Tuesday, March 19, 2013

ಬರಿಯ ಸದ್ವಸ್ತು ಚಿದ್ವಿರಹಿತವದಿರ‍್ದೇನು? (387)

ಬರಿಯ ಸದ್ವಸ್ತು ಚಿದ್ವಿರಹಿತವದಿರ‍್ದೇನು? |
ಸ್ಫುರಿಸದುದನಿಹುದೆಂಬುದೆಂತದರಿನೇನು? ||
ಅರಿವು - ನಾನ್‍ನೀನೆಂದು ಗುರುತಿಸುವ ಚಿಚ್ಛಕ್ತಿ |
ಪರವಸ್ತ್ವಭಿವ್ಯಕ್ತಿ - ಮರುಳ ಮುನಿಯ || (೩೮೭)

(ಚಿದ್+ವಿರಹಿತ+ಅದು+ಇರ‍್ದು+ಏನು)(ಸ್ಫುರಿಸದುದನ್+ಇಹುದು+ಎಂಬುದು+ಎಂತು+ಅದರಿನ್+ಏನು)(ಪರವಸ್ತು+ಅಭಿವ್ಯಕ್ತಿ)

ಪರಮಾತ್ಮನೆಂಬ ವಸ್ತು ಮನಸ್ಸಿನಲ್ಲಿ ಮೂಡದಿದ್ದರೇನಂತೆ? ನಮ್ಮ ಮನಸ್ಸಿಗೆ ಹೊಳೆಯದಿರುವ ಒಂದು ವಸ್ತು ಅದು ಹೇಗೆ ಇದೆ ಎಂದು ತಿಳಿಯುವುದರಿಂದಾಗಲಿ ಅದರಿಂದ ಏನು ಪ್ರಯೋಜನ ಎಂದಾಗಲಿ ಎಂದು ಚಿಂತಿಸಬೇಡ. ನಾನು ಮತ್ತು ನೀನೆಂಬ ತಿಳಿವಳಿಕೆಯನ್ನು ಕೊಡುವ ಮನಸ್ಸಿನ ಶಕ್ತಿ(ಚಿಚ್ಛಕ್ತಿ) ಪರಮಾತ್ಮನ ಇರುವಿಕೆಯನ್ನು ನಮಗೆ ವ್ಯಕ್ತಪಡಿಸುತ್ತದೆ(ಅಭಿವ್ಯಕ್ತಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the good of Absolute existence devoid of dynamism?
How to say that a thing is alive if it is static and what’s its use?
The consciousness, the intelligence that identifies as ‘you’ and I
Is the manifestation of the Supreme – Marula Muniya (387)
(Translation from "Thus Sang Marula Muniya" by Sri. Narasimha Bhat)

No comments:

Post a Comment