ಕವಲೆರಡು ಸೀಳಿ ಮನುಜಸ್ವಭಾವದ ಹೊನಲ್ |
ಪ್ರವಹಿಕುಂ ಸ್ವಾರ್ಥತೆ ಪರಾರ್ಥತೆಗಳಾಗಿ ||
ಜವುಗು ಹಳ್ಳದಿ ನಿಂತು ನಾರ‍್ವುದೊಂದಿನ್ನೊಂದು |
ವೆವಸಾಯಕೊದಗುವುದು - ಮರುಳ ಮುನಿಯ || (೪೨೭)
(ಕವಲ್+ಎರಡು)(ಪರಾರ್ಥತೆಗಳ್+ಆಗಿ)(ನಾರ‍್ವುದು+ಒಂದು+ಇನ್ನೊಂದು)(ವೆವಸಾಯಕೆ+ಒದಗುವುದು)
ಮನುಷ್ಯನ ಸಹಜಗುಣಗಳ ಹೊಳೆಯು(ಹೊನಲ್) ಎರಡು ಕವಲುಗಳಾಗಿ ಸೀಳಿ ಸ್ವಹಿತ ಮತ್ತು ಪರಹಿತಗಳೆಂಬುದಾಗಿ ಒಂದು ಕವಲು ಹರಿಯುತ್ತದೆ. ಇನ್ನೊಂದು ಕವಲು ಜಿನುಗುತ್ತಿರುವ (ಜವುಗು) ಹಳ್ಳದಲ್ಲಿ ನಿಂತು ದುರ್ನಾತ(ನಾರ‍್ವುದು)ವನ್ನು ಬೀರುತ್ತದೆ. ಆದರೆ ಈ ಎರಡನೆಯ ಕವಲು ಬೇಸಾಯ(ವೆವಸಾಯ) ಮಾಡಲಿಕ್ಕೆ ಸಹಾಯಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
The river of human nature forks and flows in two streams,
The stream of selfishness and the stream of altruism
One lingers in low swamp stagnates and stinks
The other irrigates agricultural lands – Marula Muniya
(Translation from "Thus Sang Marula Muniya" by Sri. Narasimha Bhat)

No comments:
Post a Comment