ಪುವ ುದು+ಇಳೆಗೆ)
ಪ್ರಕೃತಿಯು ಮನುಷ್ಯನ ತಾಯಿ. ಅವಳ ಜಠರ(ಉದರ)ವು ಹುಳಿಯಾದರೆ, ಅವಳ ಶಿಶು(ಹಸುಳೆ)ವಾದ ಮನುಷ್ಯನು ಒಳಭಾಗದಲ್ಲಿ ವಿಕಾರ(ವಿಕೃತ)ನಾಗದಿರುವನೇನು? ತಾನು ಪಾಲಿಸಿದ ಧರ್ಮದನುಸರಣೆಯಿಂದ, ಅವನು ಪ್ರಕೃತಿಯನ್ನು ದಾಟಿ ಹೋದಾಗ ಭೂಮಿಗೆ (ಇಳೆಗೆ) ವಂಚನೆ(ನಿಕೃತಿ)ಯು ತಪ್ಪುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Nature is man’s mother but won’t the child’s inner system
Become distorted when her womb turns sour?
The world will be out of danger when man rises above his nature
By his own righteous conduct – Marula Muniya (342)
(Translation from "Thus Sang Marula Muniya" by Sri. Narasimha Bhat)

No comments:
Post a Comment