ತೆರಪೆಲ್ಲಿ ಕಾಲದಲಿ?
ಬಿಡುವೆಲ್ಲಿ ಸೃಷ್ಟಿಯಲಿ |
ಮರಣ ಜನನಗಳು
ಸುಖದುಃಖಗಳು ಸುಕೃತ ||ದುರಿತಗಳು ವಾಂಛೆ ಪ್ರಯತ್ನಗಳೀಯೆಂಟು - |
ಮಿರದಿರೆ ಕ್ಷಣವುಂಟೆ ? - ಮರುಳ ಮುನಿಯ || (೩೪೭)
(ತೆರಪು+ಎಲ್ಲಿ)(ಬಿಡುವು+ಎಲ್ಲಿ)(ಪ್ರಯತ್ನಗಳು+ಈ+ಎಂಟುಂ+ಇರದೆ+ಇರೆ)
ಕಾಲಕ್ಕೆ
ವಿರಾಮ(ತೆರಪು) ಎಲ್ಲಿದೆ? ಹಾಗೆಯೇ ಸೃಷ್ಟಿಯ ಕೆಲಸಕ್ಕೂ ಸಹ ಬಿಡುವೆಲ್ಲಿದೆ? ಹುಟ್ಟು ಮತ್ತು
ಸಾವುಗಳು, ಸಂತೋಷ ಮತ್ತು ನೋವುಗಳು, ಪುಣ್ಯಕಾರ್ಯಗಳು, ಪಾಪ (ದುರಿತ) ಕರ್ಮಗಳು, ಆಸೆಗಳು (ವಾಂಛೆ)
ಮತ್ತು ಪ್ರಯತ್ನಗಳು, ಈ ಎಂಟು ಕರ್ಮಗಳು ಸ್ತಬ್ಧವಾಗಿ ಅರೆಕ್ಷಣವಾದರೂ ಇರುವುದು
ಉಂಟೇ?
(ಕೃಪೆ: ಶ್ರೀ.
ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")Where is interlude in time, where leisure in creation?
Is there a single moment without these eight?
Births and deaths, happiness and sorrow, fortunes
And misfortunes desire and Endeavour? – Marula Muniya (347)
(Translation from "Thus Sang Marula Muniya" by Sri. Narasimha Bhat)
No comments:
Post a Comment