Showing posts with label ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು. Show all posts
Showing posts with label ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು. Show all posts

Tuesday, June 28, 2011

ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು (32)

ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು |
ಅವ್ಯಾಜದಿಂ ಚಿತ್ತು ಲೀಲಿಸೆ ಜಗತ್ತು ||
ಸುವ್ಯಕ್ತ ಸಚ್ಚಿದಾನಂದಮೆ ಸಕಲ ಜಗತ್ತು |
ಸೇವ್ಯವದು ಸರ್ವರ್ಗೆ - ಮರುಳ ಮುನಿಯ || (೩೨)

 (ವ್ಯಕ್ತ+ಅಹೆನ್+ನೆ)(ಸೇವ್ಯವು+ಅದು)

ಅಸ್ಪಷ್ಟ (ಅವ್ಯಕ್ತ)ವಾಗಿರುವ ಸತ್ತ್ವ(ಸತ್ತು)ವು ತಾನೇ ಸ್ಪಷ್ಟ(ವ್ಯಕ್ತ)ವಾಗಿರುವೆನೆಂದರೆ ಅದು ಚೈತನ್ಯ (ಚಿತ್ತು)ವಾಗುತ್ತದೆ. ಚೈತನ್ಯವು ಸಹಜವಾಗಿ (ಅವ್ಯಾಜದಿಂ) ಆಟವಾಡಿದರೆ ಅದೇ ಈ ಪ್ರಪಂಚ. ಸ್ಪಷ್ಟವಾಗಿ ಗೋಚರಿಸುವ (ಸುವ್ಯಕ್ತ), ಇರುವಿಕೆ, ಜ್ಞಾನ ಮತ್ತು ಆನಂದಗಳು ಸೇರಿದ ಪರಮಾತ್ಮನೇ (ಸಚ್ಚಿದಾನಂದ) ಈ ಸಂಪೂರ್ಣ (ಸಕಲ) ಜಗತ್ತು. ಅವನು ಎಲ್ಲರಿಂದ ಪೂಜಿಸಲ್ಪಡಲು ಅರ್ಹನಾದವನು (ಸೇವ್ಯ).