Thursday, June 6, 2013

ಮೂಲದಲಿ ಸತ್ ಒಂದು ಮೇಲ್ಮೇಲೆ ನೂರ‍್ಕೋಟಿ (439)

ಮೂಲದಲಿ ಸತ್ ಒಂದು ಮೇಲ್ಮೇಲೆ ನೂರ‍್ಕೋಟಿ |
ಆಳದಲಿ ಸ್ವಚ್ಛ ಮೇಳ್ದರ ಚಿತ್ರ ಶಬಲ ||
ಕ್ಷ್ವೇಲ ಸುಧೆಗಳ ಬೆರಕೆಯದೆ ಸಾಲು ಜೀವನವು |
ಬಾಳಕಳೆ ಸುಧೆಯಾಗ - ಮರುಳ ಮುನಿಯ || (೪೩೯)

ಸದ್ವಸ್ತುವಾಗಿರುವ ಅದು ಮೂಲದಲ್ಲಿ ಒಂದೇ ಒಂದು ವಸ್ತುವಾದರೂ ಸಹ ಪ್ರಪಂಚದ ಜೀವಿತದಲ್ಲಿ ನೂರಾರು ಕೋಟಿ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂತರಾಳದಲ್ಲಿ ಅದು ನಿರ್ಮಲವಾಗಿ ತಿಳಿಯಾಗಿರುತ್ತದೆ. ಆದರೆ ಕೂಡಿ ಕಂಡಾಗ ಅದರ ಚಿತ್ರವು ಮಿಶ್ರವರ್ಣವಾಗಿ (ಶಬಲ) ಕಂಡುಬರುತ್ತದೆ. ವಿಷ(ಕ್ಷ್ವೇಲ) ಮತ್ತು ಅಮೃತಗಳ ಮಿಶ್ರಣದ ಸಾಲುಗಳೇ ಈ ಜೀವನ. ಬಾಳನ್ನು ಸವೆಸಿದಾಗ ಅಮೃತ(ಸುಧೆ)ವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Truth is one at the bottom but hundred crores above,
It’s clear at the bottom but multicoloured on the surface
Our life is a mixture of poison and ambrosia
The weeds of life exude ambrosia – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment