Monday, June 17, 2013

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ (445)

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ |
ಸೃಷ್ಟಿಯುಣುವಳು ತಾನೆ ತನ್ನ ಸಂತತಿಯ ||
ಸತ್ತುದೇನ್? ಎಲ್ಲ ಹೊಸ ಬೆಳೆಗೆ ಗೊಬ್ಬರವಾಯ್ತು |
ನಷ್ಟಕೆಡೆಗೊಡಳವಳು - ಮರುಳ ಮುನಿಯ || (೪೪೫)

(ಮೊಟ್ಟೆಗಳನ್+ಇಕ್ಕಿ)(ನುಂಗುವ+ಅಹಿಯಂತೆ)(ಸೃಷ್ಟಿ+ಉಣುವಳು)(ಗೊಬ್ಬರ+ಆಯ್ತು)(ನಷ್ಟಕೆ+ಎಡೆಗೊಡಳ್+ಅವಳು)

ಹೆಣ್ಣುಸರ್ಪ ಮೊಟ್ಟೆಗಳನ್ನಿಡುತ್ತ ಹೋಗುತ್ತದೆ. ಅನಂತರ ತುಂಬ ಹಸಿವಾಗುವುದರಿಂದ ತನ್ನ ಮೊಟ್ಟೆಗಳನ್ನು ತಾನೇ ತಿಂದುಬಿಡುತ್ತದೆ. ಬಿಟ್ಟುಹೋದ ಒಂದೆರಡು ಮೊಟ್ಟೆಗಳಿಂದ ಹಾವಿನ ಕುಲ ಬೆಳೆಯುತ್ತದೆ.

ಮೊಟ್ಟೆಗಳನ್ನು ಒಂದು ಸಾಲಿನಲ್ಲಿಟ್ಟು ನಂತರ ಪುನಃ ಅದೇ ಸಾಲಿನಲ್ಲಿ ವಾಪಸು ಬರುತ್ತಾ ಅಲ್ಲಿರುವ ಬಹುಭಾಗದ ಮೊಟ್ಟೆಗಳನ್ನು ತಿನ್ನುವ ಸರ್ಪ(ಅಹಿ)ದಂತೆ, ಸೃಷ್ಟಿಯೂ ಸಹ ತನ್ನ ಸಂತಾನವನ್ನು ಅದೇ ರೀತಿ ತಿನ್ನುವಳು ತಾನೆ. ಹಾಗಿದ್ದಲ್ಲಿ ಸತ್ತುಹೋಗಿದ್ದು ಯಾವುದು? ಅವು ಹೊಸದಾಗಿ ಬರುವ ಬೆಳೆಗೆ ಗೊಬ್ಬರವಾಯಿತಷ್ಟೆ. ಪ್ರಕೃತಿಯು ಸಂತಾನವು ನಾಶವಾಗುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the serpent the swallows its own eggs
Nature herself eats he own progeny
The dead become manure to the new crop
Nature would never incur any loss – Marula Muniya || (445)
(Translation from "Thus Sang Marula Muniya" by Sri. Narasimha Bhat)

No comments:

Post a Comment