Wednesday, June 19, 2013

ನಗುವನಿಗಮಳುವನಿಗಮವಯವಗಳೊಂದೆ ಸಮ (447)

ನಗುವನಿಗಮಳುವನಿಗಮವಯವಗಳೊಂದೆ ಸಮ |
ಮೊಗದ ಗೆರೆ ಕೊರಲ ಸೊಟ್ಟುಗಳನಿತೆ ಭೇದ ||
ಬಗೆಬಗೆಯ ಜನದೊಳೊರ‍್ವನನಿನ್ನದೊರ‍್ವನಿಂ |
ಮಿಗಿಸುಗುಂ ವ್ಯಕ್ತಿತನ - ಮರುಳ ಮುನಿಯ || (೪೪೭)

(ನಗುವನಿಗಂ+ಅಳುವನಿಗಂ+ಅವಯವಗಳು+ಒಂದೆ)(ಸೊಟ್ಟುಗಳ್+ಅನಿತೆ)(ಜನದೊಳ್+ಒರ‍್ವನ್+ಇನ್ನದೊರ‍್ವನಿಂ)

ನಗುತ್ತಿರುವವನಿಗೂ ಮತ್ತು ಅಳುತ್ತಿರುವವನಿಗೂ ಸಮಾನವಾದ ಅಂಗಾಂಗಗಳಿವೆ. ಅದರಲ್ಲಿ ವ್ಯತ್ಯಾಸವೇನಿಲ್ಲ. ಮುಖದ ಗೆರೆ ಮತ್ತು ಗಂಟಲಿನ ಸೊಟ್ಟುಗಳಲ್ಲಿ ಮಾತ್ರ ಸ್ವಲ್ಪ ವ್ಯಾತ್ಯಾಸವಿದೆ. ವಿಧವಿಧವಾದ ಜನಗಳಲ್ಲಿ ಒಬ್ಬನನ್ನು ಇನ್ನೊಬ್ಬನಿಂದ ಪ್ರತ್ಯೇಕಿಸುವುದು ಈ ವ್ಯಕ್ತಿತ್ವದ ವಿಶಿಷ್ಟತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The one who laughs and the one who weeps have similar organs
But the lines of face and the curves of neck differ
The personal traits and talents of each individual
Differ from person to person – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment