ಅಹಿಮುಖಸಹಸ್ರದೊಳಗೊಂದುಸಿರ‍್ವನ್ ಆ ಶೇಷ |
ಬಹುಜೀವದೊಳಗೊಂದೆ ಪರಮಾತ್ಮಸತ್ತ್ವ ||
ಸಿಹಿಯನೋ ಕಹಿಯನೋ ಮುಖ ಸವಿವುದಸುವಲ್ಲ |
ವಿಹರಿಸುವ ರೀತಿಯಿದು - ಮರುಳ ಮುನಿಯ || (೫೫೨)
(ಅಹಿಮುಖ+ಸಹಸ್ರದೊಳಗೆ+ಒಂದು+ಉಸಿರ‍್ವನ್)(ಬಹುಜೀವದೊಳಗೆ+ಒಂದೆ)(ಸವಿವುದು+ಅಸುವಲ್ಲ)
ಸಾವಿರ ಮುಖಗಳಿಂದ ಕೂಡಿದ ಶೇಷನೆಂಬ ಸರ್ಪ(ಅಹಿ)ದಲ್ಲಿ ಇರುವ ಶ್ವಾಸವು ಮಾತ್ರ ಒಂದೇ ಒಂದು. ಅದೇ ರೀತಿ ಸಮಸ್ತ ಜೀವಿಗಳೊಳಗಿರುವುದು ಪರಮಾತ್ಮನ ಒಂದೇ ಸಾರ ಮತ್ತು ತಿರುಳು. ಸಿಹಿ, ಕಹಿ, ಸುಖ ಮತ್ತು ದುಃಖಗಳನ್ನು ಸವಿಯುವುದು ದೇಹ ಮಾತ್ರವೇ ಹೊರತು ಜೀವವಲ್ಲ. ಪರಮಾತ್ಮನ ಸಾರವು ಜೀವಿಗಳಲ್ಲಿ ವಿಹಾರ ಮಾಡುವ ರೀತಿ ಇದು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
One breath Mahashesha draws in
through his thousand faces
One God substance lives in numberless
beings
It is the face that experiences
sweetness or bitterness and not the soul
This is how you should sport in life –
Marula Muniya
(Translation from "Thus Sang
Marula Muniya" by Sri. Narasimha Bhat)
No comments:
Post a Comment