ಪದನೃತ್ತಗತಿಗುಂಟು
ಕಾಲಯತಿಲಯ ನಿಯತಿ |
ವದನರುಚಿಗುಂಟೆ
ನಿಯಮಕ್ರಮ ನಿಬಂಧಂ ? ||ವಿಧಿಯುಂ ವಿಪರ‍್ಯಯಮುವೊಂದಿರ‍್ಪನಟನದಲಿ |
ವಿದಿತವಾರ‍್ಗದರಾಳ - ಮರುಳ ಮುನಿಯ || (೩೫೨)
(ಗತಿಗೆ+ಉಂಟು)(ಕಾಲ+ಯತಿ+ಲಯ)(ರುಚಿಗೆ+ಉಂಟೆ)(ವಿಪರ‍್ಯಯಮುಂ+ಒಂದಿರ‍್ಪ)(ವಿದಿತ+ಆರ‍್ಗೆ+ಅದರ+ಆಳ)
ನರ್ತನದ ಹೆಜ್ಜೆ(ಪದ)ಯ
ನಡಿಗೆಗೆ, ಸಮಯ, ನಿಲುಗಡೆ ಮತ್ತು ಲಯದ ನಿಯಮಗಳಿವೆ. ಆದರೆ ಬಾಯಿರುಚಿಗೂ ಸಹ ನಿಯಮ ಕ್ರಮ ಮತ್ತು
ಕಟ್ಟುಪಾಡುಗಳಿವೆಯೋ? ವಿಧಿ ಮತ್ತು ವಿಪರ್ಯಾಸಗಳೆರಡೂ ಒಂದಾಗಿರುವ ನರ್ತನದಲ್ಲಿ ಅವುಗಳ ಆಳವು
ಯಾರಿಗೆ ತಿಳಿಯುತ್ತದೆ?
(ಕೃಪೆ: ಶ್ರೀ.
ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
There are rules governing time, pause
and rhythm in dance
But are there rules and restrictions
in tastes and gluttony?Who can understand the deep meaning of the dance in which
Fate joins hands with unruly perversions – Marula Muniya (352)
(Translation from "Thus Sang Marula Muniya" by Sri. Narasimha Bhat)
No comments:
Post a Comment