ನಿಯಮಂಗಳೆನಿತೆನಿತೊ ಸೃಷ್ಟಿಚರ್ಯೆಯೊಳಿಹುವು |
ಆಯಮಂಗಳುಂ ನಿಯಮಗಳ ಮೀರ‍್ದುವಂತು ||
ಸ್ವಯಮುತ್ಥ ನಿಯಮಾಯಮಪ್ರಚಯವೀಜಗವು |
ಸ್ಮಯಕಾರಿಯದರಿಂದೆ - ಮರುಳ ಮುನಿಯ || (೫೩೫)
(ನಿಯಮಂಗಳ್+ಎನಿತು+ಎನಿತೊ)(ಚರ್ಯೆಯೊಳ್+ಇಹುವು)(ಮೀರ‍್ದುವು+ಅಂತು)(ಸ್ವಯಂ+ಉತ್ಥ)(ನಿಯಮ+ಆಯಮ+ಪ್ರಚಯ+ಈ+ಜಗವು)(ಸ್ಮಯಕಾರಿ+ಅದರಿಂದೆ)
ಸೃಷ್ಟಿಯ ವರ್ತನೆಗಳಲ್ಲಿ ಬೇಕಾದಷ್ಟು ನಿಯಮಗಳಿವೆ. ಇವುಗಳಲ್ಲಿ ಹತೋಟಿಗೆ ಸಿಗಲಾರದವು (ಅಯಮ) ನಿಯಮಗಳನ್ನು ಮೀರಿ ಇವೆ. ತಾನಾಗಿ ತಾನೇ ಉದ್ಭವಿಸಿದ (ಸ್ವಯಮುತ್ಥ) ಕಟ್ಟಲೆಗೊಳಗಾದ ಮತ್ತು ಹತೋಟಿಗಳನ್ನು ಮೀರಿದ ಸಮೂಹ(ಪ್ರಚಯ)ಗಳಿಂದ ಕೂಡಿದ ಪ್ರಪಂಚವಿದು. ಆದಕಾರಣ ಈ ಜಗತ್ತು ಆಶ್ಚರ್ಯಕರವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Rules governing the functioning of Nature are numerous
Equally numerous are the transgressions of such rules
This world is spontaneous combination of such rules and their violations
This world therefore is a wonder of wonders – Marula Muniya
(Translation from "Thus Sang Marula Muniya" by Sri. Narasimha Bhat)

No comments:
Post a Comment