ಮರದ ತುದಿಯಲ್ಲಿ ತನ್ನ ಕೈಗೆಟುಗದಿಹ ಹೂವ - |
ನರುಮೆ ಕಣ್ಣಿಂ ನೋಡಿ ನಲೆಯೆ ಕಲಿತವನು ||
ಕಿರಿಮೊಗ್ಗು ನೆರೆದರಳುವುದನೋಡಿ ಸುಯ್ವವನು |
ಗುರುವಾಗಿರಲಿ ನಿನಗೆ - ಮರುಳ ಮುನಿಯ || (೩೭೭)
(ಕೈಗೆ+ಎಟುಗದೆ+ಇಹ)(ಹೂವನ್+ಅರುಮೆ)( ನೆರೆದು+ಅರಳುವುದ+ನೋಡಿ)(ಸುಯ್ವ+ಅವನ ು)
ಒಂದು ಮರದ ತುದಿಯಲ್ಲಿ ತನ್ನ ಕೈಗೆ ಸಿಗದಿರುವಂತೆ ಬಿಟ್ಟಿರುವ ಹೂವನ್ನು ಪ್ರೀತಿ(ಅರುಮೆ)ಯ ಕಣ್ಣುಗಳಿಂದ ಕಂಡು ಸಂತೋಷಿಸುವುದನ್ನು ತಿಳಿದುಕೊಂಡವನು ಮತ್ತು ಚಿಕ್ಕ ಮೊಗ್ಗುಗಳು ಗಿಡದಲ್ಲಿ ತುಂಬಿಕೊಂಡು ಅರಳುವುದನ್ನು ವೀಕ್ಷಿಸಿ ಉಸಿರು ಬಿಡುವವನು, ನಿನಗೆ ಗುರುವಾಗಿರಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Accept the one who dances in the joy on seeing the flowers on tree tops
With admiring eyes even though they are unreachable
And the one who breathes in joy on seeing the blossoming buds
As your Preceptor – Marula Muniya
(Translation from "Thus Sang Marula Muniya" by Sri. Narasimha Bhat)
ನರುಮೆ ಕಣ್ಣಿಂ ನೋಡಿ ನಲೆಯೆ ಕಲಿತವನು ||
ಕಿರಿಮೊಗ್ಗು ನೆರೆದರಳುವುದನೋಡಿ ಸುಯ್ವವನು |
ಗುರುವಾಗಿರಲಿ ನಿನಗೆ - ಮರುಳ ಮುನಿಯ || (೩೭೭)
(ಕೈಗೆ+ಎಟುಗದೆ+ಇಹ)(ಹೂವನ್+ಅರುಮೆ)(