Friday, June 28, 2013

ವ್ಯಷ್ಟಿಮೌಲ್ಯವ ಮರೆಯದಿರ‍್ಪ ರಾಷ್ಟ್ರಸಮಷ್ಟಿ (453)

ವ್ಯಷ್ಟಿಮೌಲ್ಯವ ಮರೆಯದಿರ‍್ಪ ರಾಷ್ಟ್ರಸಮಷ್ಟಿ |
ರಾಷ್ಟ್ರಋಣವನು ಮರೆಯದಾ ಪ್ರಜಾ ವ್ಯಷ್ಟಿ ||
ನಷ್ಟಬರೆ ಶಿಷ್ಟಿ ಲಾಭವದೆಂಬ ಸಮದೃಷ್ಟಿ |
ತುಷ್ಟಿಕರವೋ ಜಗಕೆ - ಮರುಳ ಮುನಿಯ || (೪೫೩)

(ಮರೆಯದೆ+ಇರ‍್ಪ)(ಮರೆಯದ+ಆ)(ಲಾಭ+ಅದು+ಎಂಬ)

ಬಿಡಿಮನುಷ್ಯನ ಬೆಲೆಯನ್ನು ಮರೆಯದಿರುವುದಕ್ಕೆ ದೇಶದ ಸಾಮೂಹಿಕ ವ್ಯವಸ್ಥೆಯ ಪ್ರತೀಕ. ಹಾಗೆಯೇ ರಾಷ್ಟ್ರದ ಋಣವನ್ನು ಮರೆಯದಿರುವಂತಹುದು ದೇಶದ ಪ್ರಜಾಲಕ್ಷಣ. ವ್ಯವಸ್ಥೆಯಲ್ಲಿ ನಷ್ಟವುಂಟಾದಾಗ ಅದು ಸತ್ಪ್ರಯೋಜನಕಾರಿ ಎಂಬ ಸಮತಾದೃಷ್ಟಿ. ಇವು ಜಗತ್ತಿಗೆ ತೃಪ್ತಿಯನ್ನು ಕೊಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The body politic that does not forget the values of the individuals
The individuals who don’t forget their national obligations
The balanced view that the balance remaining after the loss itself is profit
Are all conducive to the welfare of the world – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 27, 2013

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ (452)

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ |
ಒಳಕೀಲಿನೆಸಕವದು ಸೃಷ್ಟಿ ಸತ್ತ್ವವದು ||
ಮಳೆ ಬಿಸಿಲು ಹೊರಗೆ ವಿಲಿವಿಲಿ ಮಿಡಿತ ತನುವೊಳಗೆ |
ಕಲೆಯ ರಚನೆಯೊ ಜಂತು - ಮರುಳ ಮುನಿಯ || (೪೫೨)

(ಮೇಲ್+ಉಸಿರು+ಊದು)(ಮುದುರಿಕೊಳ್ಳುವುದು+ಒಡನೆ)(ಒಳಕೀಲಿನ+ಎಸಕ+ಅದು)(ಸತ್ತ್ವ+ಅದು)

ಚಲಿಸುತ್ತಿರುವ ಒಂದು ಹುಳುವಿನ ಮೇಲೆ ನಾವು ನಮ್ಮ ಉಸಿರನ್ನು ಊದಿದರೆ, ಅದು ತಕ್ಷಣವೇ ಮುದುರಿಕೊಳ್ಳುತ್ತದೆ. ಇದನ್ನು ಮಾಡಿಸುವುದು ಅದರೊಳಗಿರುವ ಕೀಲುಗಳ ಕೆಲಸ. ಸೃಷ್ಟಿಯಲ್ಲಿರುವ ತಿರುಳು ಅದು. ಹೊರಗಡೆ ಮಳೆ ಮತ್ತು ಬಿಸಿಲುಗಳಿದ್ದರೂ ಸಹ ದೇಹದೊಳಗೆ ವಿಲಿವಿಲಿ ತುಡಿತಗಳಿರುತ್ತವೆ. ಪ್ರಾಣಿಯು ಸೃಷ್ಟಿಯ ಕುಶಲಕಲೆಯ ರಚನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If you blow your breath on a worm, it immediately shrinks
It is the mechanism of its internal livers which is the power of nature
Rain and sun outside and convulsive pulsations within
Every creature is a work of art – Marula Muniya

(Translation from "Thus Sang Marula Muniya" by Sri. Narasimha Bhat)

Wednesday, June 26, 2013

ಪ್ರತ್ಯೇಕದ ವ್ಯಕ್ತಿ ಲೋಕಸಂಸರ್ಗದಲಿ (451)

ಪ್ರತ್ಯೇಕದ ವ್ಯಕ್ತಿ ಲೋಕಸಂಸರ್ಗದಲಿ |
ಬಿತ್ತೆ ಸ್ವಭಾವಜವನಿತರ ವೆಕ್ತಿಗಳೊಳ್ ||
ಮತ್ತೊಂದು ಪ್ರತ್ಯೇಕದ ವ್ಯಕ್ತಿಯಂತು ಜಗ |
ಪ್ರತ್ಯೇಕಗಳ ಜಡೆಯೊ -ಮರುಳ ಮುನಿಯ || (೪೫೧)

(ಸ್ವಭಾವಜ+ಅವನ್+ಇತರ)(ವೆಕ್ತಿಗಳ್+ಒಳ್)

ಈ ರೀತಿಯಾಗಿ ಬಿಡಿ ವ್ಯಕ್ತಿಗೆ ಜಗತ್ತಿನ ಜೊತೆ ಸಂಬಂಧ ಉಂಟಾದಾಗ, ಅವನ ಗುಣಗಳನ್ನು ಬೇರೆ ಜನಗಳೊಳಗೆ ಬಿತ್ತಿದ್ದಲ್ಲಿ, ಇನ್ನೊಂದು ಬಿಡಿ ವ್ಯಕ್ತಿಯ ಉತ್ಪಾದನೆಯಾಗುತ್ತದೆ. ಜಗತ್ತು ಈ ರೀತಿ ಬಿಡಿ ವ್ಯಕ್ತಿಗಳಿಂದ ಕೂಡಿಕೊಂಡ ಸರಣಿ (ಜಡೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When different individuals come into contact with one another in the world
Each individual may sow the seeds of his own traits in others
A separate individual comes into being then
This world is so a plait of many straws of hair – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 25, 2013

ಸೃಷ್ಟಿಯಲಿ ಜಾತಿಗಳು ಜಾತಿಯೊಳ್ ವ್ಯಕ್ತಿಗಳು (450)

ಸೃಷ್ಟಿಯಲಿ ಜಾತಿಗಳು ಜಾತಿಯೊಳ್ ವ್ಯಕ್ತಿಗಳು |
ವ್ಯಷ್ಟಿಯೊಳಗಂಗಂಗಳಂತು ಭೇದಗಳು ||
ಸ್ಪಷ್ಟತ್ರಿವಿಧಗಳಲಿ ನೀನದನು ತೊರೆದಂದು |
ಶಿಷ್ಟವಿರ‍್ಪುದು ತತ್ತ್ವ - ಮರುಳ ಮುನಿಯ || (೪೫೦)

(ವ್ಯಷ್ಟಿಯೊಳಗೆ+ಅಂಗಂಗಳ್+ಅಂತು)(ನೀನ್+ಅದನು)(ತೊರೆದ+ಅಂದು)

ಪರಮಾತ್ಮನ ಸೃಷ್ಟಿಯಲ್ಲಿ ಬೇರೆ ಬೇರೆ ವರ್ಗಗಳಿವೆ. ಅವುಗಳಲ್ಲಿ ವ್ಯಕ್ತಿಗಳಿದ್ದಾರೆ. ಬಿಡಿ ವ್ಯಕ್ತಿಗಳ ಪ್ರತಿಯೊಂದು ಅವಯವಗಳಲ್ಲೂ ವ್ಯತ್ಯಾಸವನ್ನು ಕಾಣುತ್ತೇವೆ. ನಿಶ್ಚಿತವಾದ ಮೂರು ವಿಧಗಳಲ್ಲಿ ನೀನು ಅದನ್ನು ತ್ಯಜಿಸಿದಾಗ ಸ್ಥಿರವಾಗಿ ಉಳಿದಿರುವುದೇ ತತ್ತ್ವ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Many classes are in creation and many individuals in each class
Even in one individual his body organs are different
If one can renounce the differences in thought, word and deed
Truth Absolute will alone remain then – Marula Muniya
(Translation from "Thus Sang Marula Muniya" by Sri. Narasimha Bhat)

Monday, June 24, 2013

ತತ್ತ್ವವೇಕವದೇಕನೇಕವೀಸೃಷ್ಟಿಯಲಿ? (449)

ತತ್ತ್ವವೇಕವದೇಕನೇಕವೀಸೃಷ್ಟಿಯಲಿ? |
ವೆರ‍್ತವೇನಲ್ಲ ರುಚಿರೂಪನಾನಾತ್ವ ||
ವ್ಯಕ್ತಿಗುಣ ವೈವಿಧ್ಯವಿರದಂದು ಲೋಕದಲಿ |
ರಿಕ್ತವಾಗದೆ ಬಾಳು - ಮರುಳ ಮುನಿಯ || (೪೪೯)

(ತತ್ತ್ವವು+ಏಕ+ಅದು+ಏಕೆ+ಅನೇಕ+ಈ+ಸೃಷ್ಟಿಯಲಿ)(ವೆರ‍್ತ+ಏನ್+ಅಲ್ಲ)(ವೈವಿಧ್ಯ+ಇರದಂದು)(ರಿಕ್ತ+ಆಗದೆ)

ತತ್ತ್ವವು ಒಂದೇ ಒಂದಾದರೂ ಅದು ಸೃಷ್ಟಿಯಲ್ಲಿ ಏಕೆ ಅನೇಕವಾಗಿ ಕಾಣುತ್ತವೆ? ನಾನಾ ವಿಧವಾದ ಆಕಾರ ಮತ್ತು ಸವಿಗಳು ವ್ಯರ್ಥವೇನೂ ಅಲ್ಲ. ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಬೇರೆ ಬೇರೆ ವಿಧವಾದ ಸ್ವಭಾವಗಳಿಲ್ಲದಿದ್ದಂದು ಬಾಳು ಶೂನ್ಯ(ರಿಕ್ತ)ವಾಗುವುದಿಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why does the one Truth appear as many in creation?
The variety of tastes and forms in the world is no waste,
Won’t life in the world be poorer in the absence of
Individual differences in talents and traits – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 20, 2013

ವ್ಯಷ್ಟಿವಿಕಸನ ಹೂವು ಕುಲರಾಷ್ಟ್ರಲೋಕಸಂ (448)

ವ್ಯಷ್ಟಿವಿಕಸನ ಹೂವು ಕುಲರಾಷ್ಟ್ರಲೋಕಸಂ - |
ಸೃಷ್ಟಿಗಳು ಬೇರು ಧಾರ್ಮಿಕಜೀವತರುಗೆ ||
ಪುಷ್ಪಂ ವಿವೇಕದಿಂ ಸೃಷ್ಟಿಕುಟಿಲಾತಿಗಂ |
ನಿಷ್ಠವದು ಬೊಮ್ಮದಲಿ - ಮರುಳ ಮುನಿಯ || (೪೪೮)

(ಕುಟಿಲ+ಅತಿಗಂ)(ನಿಷ್ಠ+ಅದು)

ಧಾರ್ಮಿಕ ಜೀವನವೆಂಬ ಮರಕ್ಕೆ ಬಿಡಿ ವ್ಯಕ್ತಿಯ ಅರಳುವಿಕೆಯೆ ಹೂವು ಮತ್ತು ಕುಲ, ದೇಶ ಮತ್ತು ಲೋಕದ ಒಳ್ಳೆಯ ಸೃಷ್ಟಿಗಳು ಬೇರುಗಳಾಗುತ್ತವೆ. ಸೃಷ್ಟಿಯ ವಕ್ರತೆಗಳಿಗೆ ನರನ ವಿವೇಕವು ಪುಷ್ಟಿ ಒದಗಿಸಿದರೂ ಆ ವಿವೇಕದ ನೆಲೆ ಪರಬ್ರಹ್ಮನಲ್ಲಿ ನೆಲಸಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Individual development is the flower, community
Nation and the universe are the roots to the plant of righteousness
Individual wisdom enriches creation, even deception
Is faithful to Brahma – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 19, 2013

ನಗುವನಿಗಮಳುವನಿಗಮವಯವಗಳೊಂದೆ ಸಮ (447)

ನಗುವನಿಗಮಳುವನಿಗಮವಯವಗಳೊಂದೆ ಸಮ |
ಮೊಗದ ಗೆರೆ ಕೊರಲ ಸೊಟ್ಟುಗಳನಿತೆ ಭೇದ ||
ಬಗೆಬಗೆಯ ಜನದೊಳೊರ‍್ವನನಿನ್ನದೊರ‍್ವನಿಂ |
ಮಿಗಿಸುಗುಂ ವ್ಯಕ್ತಿತನ - ಮರುಳ ಮುನಿಯ || (೪೪೭)

(ನಗುವನಿಗಂ+ಅಳುವನಿಗಂ+ಅವಯವಗಳು+ಒಂದೆ)(ಸೊಟ್ಟುಗಳ್+ಅನಿತೆ)(ಜನದೊಳ್+ಒರ‍್ವನ್+ಇನ್ನದೊರ‍್ವನಿಂ)

ನಗುತ್ತಿರುವವನಿಗೂ ಮತ್ತು ಅಳುತ್ತಿರುವವನಿಗೂ ಸಮಾನವಾದ ಅಂಗಾಂಗಗಳಿವೆ. ಅದರಲ್ಲಿ ವ್ಯತ್ಯಾಸವೇನಿಲ್ಲ. ಮುಖದ ಗೆರೆ ಮತ್ತು ಗಂಟಲಿನ ಸೊಟ್ಟುಗಳಲ್ಲಿ ಮಾತ್ರ ಸ್ವಲ್ಪ ವ್ಯಾತ್ಯಾಸವಿದೆ. ವಿಧವಿಧವಾದ ಜನಗಳಲ್ಲಿ ಒಬ್ಬನನ್ನು ಇನ್ನೊಬ್ಬನಿಂದ ಪ್ರತ್ಯೇಕಿಸುವುದು ಈ ವ್ಯಕ್ತಿತ್ವದ ವಿಶಿಷ್ಟತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The one who laughs and the one who weeps have similar organs
But the lines of face and the curves of neck differ
The personal traits and talents of each individual
Differ from person to person – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 18, 2013

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ (446)

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ |
ಪುಷ್ಟಿ ವ್ಯಷ್ಟಿಗೆ (ಬಹುದು) ಸಮಷ್ಟಿಬಲದಿಂ ||
ವ್ಯಷ್ಟಿ ಸಾಮಷ್ಟ್ಯಮಿಂತನ್ಯೋನ್ಯಯೋಜಿತಂ |
ತುಷ್ಟಿಯುಭಯಕುಮಿರ್ಕೆ - ಮರುಳ ಮುನಿಯ || (೪೪೬)

(ಸಾಮಷ್ಟ್ಯಂ+ಇಂತು+ಅನ್ಯೋನ್ಯ)(ತುಷ್ಟಿ+ಉಭಯಕುಂ+ಇರ್ಕೆ)

ಬಿಡಿಯಾದ (ವ್ಯಷ್ಟಿ) ವಸ್ತುವಿನ ಪ್ರಯೋಜನ ಒಟ್ಟು ವಸ್ತುಗಳ (ಸಮಷ್ಟಿ) ಉಪಯೋಗದಿಂದಾಗುತ್ತದೆ. ಬಿಡಿಯಾಗಿರುವುದರ ಪೋಷಣೆ ಗುಂಪಾಗಿರುವದರ ಬಲದಿಂದ ಆಗುತ್ತದೆ. ಬಿಡಿಯಾಗಿರುವುದು ಮತ್ತು ಗುಂಪಾಗಿರುವುದು ಈ ರೀತಿಯಾಗಿ ಪರಸ್ಪರ ಹೊಂದಾಣಿಕೆಯಾಗಿರುವಂತೆ ಮಾಡಲಾಗಿದೆ. ಎರಡೂ (ಉಭಯಕುಂ) ಇದ್ದಲ್ಲಿ (ಇರ್ಕೆ) ತೃಪ್ತಿ ಮತ್ತು ಆನಂದ(ತುಷ್ಟಿ)ಗಳಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The good of the community is the rightful fruition of individual life
Social strength nourishes individual growth
The individual and the community are thus interrelated
So that both may enjoy satisfaction – Marula Muniya
(Translation from "Thus Sang Marula Muniya" by Sri. Narasimha Bhat)

Monday, June 17, 2013

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ (445)

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ |
ಸೃಷ್ಟಿಯುಣುವಳು ತಾನೆ ತನ್ನ ಸಂತತಿಯ ||
ಸತ್ತುದೇನ್? ಎಲ್ಲ ಹೊಸ ಬೆಳೆಗೆ ಗೊಬ್ಬರವಾಯ್ತು |
ನಷ್ಟಕೆಡೆಗೊಡಳವಳು - ಮರುಳ ಮುನಿಯ || (೪೪೫)

(ಮೊಟ್ಟೆಗಳನ್+ಇಕ್ಕಿ)(ನುಂಗುವ+ಅಹಿಯಂತೆ)(ಸೃಷ್ಟಿ+ಉಣುವಳು)(ಗೊಬ್ಬರ+ಆಯ್ತು)(ನಷ್ಟಕೆ+ಎಡೆಗೊಡಳ್+ಅವಳು)

ಹೆಣ್ಣುಸರ್ಪ ಮೊಟ್ಟೆಗಳನ್ನಿಡುತ್ತ ಹೋಗುತ್ತದೆ. ಅನಂತರ ತುಂಬ ಹಸಿವಾಗುವುದರಿಂದ ತನ್ನ ಮೊಟ್ಟೆಗಳನ್ನು ತಾನೇ ತಿಂದುಬಿಡುತ್ತದೆ. ಬಿಟ್ಟುಹೋದ ಒಂದೆರಡು ಮೊಟ್ಟೆಗಳಿಂದ ಹಾವಿನ ಕುಲ ಬೆಳೆಯುತ್ತದೆ.

ಮೊಟ್ಟೆಗಳನ್ನು ಒಂದು ಸಾಲಿನಲ್ಲಿಟ್ಟು ನಂತರ ಪುನಃ ಅದೇ ಸಾಲಿನಲ್ಲಿ ವಾಪಸು ಬರುತ್ತಾ ಅಲ್ಲಿರುವ ಬಹುಭಾಗದ ಮೊಟ್ಟೆಗಳನ್ನು ತಿನ್ನುವ ಸರ್ಪ(ಅಹಿ)ದಂತೆ, ಸೃಷ್ಟಿಯೂ ಸಹ ತನ್ನ ಸಂತಾನವನ್ನು ಅದೇ ರೀತಿ ತಿನ್ನುವಳು ತಾನೆ. ಹಾಗಿದ್ದಲ್ಲಿ ಸತ್ತುಹೋಗಿದ್ದು ಯಾವುದು? ಅವು ಹೊಸದಾಗಿ ಬರುವ ಬೆಳೆಗೆ ಗೊಬ್ಬರವಾಯಿತಷ್ಟೆ. ಪ್ರಕೃತಿಯು ಸಂತಾನವು ನಾಶವಾಗುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the serpent the swallows its own eggs
Nature herself eats he own progeny
The dead become manure to the new crop
Nature would never incur any loss – Marula Muniya || (445)
(Translation from "Thus Sang Marula Muniya" by Sri. Narasimha Bhat)

Thursday, June 13, 2013

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ (444)

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ |
ಎದುರಿರದನೆದುರಿಹುದಕೊಂದಿಸುವ ಶಕ್ತಿ ||
ತದಿದಮೆನಿಸುತಲೆಲ್ಲ ದೂರವಳಿಸುವ ಶಕ್ತಿ |
ಚಿದಖಂಡ ಶಕ್ತಿಯೆಲೊ - ಮರುಳ ಮುನಿಯ || (೪೪೪)

(ಇದು+ಎನ್ನುವ)(ನೆನಪಿಗೆ+ಆಗಿಪ)(ಎದುರು+ಇರದನು+ಎದುರು+ಇಹುದಕೆ+ಒಂದಿಸುವ)(ತದಿದಂ+ಎನಿಸುತಲ್+ಎಲ್ಲ)(ದೂರ+ಅಳಿಸುವ)(ಚಿತ್+ಅಖಂಡ)

ವಸ್ತುಗಳನ್ನು ಇವು ಇವೇ ಎಂದು ಗುರಿತಿಸುವುದನ್ನು ನಮಗೆ ಜ್ಞಾಪಿಸುವಂತಹ ಒಂದು ಶಕ್ತಿ. ನಮ್ಮದುರಿಗೆ ಇರದಿರುವುದನ್ನು ನಮ್ಮೆದುರಿಗೆ ಇರುವುದಕ್ಕೆ ಹೋಲಿಸಿ ಹೊಂದಿಸುವ ಒಂದು ಶಕ್ತಿ. ಅದೇ ಇದು (ತದಿದಂ) ಎನ್ನಿಸುತ್ತ ಅವೆರಡಕ್ಕೆ ಅಂತರವನ್ನು ಅಳಿಸುವ ಶಕ್ತಿ. ಇದು ಪರಮಾತ್ಮನ ಪರಿಪೂರ್ಣವಾದ (ಅಖಂಡ) ಶಕ್ತಿ ಕಣಯ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The power that enables one to remember and identify things as that and this
The power that amicably links the seen with the unseen
Power that enables us to identify things as this and this
And eliminates all distances is the Devine Wisdom – Marula Muniya
(Translation from "Thus Sang Marula Muniya" by Sri. Narasimha Bhat)