Wednesday, March 20, 2013

ಮಲರ ಕಂಪಾಕ್ಷಣದ ಗಾಳಿಯಲೆಯೊಳು ಬೆರೆತು (388)

ಮಲರ ಕಂಪಾಕ್ಷಣದ ಗಾಳಿಯಲೆಯೊಳು ಬೆರೆತು |
ಮಿಳಿತವಪ್ಪುದನಂತಕಾಲಸಾಗರದಿ |
ಒಳಿತು ಕೆಡಕುಗಳಂತು ನಿನ್ನ ಬಾಳರಲುಗಳು |
ನೆಲಸುವವನಂತದಲಿ - ಮರುಳ ಮುನಿಯ || (೩೮೮)

(ಕಂಪು+ಆ+ಕ್ಷಣದ)(ಗಾಳಿ+ಅಲೆಯೊಳು)(ಮಿಳಿತ+ಅಪ್ಪುದು+ಅನಂತ)(ಕೆಡಕುಗಳ್+ಅಂತು)(ಬಾಳ್+ಅರಲುಗಳು)(ನೆಲಸುವವು+ಅನಂತದಲಿ)

ಹೂವು (ಮಲರ್) ಅರಳುವಾಗ ಸೂಸುವ ಸುಗಂಧ(ಕಂಪು)ವು ಗಾಳಿಯ ಅಲೆಗಳೊಳಗಡೆ ಸೇರಿಕೊಂಡು, ಕೊನೆಯಿಲ್ಲದಿರುವ ಕಾಲವೆಂಬ ಸಮುದ್ರದಲ್ಲಿ ಮಿಶ್ರವಾಗಿ ಹೋಗುತ್ತದೆ. ಇದೇ ರೀತಿಯಾಗಿ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಸಹ ನಿನ್ನ ಜೀವನದ ಹೂ(ಅರಲ್)ವುಗಳೇ ಸರಿ. ಅವೂ ಸಹ ಪರಮಾತ್ಮನಲ್ಲಿ ಚಿರಕಾಲವೂ ನಿಂತುಕೊಂಡಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fragrance of flowers at once mixes in the waves of winds
And become one with the infinite ocean of time
Your merits and demerits likewise are the flowers of your life
They dwell forever in the infinite – Marula Muniya (388)
(Translation from "Thus Sang Marula Muniya" by Sri. Narasimha Bhat)

No comments:

Post a Comment