Tuesday, June 18, 2013

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ (446)

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ |
ಪುಷ್ಟಿ ವ್ಯಷ್ಟಿಗೆ (ಬಹುದು) ಸಮಷ್ಟಿಬಲದಿಂ ||
ವ್ಯಷ್ಟಿ ಸಾಮಷ್ಟ್ಯಮಿಂತನ್ಯೋನ್ಯಯೋಜಿತಂ |
ತುಷ್ಟಿಯುಭಯಕುಮಿರ್ಕೆ - ಮರುಳ ಮುನಿಯ || (೪೪೬)

(ಸಾಮಷ್ಟ್ಯಂ+ಇಂತು+ಅನ್ಯೋನ್ಯ)(ತುಷ್ಟಿ+ಉಭಯಕುಂ+ಇರ್ಕೆ)

ಬಿಡಿಯಾದ (ವ್ಯಷ್ಟಿ) ವಸ್ತುವಿನ ಪ್ರಯೋಜನ ಒಟ್ಟು ವಸ್ತುಗಳ (ಸಮಷ್ಟಿ) ಉಪಯೋಗದಿಂದಾಗುತ್ತದೆ. ಬಿಡಿಯಾಗಿರುವುದರ ಪೋಷಣೆ ಗುಂಪಾಗಿರುವದರ ಬಲದಿಂದ ಆಗುತ್ತದೆ. ಬಿಡಿಯಾಗಿರುವುದು ಮತ್ತು ಗುಂಪಾಗಿರುವುದು ಈ ರೀತಿಯಾಗಿ ಪರಸ್ಪರ ಹೊಂದಾಣಿಕೆಯಾಗಿರುವಂತೆ ಮಾಡಲಾಗಿದೆ. ಎರಡೂ (ಉಭಯಕುಂ) ಇದ್ದಲ್ಲಿ (ಇರ್ಕೆ) ತೃಪ್ತಿ ಮತ್ತು ಆನಂದ(ತುಷ್ಟಿ)ಗಳಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The good of the community is the rightful fruition of individual life
Social strength nourishes individual growth
The individual and the community are thus interrelated
So that both may enjoy satisfaction – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment