ಓಟದಲಿ ಚಂಡು ನೆಗೆದತ್ತಿತ್ತ ತಿರುಗದಿರೆ |
ಏಟುಪೋಟುಗಳಾಡುವರ‍್ಗೆ ತಾಕದಿರೆ ||
ಆಟದಲಿ ರುಚಿಯೇನು ನೋಟದಲಿ ಸೊಗವೇನು |
ಕೋಟಲೆಯೆ ಸವಿ ಬಾಳ್ಗೆ - ಮರುಳ ಮುನಿಯ || (೪೩೮)
(ನೆಗೆದು+ಅತ್ತಿತ್ತ)(ತಿರುಗದೆ+ಇರೆ)(ಏಟುಪೋಟುಗಳು+ಆಡುವರ‍್ಗೆ)(ತಾಕದೆ+ಇರೆ)
ಆಟ ಆಡುವಾಗ ಚೆಂಡು ನೆಗೆದು ಅತ್ತಿತ್ತ ಓಡಾಡದಿದ್ದಲ್ಲಿ, ಮತ್ತು ಆಟಗಾರರಿಗೆ ಹೊಡೆತಗಳು ತಾಗದಿದ್ದಲ್ಲಿ, ಅಂತಹ ಆಟದಲ್ಲಿ ಯಾವುದೇ ವಿಧವಾದ ಸವಿ ಮತ್ತು ರುಚಿಗಳು ಇರಲಾರವು ಮತ್ತು ಅದನ್ನು ವೀಕ್ಷಿಸುವವರಿಗೆ ಅದರಲ್ಲಿ ಸುಖ ಮತ್ತು ಚೆಲುವುಗಳು ಕಂಡುಬರುವುದಿಲ್ಲ. ತೊಂದರೆ (ಕೋಟಲೆ) ಮತ್ತು ಹಿಂಸೆಗಳಿಂದಲೇ ಜೀವನಕ್ಕೆ ಒಂದು ರುಚಿ ಮತ್ತು ಸೊಗಸು ಬರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
If the ball doesn’t bounce and toss in different directions,
If the players remain perfectly unhurt
Where is the thrill in the game and what fascination is there to the spectators?
Trials and tribulations make life sweet – Marula Muniya
(Translation from "Thus Sang Marula Muniya" by Sri. Narasimha Bhat)

No comments:
Post a Comment