Thursday, June 27, 2013

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ (452)

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ |
ಒಳಕೀಲಿನೆಸಕವದು ಸೃಷ್ಟಿ ಸತ್ತ್ವವದು ||
ಮಳೆ ಬಿಸಿಲು ಹೊರಗೆ ವಿಲಿವಿಲಿ ಮಿಡಿತ ತನುವೊಳಗೆ |
ಕಲೆಯ ರಚನೆಯೊ ಜಂತು - ಮರುಳ ಮುನಿಯ || (೪೫೨)

(ಮೇಲ್+ಉಸಿರು+ಊದು)(ಮುದುರಿಕೊಳ್ಳುವುದು+ಒಡನೆ)(ಒಳಕೀಲಿನ+ಎಸಕ+ಅದು)(ಸತ್ತ್ವ+ಅದು)

ಚಲಿಸುತ್ತಿರುವ ಒಂದು ಹುಳುವಿನ ಮೇಲೆ ನಾವು ನಮ್ಮ ಉಸಿರನ್ನು ಊದಿದರೆ, ಅದು ತಕ್ಷಣವೇ ಮುದುರಿಕೊಳ್ಳುತ್ತದೆ. ಇದನ್ನು ಮಾಡಿಸುವುದು ಅದರೊಳಗಿರುವ ಕೀಲುಗಳ ಕೆಲಸ. ಸೃಷ್ಟಿಯಲ್ಲಿರುವ ತಿರುಳು ಅದು. ಹೊರಗಡೆ ಮಳೆ ಮತ್ತು ಬಿಸಿಲುಗಳಿದ್ದರೂ ಸಹ ದೇಹದೊಳಗೆ ವಿಲಿವಿಲಿ ತುಡಿತಗಳಿರುತ್ತವೆ. ಪ್ರಾಣಿಯು ಸೃಷ್ಟಿಯ ಕುಶಲಕಲೆಯ ರಚನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If you blow your breath on a worm, it immediately shrinks
It is the mechanism of its internal livers which is the power of nature
Rain and sun outside and convulsive pulsations within
Every creature is a work of art – Marula Muniya

(Translation from "Thus Sang Marula Muniya" by Sri. Narasimha Bhat)

No comments:

Post a Comment