Friday, June 28, 2013

ವ್ಯಷ್ಟಿಮೌಲ್ಯವ ಮರೆಯದಿರ‍್ಪ ರಾಷ್ಟ್ರಸಮಷ್ಟಿ (453)

ವ್ಯಷ್ಟಿಮೌಲ್ಯವ ಮರೆಯದಿರ‍್ಪ ರಾಷ್ಟ್ರಸಮಷ್ಟಿ |
ರಾಷ್ಟ್ರಋಣವನು ಮರೆಯದಾ ಪ್ರಜಾ ವ್ಯಷ್ಟಿ ||
ನಷ್ಟಬರೆ ಶಿಷ್ಟಿ ಲಾಭವದೆಂಬ ಸಮದೃಷ್ಟಿ |
ತುಷ್ಟಿಕರವೋ ಜಗಕೆ - ಮರುಳ ಮುನಿಯ || (೪೫೩)

(ಮರೆಯದೆ+ಇರ‍್ಪ)(ಮರೆಯದ+ಆ)(ಲಾಭ+ಅದು+ಎಂಬ)

ಬಿಡಿಮನುಷ್ಯನ ಬೆಲೆಯನ್ನು ಮರೆಯದಿರುವುದಕ್ಕೆ ದೇಶದ ಸಾಮೂಹಿಕ ವ್ಯವಸ್ಥೆಯ ಪ್ರತೀಕ. ಹಾಗೆಯೇ ರಾಷ್ಟ್ರದ ಋಣವನ್ನು ಮರೆಯದಿರುವಂತಹುದು ದೇಶದ ಪ್ರಜಾಲಕ್ಷಣ. ವ್ಯವಸ್ಥೆಯಲ್ಲಿ ನಷ್ಟವುಂಟಾದಾಗ ಅದು ಸತ್ಪ್ರಯೋಜನಕಾರಿ ಎಂಬ ಸಮತಾದೃಷ್ಟಿ. ಇವು ಜಗತ್ತಿಗೆ ತೃಪ್ತಿಯನ್ನು ಕೊಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The body politic that does not forget the values of the individuals
The individuals who don’t forget their national obligations
The balanced view that the balance remaining after the loss itself is profit
Are all conducive to the welfare of the world – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 27, 2013

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ (452)

ಹುಳುವ ಮೇಲುಸಿರೂದು ಮುದುರಿಕೊಳ್ಳುವುದೊಡನೆ |
ಒಳಕೀಲಿನೆಸಕವದು ಸೃಷ್ಟಿ ಸತ್ತ್ವವದು ||
ಮಳೆ ಬಿಸಿಲು ಹೊರಗೆ ವಿಲಿವಿಲಿ ಮಿಡಿತ ತನುವೊಳಗೆ |
ಕಲೆಯ ರಚನೆಯೊ ಜಂತು - ಮರುಳ ಮುನಿಯ || (೪೫೨)

(ಮೇಲ್+ಉಸಿರು+ಊದು)(ಮುದುರಿಕೊಳ್ಳುವುದು+ಒಡನೆ)(ಒಳಕೀಲಿನ+ಎಸಕ+ಅದು)(ಸತ್ತ್ವ+ಅದು)

ಚಲಿಸುತ್ತಿರುವ ಒಂದು ಹುಳುವಿನ ಮೇಲೆ ನಾವು ನಮ್ಮ ಉಸಿರನ್ನು ಊದಿದರೆ, ಅದು ತಕ್ಷಣವೇ ಮುದುರಿಕೊಳ್ಳುತ್ತದೆ. ಇದನ್ನು ಮಾಡಿಸುವುದು ಅದರೊಳಗಿರುವ ಕೀಲುಗಳ ಕೆಲಸ. ಸೃಷ್ಟಿಯಲ್ಲಿರುವ ತಿರುಳು ಅದು. ಹೊರಗಡೆ ಮಳೆ ಮತ್ತು ಬಿಸಿಲುಗಳಿದ್ದರೂ ಸಹ ದೇಹದೊಳಗೆ ವಿಲಿವಿಲಿ ತುಡಿತಗಳಿರುತ್ತವೆ. ಪ್ರಾಣಿಯು ಸೃಷ್ಟಿಯ ಕುಶಲಕಲೆಯ ರಚನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If you blow your breath on a worm, it immediately shrinks
It is the mechanism of its internal livers which is the power of nature
Rain and sun outside and convulsive pulsations within
Every creature is a work of art – Marula Muniya

(Translation from "Thus Sang Marula Muniya" by Sri. Narasimha Bhat)

Wednesday, June 26, 2013

ಪ್ರತ್ಯೇಕದ ವ್ಯಕ್ತಿ ಲೋಕಸಂಸರ್ಗದಲಿ (451)

ಪ್ರತ್ಯೇಕದ ವ್ಯಕ್ತಿ ಲೋಕಸಂಸರ್ಗದಲಿ |
ಬಿತ್ತೆ ಸ್ವಭಾವಜವನಿತರ ವೆಕ್ತಿಗಳೊಳ್ ||
ಮತ್ತೊಂದು ಪ್ರತ್ಯೇಕದ ವ್ಯಕ್ತಿಯಂತು ಜಗ |
ಪ್ರತ್ಯೇಕಗಳ ಜಡೆಯೊ -ಮರುಳ ಮುನಿಯ || (೪೫೧)

(ಸ್ವಭಾವಜ+ಅವನ್+ಇತರ)(ವೆಕ್ತಿಗಳ್+ಒಳ್)

ಈ ರೀತಿಯಾಗಿ ಬಿಡಿ ವ್ಯಕ್ತಿಗೆ ಜಗತ್ತಿನ ಜೊತೆ ಸಂಬಂಧ ಉಂಟಾದಾಗ, ಅವನ ಗುಣಗಳನ್ನು ಬೇರೆ ಜನಗಳೊಳಗೆ ಬಿತ್ತಿದ್ದಲ್ಲಿ, ಇನ್ನೊಂದು ಬಿಡಿ ವ್ಯಕ್ತಿಯ ಉತ್ಪಾದನೆಯಾಗುತ್ತದೆ. ಜಗತ್ತು ಈ ರೀತಿ ಬಿಡಿ ವ್ಯಕ್ತಿಗಳಿಂದ ಕೂಡಿಕೊಂಡ ಸರಣಿ (ಜಡೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When different individuals come into contact with one another in the world
Each individual may sow the seeds of his own traits in others
A separate individual comes into being then
This world is so a plait of many straws of hair – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 25, 2013

ಸೃಷ್ಟಿಯಲಿ ಜಾತಿಗಳು ಜಾತಿಯೊಳ್ ವ್ಯಕ್ತಿಗಳು (450)

ಸೃಷ್ಟಿಯಲಿ ಜಾತಿಗಳು ಜಾತಿಯೊಳ್ ವ್ಯಕ್ತಿಗಳು |
ವ್ಯಷ್ಟಿಯೊಳಗಂಗಂಗಳಂತು ಭೇದಗಳು ||
ಸ್ಪಷ್ಟತ್ರಿವಿಧಗಳಲಿ ನೀನದನು ತೊರೆದಂದು |
ಶಿಷ್ಟವಿರ‍್ಪುದು ತತ್ತ್ವ - ಮರುಳ ಮುನಿಯ || (೪೫೦)

(ವ್ಯಷ್ಟಿಯೊಳಗೆ+ಅಂಗಂಗಳ್+ಅಂತು)(ನೀನ್+ಅದನು)(ತೊರೆದ+ಅಂದು)

ಪರಮಾತ್ಮನ ಸೃಷ್ಟಿಯಲ್ಲಿ ಬೇರೆ ಬೇರೆ ವರ್ಗಗಳಿವೆ. ಅವುಗಳಲ್ಲಿ ವ್ಯಕ್ತಿಗಳಿದ್ದಾರೆ. ಬಿಡಿ ವ್ಯಕ್ತಿಗಳ ಪ್ರತಿಯೊಂದು ಅವಯವಗಳಲ್ಲೂ ವ್ಯತ್ಯಾಸವನ್ನು ಕಾಣುತ್ತೇವೆ. ನಿಶ್ಚಿತವಾದ ಮೂರು ವಿಧಗಳಲ್ಲಿ ನೀನು ಅದನ್ನು ತ್ಯಜಿಸಿದಾಗ ಸ್ಥಿರವಾಗಿ ಉಳಿದಿರುವುದೇ ತತ್ತ್ವ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Many classes are in creation and many individuals in each class
Even in one individual his body organs are different
If one can renounce the differences in thought, word and deed
Truth Absolute will alone remain then – Marula Muniya
(Translation from "Thus Sang Marula Muniya" by Sri. Narasimha Bhat)

Monday, June 24, 2013

ತತ್ತ್ವವೇಕವದೇಕನೇಕವೀಸೃಷ್ಟಿಯಲಿ? (449)

ತತ್ತ್ವವೇಕವದೇಕನೇಕವೀಸೃಷ್ಟಿಯಲಿ? |
ವೆರ‍್ತವೇನಲ್ಲ ರುಚಿರೂಪನಾನಾತ್ವ ||
ವ್ಯಕ್ತಿಗುಣ ವೈವಿಧ್ಯವಿರದಂದು ಲೋಕದಲಿ |
ರಿಕ್ತವಾಗದೆ ಬಾಳು - ಮರುಳ ಮುನಿಯ || (೪೪೯)

(ತತ್ತ್ವವು+ಏಕ+ಅದು+ಏಕೆ+ಅನೇಕ+ಈ+ಸೃಷ್ಟಿಯಲಿ)(ವೆರ‍್ತ+ಏನ್+ಅಲ್ಲ)(ವೈವಿಧ್ಯ+ಇರದಂದು)(ರಿಕ್ತ+ಆಗದೆ)

ತತ್ತ್ವವು ಒಂದೇ ಒಂದಾದರೂ ಅದು ಸೃಷ್ಟಿಯಲ್ಲಿ ಏಕೆ ಅನೇಕವಾಗಿ ಕಾಣುತ್ತವೆ? ನಾನಾ ವಿಧವಾದ ಆಕಾರ ಮತ್ತು ಸವಿಗಳು ವ್ಯರ್ಥವೇನೂ ಅಲ್ಲ. ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಬೇರೆ ಬೇರೆ ವಿಧವಾದ ಸ್ವಭಾವಗಳಿಲ್ಲದಿದ್ದಂದು ಬಾಳು ಶೂನ್ಯ(ರಿಕ್ತ)ವಾಗುವುದಿಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why does the one Truth appear as many in creation?
The variety of tastes and forms in the world is no waste,
Won’t life in the world be poorer in the absence of
Individual differences in talents and traits – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 20, 2013

ವ್ಯಷ್ಟಿವಿಕಸನ ಹೂವು ಕುಲರಾಷ್ಟ್ರಲೋಕಸಂ (448)

ವ್ಯಷ್ಟಿವಿಕಸನ ಹೂವು ಕುಲರಾಷ್ಟ್ರಲೋಕಸಂ - |
ಸೃಷ್ಟಿಗಳು ಬೇರು ಧಾರ್ಮಿಕಜೀವತರುಗೆ ||
ಪುಷ್ಪಂ ವಿವೇಕದಿಂ ಸೃಷ್ಟಿಕುಟಿಲಾತಿಗಂ |
ನಿಷ್ಠವದು ಬೊಮ್ಮದಲಿ - ಮರುಳ ಮುನಿಯ || (೪೪೮)

(ಕುಟಿಲ+ಅತಿಗಂ)(ನಿಷ್ಠ+ಅದು)

ಧಾರ್ಮಿಕ ಜೀವನವೆಂಬ ಮರಕ್ಕೆ ಬಿಡಿ ವ್ಯಕ್ತಿಯ ಅರಳುವಿಕೆಯೆ ಹೂವು ಮತ್ತು ಕುಲ, ದೇಶ ಮತ್ತು ಲೋಕದ ಒಳ್ಳೆಯ ಸೃಷ್ಟಿಗಳು ಬೇರುಗಳಾಗುತ್ತವೆ. ಸೃಷ್ಟಿಯ ವಕ್ರತೆಗಳಿಗೆ ನರನ ವಿವೇಕವು ಪುಷ್ಟಿ ಒದಗಿಸಿದರೂ ಆ ವಿವೇಕದ ನೆಲೆ ಪರಬ್ರಹ್ಮನಲ್ಲಿ ನೆಲಸಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Individual development is the flower, community
Nation and the universe are the roots to the plant of righteousness
Individual wisdom enriches creation, even deception
Is faithful to Brahma – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 19, 2013

ನಗುವನಿಗಮಳುವನಿಗಮವಯವಗಳೊಂದೆ ಸಮ (447)

ನಗುವನಿಗಮಳುವನಿಗಮವಯವಗಳೊಂದೆ ಸಮ |
ಮೊಗದ ಗೆರೆ ಕೊರಲ ಸೊಟ್ಟುಗಳನಿತೆ ಭೇದ ||
ಬಗೆಬಗೆಯ ಜನದೊಳೊರ‍್ವನನಿನ್ನದೊರ‍್ವನಿಂ |
ಮಿಗಿಸುಗುಂ ವ್ಯಕ್ತಿತನ - ಮರುಳ ಮುನಿಯ || (೪೪೭)

(ನಗುವನಿಗಂ+ಅಳುವನಿಗಂ+ಅವಯವಗಳು+ಒಂದೆ)(ಸೊಟ್ಟುಗಳ್+ಅನಿತೆ)(ಜನದೊಳ್+ಒರ‍್ವನ್+ಇನ್ನದೊರ‍್ವನಿಂ)

ನಗುತ್ತಿರುವವನಿಗೂ ಮತ್ತು ಅಳುತ್ತಿರುವವನಿಗೂ ಸಮಾನವಾದ ಅಂಗಾಂಗಗಳಿವೆ. ಅದರಲ್ಲಿ ವ್ಯತ್ಯಾಸವೇನಿಲ್ಲ. ಮುಖದ ಗೆರೆ ಮತ್ತು ಗಂಟಲಿನ ಸೊಟ್ಟುಗಳಲ್ಲಿ ಮಾತ್ರ ಸ್ವಲ್ಪ ವ್ಯಾತ್ಯಾಸವಿದೆ. ವಿಧವಿಧವಾದ ಜನಗಳಲ್ಲಿ ಒಬ್ಬನನ್ನು ಇನ್ನೊಬ್ಬನಿಂದ ಪ್ರತ್ಯೇಕಿಸುವುದು ಈ ವ್ಯಕ್ತಿತ್ವದ ವಿಶಿಷ್ಟತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The one who laughs and the one who weeps have similar organs
But the lines of face and the curves of neck differ
The personal traits and talents of each individual
Differ from person to person – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 18, 2013

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ (446)

ವ್ಯಷ್ಟಿ ವಸ್ತು ಫಲಂ ಸಮಷ್ಟಿಪ್ರಯೋಜನದಿ |
ಪುಷ್ಟಿ ವ್ಯಷ್ಟಿಗೆ (ಬಹುದು) ಸಮಷ್ಟಿಬಲದಿಂ ||
ವ್ಯಷ್ಟಿ ಸಾಮಷ್ಟ್ಯಮಿಂತನ್ಯೋನ್ಯಯೋಜಿತಂ |
ತುಷ್ಟಿಯುಭಯಕುಮಿರ್ಕೆ - ಮರುಳ ಮುನಿಯ || (೪೪೬)

(ಸಾಮಷ್ಟ್ಯಂ+ಇಂತು+ಅನ್ಯೋನ್ಯ)(ತುಷ್ಟಿ+ಉಭಯಕುಂ+ಇರ್ಕೆ)

ಬಿಡಿಯಾದ (ವ್ಯಷ್ಟಿ) ವಸ್ತುವಿನ ಪ್ರಯೋಜನ ಒಟ್ಟು ವಸ್ತುಗಳ (ಸಮಷ್ಟಿ) ಉಪಯೋಗದಿಂದಾಗುತ್ತದೆ. ಬಿಡಿಯಾಗಿರುವುದರ ಪೋಷಣೆ ಗುಂಪಾಗಿರುವದರ ಬಲದಿಂದ ಆಗುತ್ತದೆ. ಬಿಡಿಯಾಗಿರುವುದು ಮತ್ತು ಗುಂಪಾಗಿರುವುದು ಈ ರೀತಿಯಾಗಿ ಪರಸ್ಪರ ಹೊಂದಾಣಿಕೆಯಾಗಿರುವಂತೆ ಮಾಡಲಾಗಿದೆ. ಎರಡೂ (ಉಭಯಕುಂ) ಇದ್ದಲ್ಲಿ (ಇರ್ಕೆ) ತೃಪ್ತಿ ಮತ್ತು ಆನಂದ(ತುಷ್ಟಿ)ಗಳಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The good of the community is the rightful fruition of individual life
Social strength nourishes individual growth
The individual and the community are thus interrelated
So that both may enjoy satisfaction – Marula Muniya
(Translation from "Thus Sang Marula Muniya" by Sri. Narasimha Bhat)

Monday, June 17, 2013

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ (445)

ಮೊಟ್ಟೆಗಳನಿಕ್ಕಿ ತಾನೆ ನುಂಗುವಹಿಯಂತೆ |
ಸೃಷ್ಟಿಯುಣುವಳು ತಾನೆ ತನ್ನ ಸಂತತಿಯ ||
ಸತ್ತುದೇನ್? ಎಲ್ಲ ಹೊಸ ಬೆಳೆಗೆ ಗೊಬ್ಬರವಾಯ್ತು |
ನಷ್ಟಕೆಡೆಗೊಡಳವಳು - ಮರುಳ ಮುನಿಯ || (೪೪೫)

(ಮೊಟ್ಟೆಗಳನ್+ಇಕ್ಕಿ)(ನುಂಗುವ+ಅಹಿಯಂತೆ)(ಸೃಷ್ಟಿ+ಉಣುವಳು)(ಗೊಬ್ಬರ+ಆಯ್ತು)(ನಷ್ಟಕೆ+ಎಡೆಗೊಡಳ್+ಅವಳು)

ಹೆಣ್ಣುಸರ್ಪ ಮೊಟ್ಟೆಗಳನ್ನಿಡುತ್ತ ಹೋಗುತ್ತದೆ. ಅನಂತರ ತುಂಬ ಹಸಿವಾಗುವುದರಿಂದ ತನ್ನ ಮೊಟ್ಟೆಗಳನ್ನು ತಾನೇ ತಿಂದುಬಿಡುತ್ತದೆ. ಬಿಟ್ಟುಹೋದ ಒಂದೆರಡು ಮೊಟ್ಟೆಗಳಿಂದ ಹಾವಿನ ಕುಲ ಬೆಳೆಯುತ್ತದೆ.

ಮೊಟ್ಟೆಗಳನ್ನು ಒಂದು ಸಾಲಿನಲ್ಲಿಟ್ಟು ನಂತರ ಪುನಃ ಅದೇ ಸಾಲಿನಲ್ಲಿ ವಾಪಸು ಬರುತ್ತಾ ಅಲ್ಲಿರುವ ಬಹುಭಾಗದ ಮೊಟ್ಟೆಗಳನ್ನು ತಿನ್ನುವ ಸರ್ಪ(ಅಹಿ)ದಂತೆ, ಸೃಷ್ಟಿಯೂ ಸಹ ತನ್ನ ಸಂತಾನವನ್ನು ಅದೇ ರೀತಿ ತಿನ್ನುವಳು ತಾನೆ. ಹಾಗಿದ್ದಲ್ಲಿ ಸತ್ತುಹೋಗಿದ್ದು ಯಾವುದು? ಅವು ಹೊಸದಾಗಿ ಬರುವ ಬೆಳೆಗೆ ಗೊಬ್ಬರವಾಯಿತಷ್ಟೆ. ಪ್ರಕೃತಿಯು ಸಂತಾನವು ನಾಶವಾಗುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the serpent the swallows its own eggs
Nature herself eats he own progeny
The dead become manure to the new crop
Nature would never incur any loss – Marula Muniya || (445)
(Translation from "Thus Sang Marula Muniya" by Sri. Narasimha Bhat)

Thursday, June 13, 2013

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ (444)

ಅದು ಇದೆನ್ನುವ ಗುರುತ ನೆನಪಿಗಾಗಿಪ ಶಕ್ತಿ |
ಎದುರಿರದನೆದುರಿಹುದಕೊಂದಿಸುವ ಶಕ್ತಿ ||
ತದಿದಮೆನಿಸುತಲೆಲ್ಲ ದೂರವಳಿಸುವ ಶಕ್ತಿ |
ಚಿದಖಂಡ ಶಕ್ತಿಯೆಲೊ - ಮರುಳ ಮುನಿಯ || (೪೪೪)

(ಇದು+ಎನ್ನುವ)(ನೆನಪಿಗೆ+ಆಗಿಪ)(ಎದುರು+ಇರದನು+ಎದುರು+ಇಹುದಕೆ+ಒಂದಿಸುವ)(ತದಿದಂ+ಎನಿಸುತಲ್+ಎಲ್ಲ)(ದೂರ+ಅಳಿಸುವ)(ಚಿತ್+ಅಖಂಡ)

ವಸ್ತುಗಳನ್ನು ಇವು ಇವೇ ಎಂದು ಗುರಿತಿಸುವುದನ್ನು ನಮಗೆ ಜ್ಞಾಪಿಸುವಂತಹ ಒಂದು ಶಕ್ತಿ. ನಮ್ಮದುರಿಗೆ ಇರದಿರುವುದನ್ನು ನಮ್ಮೆದುರಿಗೆ ಇರುವುದಕ್ಕೆ ಹೋಲಿಸಿ ಹೊಂದಿಸುವ ಒಂದು ಶಕ್ತಿ. ಅದೇ ಇದು (ತದಿದಂ) ಎನ್ನಿಸುತ್ತ ಅವೆರಡಕ್ಕೆ ಅಂತರವನ್ನು ಅಳಿಸುವ ಶಕ್ತಿ. ಇದು ಪರಮಾತ್ಮನ ಪರಿಪೂರ್ಣವಾದ (ಅಖಂಡ) ಶಕ್ತಿ ಕಣಯ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The power that enables one to remember and identify things as that and this
The power that amicably links the seen with the unseen
Power that enables us to identify things as this and this
And eliminates all distances is the Devine Wisdom – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 12, 2013

ಸುರರುಮಸುರರುಮೊಂದಿ ಕಡೆದ ಕಡಲಾವುದದು? (443)

ಸುರರುಮಸುರರುಮೊಂದಿ ಕಡೆದ ಕಡಲಾವುದದು? |
ಸುರೆಸುಧೆಗಳೆರಡರಲಿ ವಿಷಗಳೆರಡರಲಿ ||
ಬೆರೆತೆರಡ ಮನುಜ ಬೇರ್ಪಡಿಪ, ಮಂಥನಯಷ್ಟಿ |
ನರವಿವೇಕದ ಶಕ್ತಿ - ಮರುಳ ಮುನಿಯ || (೪೪೩)

(ಸುರರುಂ+ಅಸುರರುಂ+ಒಂದಿ)(ಕಡಲ್+ಆವುದು+ಅದು)(ಸುಧೆಗಳ್+ಎರಡರಲಿ)(ವಿಷಗಳ್+ಎರಡರಲಿ)(ಬೆರೆತು+ಎರಡ)

ದೇವದಾನವರು ಸೇರಿ ಕ್ಷೀರಸಮುದ್ರವನ್ನು ಕಡೆದರಷ್ಟೆ; ಅದರಿಂದ ಸುರೆ, ಅಮೃತ, ವಿಷ - ಈ ಮೂರು ಹುಟ್ಟಿದವು; ಕಡೆಯುವುದಕ್ಕೆ ಮೊದಲು ಇವು ಮೂರೂ ಕ್ಷೀರಸಮುದ್ರದಲ್ಲಿ ಒಂದುಗೂಡಿದ್ದವು. ಸುರೆಯೊಡನೆ ಅಮೃತವಿಷಗಳೂ ಅಮೃತದೊಡನೆ ಸುರೆವಿಷಗಳೂ ವಿಷದೊಡನೆ ಅಮೃತಸುರೆಗಳೂ ಸಮಿಶ್ರವಾಗಿದ್ದವು.

ದೇವತೆಗಳು ಮತ್ತು ದಾನವರೂ ಕೂಡಿ ಕಡೆದ ಸಮುದ್ರವು ಯಾವುದು? ಅದೇ ಕ್ಷೀರಸಮುದ್ರ. ಮದ್ಯ(ಸುರೆ) ಮತ್ತು ಅಮೃತಗಳೆರಡರಲ್ಲೂ, ಹಾಗೆಯೇ ಅವೆರಡರಲ್ಲೂ ವಿಷವೂ ಸೇರಿಕೊಂಡಿತ್ತು. ಇವುಗಳೆಲ್ಲವೂ ಸೇರಿರುವ ಮನುಷ್ಯನಲ್ಲಿ ಇವನ್ನು ಬೇರೆ ಮಾಡುವ ಕಡೆಗೋಲಿನ ದಾರ (ಮಂಥನಯಷ್ಟಿ) ಮನುಷ್ಯನ ಯುಕ್ತಾಯುಕ್ತ ವಿವೇಚನೆಯೆಂಬ (ವಿವೇಕ) ಶಕ್ತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is the ocean that gods and demons jointly churned?
Both ambrosia and liquor surfaced but mixed with deadly poison
The churning rod to separate the two in the mixture
Is the power of discrimination in man – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 11, 2013

ದೈವ ತೋರುವುದು ಕರವಾಳ ವರದಾನಗಳ (442)

ದೈವ ತೋರುವುದು ಕರವಾಳ ವರದಾನಗಳ |
ಆವಂದದಾವುದೋ ನಿನಗೆ ಗೊತ್ತಿಲ್ಲ ||
ನೋವಲ್ತೊಡಲಗಟ್ಟಿಯನಳೆವುಪಾಯವದು |
ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ || (೪೪೨)

(ಆವ+ಅಂದು+ಅದು+ಆವುದೋ)(ನೋವು+ಅಲ್ತೆ+ಒಡಲಗಟ್ಟಿಯನ್+ಅಳೆವ+ಉಪಾಯವದು)

ದೈವವು ಕತ್ತಿ (ಕರತಾಳ) ಮತ್ತು ಅನುಗ್ರಹಗಳನ್ನು ನಿನಗೆ ತೋರುವಂತೆ ಮಾಡುತ್ತದೆ. ಯಾವುದು ನಿನಗೆ ಯಾವಾಗ ಸಿಗುತ್ತದೋ ನೀನು ಅರಿಯೆ. ನೋವೆಂದಾಗ ದೇಹದ (ಒದಲು) ದೃಢತೆಯನ್ನು ಅಳತೆ ಮಾಡುವ ಯುಕ್ತಿ ಅದು. ದೈವವು ನಮ್ಮ ಬಲಾಬಲಗಳನ್ನು ಪರೀಕ್ಷಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Fate flaunts swords and boons before mankind
To whom He will give and when is anybody’s guess
Pain is no pain but it is the method of measuring your strength
It is the trail of our strength conducted by Fate – Marula Muniya
(Translation from "Thus Sang Marula Muniya" by Sri. Narasimha Bhat)

Monday, June 10, 2013

ಲೋಕಪತಿಯೇಂ ನಿರಂಕುಶರಾಜನವೊಲಿಹನೆ? (441)

ಲೋಕಪತಿಯೇಂ ನಿರಂಕುಶರಾಜನವೊಲಿಹನೆ? |
ಸ್ವೀಕರಿಸಿಹಂ ನ್ಯಾಯವಿಧಿಯೊಂದನವನು ||
ಪಾಕವಂ ಗೆಯ್ದುದಣುಣಲ್ ಸ್ವತಂತ್ರಂ ನರನು |
ವೈಕಲ್ಪವಿಲ್ಲದಕೆ - ಮರುಳ ಮುನಿಯ || (೪೪೧)

(ನಿರಂಕುಶರಾಜನವೊಲ್+ಇಹನೆ)(ನ್ಯಾಯವಿಧಿ+ಒಂದನ್+ಅವನು)(ಗೆಯ್ದುದಂ+ಉಣಲ್)(ವೈಕಲ್ಪ+ಇಲ್ಲ+ಅದಕೆ)

ಜಗತ್ತನ್ನು ಆಳುತ್ತಿರುವ ಪರಮಾತ್ಮನು ಯಾವ ಅಂಕೆಯೂ ಇಲ್ಲದ ರಾಜನಂತೆ ತನ್ನ ಅಧಿಪತ್ಯವನ್ನು ನಡೆಸುತ್ತಿರುವನೇನು? ಹಾಗೇನಿಲ್ಲ. ಅವನೂ ಸಹ ಒಂದು ರೀತಿ ನೀತಿ ಮತ್ತು ನಿಯಮವನ್ನು ಅಂಗೀಕರಿಸಿಕೊಂಡಿದ್ದಾನೆ. ತಾನು ಮಾಡಿದ ಅಡುಗೆಯನ್ನು ಸೇವಿಸಲು ಮನುಷ್ಯನು ಎಲ್ಲಾ ವಿಧದಲ್ಲೂ ಸ್ವತಂತ್ರನಾಗಿದ್ದಾನೆ. ಇದಕ್ಕೆ ಯಾವುದೇ ವಿಧವಾದ ಸಂಶಯ ಮತ್ತು ಅನುಮಾನಗಳಿಲ್ಲ (ವೈಕಲ್ಪ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is the Lord of universe functioning as an Autocrat?
He strictly adheres to a code of justice
Every man is utterly free to eat what he has cooked
There’s no room for doubt in the administration of justice – Marula Muniya
(Translation from "Thus Sang Marula Muniya" by Sri. Narasimha Bhat)

Friday, June 7, 2013

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು (440)

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು |
ಇರುಳು ಹಗಲುಗಳುಂಟು ಶಶಿರವಿಗಳುಂಟು ||
ಕುರುಡು ಕತ್ತಲೆಯುಂಟು ಮುಗಿಲು ಸಿಡಿಲುಗಳುಂಟು |
ಅರುಣೋದಯವುಮುಂಟು - ಮರುಳ ಮುನಿಯ || (೪೪೦)

(ಹೊರಜಗದೊಳ್+ಎಂತೊ)(ನಿನ್ನೊಳ+ಜಗದೊಳಗಂ+ಅಂತು)(ಅರುಣೋದಯವುಂ+ಉಂಟು)

ಬಾಹ್ಯ ಪ್ರಪಂಚದಲ್ಲಿ ಹೇಗಿದೆಯೋ ಹಾಗೆಯೇ ನಿನ್ನಂತರಂಗದ ಜಗತ್ತಿನಲ್ಲೂ ಸಹ ರಾತ್ರಿ (ಇರುಳು) ಮತ್ತು ಹಗಲುಗಳಿವೆ, ಚಂದ್ರ(ಶಶಿ) ಮತ್ತು ಸೂರ್ಯ(ರವಿ)ರಿದ್ದಾರೆ, ಕಣ್ಣನ್ನು ಕುರುಡಾಗಿ ಮಾಡಿ ನಮಗೇನೂ ಕಾಣದಂತೆ ಮಾಡುವ ಕತ್ತಲೆ ಇದೆ. ಮೋಡ(ಮುಗಿಲು) ಮತ್ತು ಸಿಡಿಲುಗಳೂ ಸಹ ಇವೆ. ಇವುಗಳೆಲ್ಲದರ ಜೊತೆಯಲ್ಲಿ ನಮ್ಮ ಜೀವನಕ್ಕೆ ಒಂದು ನೆಮ್ಮದಿ ಮತ್ತು ಭರವಸೆಯನ್ನು ಕೊಡುವ ಸೂರ್ಯೋದಯವೂ (ಅರುಣೋದಯ) ಇದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

As in the outer world so in your inner world too
There are days and nights, the sun and the moon
There are gloom and darkness, clouds and thunder
The golden dawn is also there – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 6, 2013

ಮೂಲದಲಿ ಸತ್ ಒಂದು ಮೇಲ್ಮೇಲೆ ನೂರ‍್ಕೋಟಿ (439)

ಮೂಲದಲಿ ಸತ್ ಒಂದು ಮೇಲ್ಮೇಲೆ ನೂರ‍್ಕೋಟಿ |
ಆಳದಲಿ ಸ್ವಚ್ಛ ಮೇಳ್ದರ ಚಿತ್ರ ಶಬಲ ||
ಕ್ಷ್ವೇಲ ಸುಧೆಗಳ ಬೆರಕೆಯದೆ ಸಾಲು ಜೀವನವು |
ಬಾಳಕಳೆ ಸುಧೆಯಾಗ - ಮರುಳ ಮುನಿಯ || (೪೩೯)

ಸದ್ವಸ್ತುವಾಗಿರುವ ಅದು ಮೂಲದಲ್ಲಿ ಒಂದೇ ಒಂದು ವಸ್ತುವಾದರೂ ಸಹ ಪ್ರಪಂಚದ ಜೀವಿತದಲ್ಲಿ ನೂರಾರು ಕೋಟಿ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂತರಾಳದಲ್ಲಿ ಅದು ನಿರ್ಮಲವಾಗಿ ತಿಳಿಯಾಗಿರುತ್ತದೆ. ಆದರೆ ಕೂಡಿ ಕಂಡಾಗ ಅದರ ಚಿತ್ರವು ಮಿಶ್ರವರ್ಣವಾಗಿ (ಶಬಲ) ಕಂಡುಬರುತ್ತದೆ. ವಿಷ(ಕ್ಷ್ವೇಲ) ಮತ್ತು ಅಮೃತಗಳ ಮಿಶ್ರಣದ ಸಾಲುಗಳೇ ಈ ಜೀವನ. ಬಾಳನ್ನು ಸವೆಸಿದಾಗ ಅಮೃತ(ಸುಧೆ)ವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Truth is one at the bottom but hundred crores above,
It’s clear at the bottom but multicoloured on the surface
Our life is a mixture of poison and ambrosia
The weeds of life exude ambrosia – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 5, 2013

ಓಟದಲಿ ಚಂಡು ನೆಗೆದತ್ತಿತ್ತ ತಿರುಗದಿರೆ (438)

ಓಟದಲಿ ಚಂಡು ನೆಗೆದತ್ತಿತ್ತ ತಿರುಗದಿರೆ |
ಏಟುಪೋಟುಗಳಾಡುವರ‍್ಗೆ ತಾಕದಿರೆ ||
ಆಟದಲಿ ರುಚಿಯೇನು ನೋಟದಲಿ ಸೊಗವೇನು |
ಕೋಟಲೆಯೆ ಸವಿ ಬಾಳ್ಗೆ - ಮರುಳ ಮುನಿಯ || (೪೩೮)

(ನೆಗೆದು+ಅತ್ತಿತ್ತ)(ತಿರುಗದೆ+ಇರೆ)(ಏಟುಪೋಟುಗಳು+ಆಡುವರ‍್ಗೆ)(ತಾಕದೆ+ಇರೆ)

ಆಟ ಆಡುವಾಗ ಚೆಂಡು ನೆಗೆದು ಅತ್ತಿತ್ತ ಓಡಾಡದಿದ್ದಲ್ಲಿ, ಮತ್ತು ಆಟಗಾರರಿಗೆ ಹೊಡೆತಗಳು ತಾಗದಿದ್ದಲ್ಲಿ, ಅಂತಹ ಆಟದಲ್ಲಿ ಯಾವುದೇ ವಿಧವಾದ ಸವಿ ಮತ್ತು ರುಚಿಗಳು ಇರಲಾರವು ಮತ್ತು ಅದನ್ನು ವೀಕ್ಷಿಸುವವರಿಗೆ ಅದರಲ್ಲಿ ಸುಖ ಮತ್ತು ಚೆಲುವುಗಳು ಕಂಡುಬರುವುದಿಲ್ಲ. ತೊಂದರೆ (ಕೋಟಲೆ) ಮತ್ತು ಹಿಂಸೆಗಳಿಂದಲೇ ಜೀವನಕ್ಕೆ ಒಂದು ರುಚಿ ಮತ್ತು ಸೊಗಸು ಬರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the ball doesn’t bounce and toss in different directions,
If the players remain perfectly unhurt
Where is the thrill in the game and what fascination is there to the spectators?
Trials and tribulations make life sweet – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 4, 2013

ಮರಣಮೇಂ ಜೀವನಾಟಕದ ಚರಮಾಂಕಮೇಂ? (437)

ಮರಣಮೇಂ ಜೀವನಾಟಕದ ಚರಮಾಂಕಮೇಂ? |
ಬರಿಯ ವಿಷ್ಕಂಭಮದು ಕತೆಯು ಮುಂಬರಿಗುಂ ||
ನರನೊ ಖರನೋ ಮರನೊ ತಾನಾಗಿ (ನಿತ್ಯನಟ) |
ಮರಳಿ ಬಾರನೆ ಭುವಿಗೆ - ಮರುಳ ಮುನಿಯ || (೪೩೭)

(ಮರಣಮ್ಂ+ಏಂ)(ಚರಮಾಂಕಂ+ಏಂ)(ವಿಷ್ಕಂಭಂ+ಅದು)

ಸಾವು ಎನ್ನುವುದು ನಮ್ಮ ಜೀವನ ನಾಟಕದ ಕೊನೆಯ (ಚರಮ) ವಿಭಾಗವೇನು? ಅಲ್ಲ. ಅದು ನಾಟಕದಲ್ಲಿ ಹಿಂದೆ ನಡೆದ ಮತ್ತು ಮುಂದೆ ನಡೆಯುವ ವಿಷಯವನ್ನು ಸೂಚಿಸುವ ಕಥಾಂಶ(ವಿಷ್ಕಂಭಂ)ವಷ್ಟೆ. ಕಥೆಯಂತೂ ಮುಂದುವರಿಯುತ್ತಲೇ ಇರುತ್ತದೆ. ಅವನು ಮನುಷ್ಯನೋ, ಕತ್ತೆ(ಖರ)ಯೋ, ಮರವೋ, ಅಥವಾ ಯಾವುದೋ ಒಂದು ಪಾತ್ರವನ್ನು ವಹಿಸಿ ಪುನಃ ಈ ಭೂಮಿಗೆ ಬರದಿರುತ್ತಾನೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is death last scene in the drama of human life?
It is just the interlinking episode, the drama would continue
Being an eternal Actor, He would certainly come back to earth
As man or animal or plant – Marula Muniya (437)
(Translation from "Thus Sang Marula Muniya" by Sri. Narasimha Bhat)

Monday, June 3, 2013

ನರನಾರಿಯರ ತೊಡುಕು ಸಿರಿಯ ಕರುಬಿನ ಕುಟಿಕ (436)

ನರನಾರಿಯರ ತೊಡುಕು ಸಿರಿಯ ಕರುಬಿನ ಕುಟಿಕ |
ಹಿರಿಮೆ ಕಿರಿಮೆಯ ಕಿರಕು ಜಗದೊಳಿರದಂದು ||
ಪರಮೇಷ್ಠಿಯಶವೆಲ್ಲಿ? ಪ್ರಕೃತಿಸಂತತಿಯೆಲ್ಲಿ? |
ಕರಗುವುದಲಾ ಸೃಷ್ಟಿ - ಮರುಳ ಮುನಿಯ || (೪೩೬)

(ಜಗದೊಳ್+ಇರದಂದು)(ಕರಗುವುದು+ಅಲಾ)

ಗಂಡು ಮತ್ತು ಹೆಣ್ಣುಗಳ ಸಿಕ್ಕು ಮತ್ತು ಗೋಜಲುಗಳು, ಬಡವನು ಶ್ರೀಮಂತಿಕೆಯನ್ನು ಕಂಡು ಹೊಟ್ಟೆಕಿಚ್ಚುಪಟ್ಟು ಕುಟುಕುವಂತಹ ಮನಸ್ಸು, ತಾನು ದೊಡ್ಡವನು ಮತ್ತು ಇನ್ನೊಬ್ಬನು ಚಿಕ್ಕವನೆನ್ನುವ ತಿಕ್ಕಾಟ(ಕಿರುಕು)ಗಳು ಈ ಜಗತ್ತಿನಲ್ಲಿ ಇರದಿದ್ದಲ್ಲಿ, ಬ್ರಹ್ಮನ(ಪರಮೇಷ್ಠಿ) ಗೆಲವು ಮತ್ತು ಕೀರ್ತಿಗಳೆಲ್ಲಿರುತ್ತವೆ? ಹಾಗೆಯೇ ಪ್ರಕೃತಿಯ ಸಂತತಿಯು ಸಹ ಎಲ್ಲಿರುತ್ತದೆ? ಈ ಸೃಷ್ಟಿಯೇ ಕರಗಿ ಮಾಯವಾಗಿಬಿಡುತ್ತದೆ, ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the problems between man and woman, the stings of envy due to wealth
The cries of high and low are absent in the world
How can Brahma succeed and how can nature’s progeny live?
Then this creation is bound to dissolve – Marula Muniya (436)
(Translation from "Thus Sang Marula Muniya" by Sri. Narasimha Bhat)