Thursday, June 13, 2013

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ (444)

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ |
ಎದುರಿರದನೆದುರಿಹುದಕೊಂದಿಸುವ ಶಕ್ತಿ ||
ತದಿದಮೆನಿಸುತಲೆಲ್ಲ ದೂರವಳಿಸುವ ಶಕ್ತಿ |
ಚಿದಖಂಡ ಶಕ್ತಿಯೆಲೊ - ಮರುಳ ಮುನಿಯ || (೪೪೪)

(ಇದು+ಎನ್ನುವ)(ನೆನಪಿಗೆ+ಆಗಿಪ)(ಎದುರು+ಇರದನು+ಎದುರು+ಇಹುದಕೆ+ಒಂದಿಸುವ)(ತದಿದಂ+ಎನಿಸುತಲ್+ಎಲ್ಲ)(ದೂರ+ಅಳಿಸುವ)(ಚಿತ್+ಅಖಂಡ)

ವಸ್ತುಗಳನ್ನು ಇವು ಇವೇ ಎಂದು ಗುರಿತಿಸುವುದನ್ನು ನಮಗೆ ಜ್ಞಾಪಿಸುವಂತಹ ಒಂದು ಶಕ್ತಿ. ನಮ್ಮದುರಿಗೆ ಇರದಿರುವುದನ್ನು ನಮ್ಮೆದುರಿಗೆ ಇರುವುದಕ್ಕೆ ಹೋಲಿಸಿ ಹೊಂದಿಸುವ ಒಂದು ಶಕ್ತಿ. ಅದೇ ಇದು (ತದಿದಂ) ಎನ್ನಿಸುತ್ತ ಅವೆರಡಕ್ಕೆ ಅಂತರವನ್ನು ಅಳಿಸುವ ಶಕ್ತಿ. ಇದು ಪರಮಾತ್ಮನ ಪರಿಪೂರ್ಣವಾದ (ಅಖಂಡ) ಶಕ್ತಿ ಕಣಯ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The power that enables one to remember and identify things as that and this
The power that amicably links the seen with the unseen
Power that enables us to identify things as this and this
And eliminates all distances is the Devine Wisdom – Marula Muniya
(Translation from "Thus Sang Marula Muniya" by Sri. Narasimha Bhat)

2 comments: