ಚಪ್ಪರವ ಪಿಡಿಯದಿಹ
ಬಳ್ಳಿಕರಡಾಗಿ ನೆಲ - |
ವಪ್ಪಿ
ಹೂಕಾಯ್ಬಿಡದವೊಲ್ ನರಂ ತನ್ನ ||ದುರ್ಬಲದಿ ಸಾಕಾರದೈವಬಲವರಸದಿರೆ |
ತಬ್ಬಲಿವೊಲಳುತಿಹನೊ - ಮರುಳ ಮುನಿಯ || (೩೪೪)
(ಪಿಡಿಯದೆ+ಇಹ)(ನೆಲ+ಅಪ್ಪಿ)(ಹೂಕಾಯಿ+ಬಿಡದವೊಲ್)(ಸಾಕಾರ+ದೈವಬಲವ+ಅರಸದೆ+ಇರೆ)
(ತಬ್ಬಲಿವೊಲ್+ಅಳುತಿಹನೊ)
ನೆಲದಲ್ಲಿ ಬೆಳೆದಿರುವ
ಲತೆಯು ಚಪ್ಪರವನ್ನು ಗಟ್ಟಿಯಾಗಿ ಅಪ್ಪಿಕೊಳ್ಳದೆ ಒಣಗಿ ಬಡಕಲಾಗಿ (ಕರಡಾಗಿ) ನೆಲವನ್ನೇ
ಅಪ್ಪಿಕೊಂಡು, ಹೂ ಮತ್ತು ಕಾಯಿಗಳು ಬಿಡದಿರುವಂತೆ, ಮನುಷ್ಯನು ತನ್ನ ಬಲಹೀನತೆಯಿಂದ ಪಾರಾಗಲು,
ಸಾಕಾರವಾಗಿರುವ ದೈವಶಕ್ತಿಯನ್ನು ಹುಡುಕಿ ಆಶ್ರಯಿಸದಿದ್ದಲ್ಲಿ, ತಾಯಿ, ತಂದೆಯರುಗಳಿಲ್ಲದಿರುವ
ತಬ್ಬಲಿಯಂತೆ ಗೋಳಾಡುತ್ತಾ ಇರುತ್ತಾನೆ ಅಷ್ಟೆ.
(ಕೃಪೆ: ಶ್ರೀ.
ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
The creeper that doesn’t rise up and spread on the trellis above
Bites the dust and fails to yield flowers and fruits and likewise
The weak human being who doesn’t seek the God with forms
Wails like an orphan – Marula Muniya (344)
(Translation from "Thus Sang Marula Muniya" by Sri. Narasimha Bhat)
No comments:
Post a Comment