Tuesday, March 12, 2013

ಅಚ್ಚರಿಯೊಳಚ್ಚರಿಯೊ ಸುಖದುಃಖದಾಂತರ್ಯ (382)

ಅಚ್ಚರಿಯೊಳಚ್ಚರಿಯೊ ಸುಖದುಃಖದಾಂತರ್ಯ |
ಮೆಚ್ಚಿಕೆಯದೇಕಿಲ್ಲಿ? ಕಿಚ್ಚದೇಕಲ್ಲಿ ? ||
ಬಿಚ್ಚಲಾಗದ ತೊಡಕು ಮನದ ಜಡೆಗಳೊಳಿಹುವು |
ಸಾಕ್ಷಿಯದಮೇಯಕ್ಕೆ - ಮರುಳ ಮುನಿಯ || (೩೮೨)

(ಅಚ್ಚರಿಯೊಳ್+ಅಚ್ಚರಿಯೊ)(ಸುಖದುಃಖದ+ಆಂತರ್ಯ)(ಮೆಚ್ಚಿಕೆ+ಅದು+ಏಕೆ+ಇಲ್ಲಿ)(ಕಿಚ್ಚು+ಅದು+ಏಕೆ+ಅಲ್ಲಿ)(ಬಿಚ್ಚಲು+ಆಗದ)(ಜಡೆಗಳ+ಒಳು+ಇಹುವು)(ಸಾಕ್ಷಿ+ಅದು+ಅಮೇಯಕ್ಕೆ)

ಈ ಸಂತೋಷ ಮತ್ತು ಆಳಲುಗಳಲ್ಲಿರುವ ಒಳಗುಟ್ಟು (ಆಂತರ್ಯ) ಆಶ್ಚರ್ಯಕರವಾಗಿರುವುದರಲ್ಲೂ ಆಶ್ಚರ್ಯಕರವಾಗಿರತಕ್ಕಂತಹ ವಿಷಯ. ಸಂತೋಷವಾಗಿರುವುದನ್ನು ಒಪ್ಪಿಕೊಳ್ಳುವುದು ಏಕೆ? ಮತ್ತು ದುಃಖವುಂಟಾದಾಗ ಸಂಕಟಪಡುವುದೇಕೆ? ಮನಸ್ಸಿನ ಹೆರಳುಗಳಲ್ಲಿ ಬಿಡಿಸಲಿಕ್ಕಾಗದಂತಹ ಸಿಕ್ಕುಗಳಿವೆ. ಇವುಗಳು, ನಮ್ಮ ಅಳತೆಗೆ ಸಿಗದಂತಹ (ಅಮೇಯ) ವಸ್ತುವಿರುವುದಕ್ಕೆ ಪ್ರತ್ಯಕ್ಷ ನಿದರ್ಶನಗಳಾಗಿವೆ (ಸಾಕ್ಷಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Wonder of wonders is the inner nature of happiness and sorrow,
Why admiration here and anger there?
Twists that can never be disentangled exist in mind’s hair
It is a sure proof of the unknowable existence – Marula Muniya (382)
(Translation from "Thus Sang Marula Muniya" by Sri. Narasimha Bhat)

No comments:

Post a Comment