Monday, June 30, 2014

ಶಿವನೀವ ವರಗಳತಿ ವಿವಿಧ ನೀನೆಚ್ಚರಿರು (636)

ಶಿವನೀವ ವರಗಳತಿ ವಿವಿಧ ನೀನೆಚ್ಚರಿರು |
ನವಮಲ್ಲಿಗೆಯ ನಡೂವೆ ನಗರಿದ್ದೀತು ||
ಸವಿಯಿನಮಲಾಗಿಪನು ಕಹಿಯಿಟ್ಟು ಪರಿಕಿಪನು |
ಅವನ ನೆನೆದೂಟವುಣು - ಮರುಳ ಮುನಿಯ || (೬೩೬)

(ಶಿವನು+ಈವ)(ವರಗಳ್+ಅತಿ)(ನೀನ್+ಎಚ್ಚರ್+ಇರು)(ನಾಗರ+ಇದ್ದೀತು)(ನೆನೆದು+ಊಟ+ಉಣು)

ಶಿವನು ನಮಗೆ ಕೊಡುವ ವರಗಳು ಬಹು ವಿಧಗಳಲ್ಲಿರುತ್ತವೆ. ಆದುದರಿಂದ ಅವುಗಳನ್ನು ಸ್ವೀಕರಿಸುವುವಾಗ ನೀನು ಜಾಗರೂಕನಾಗಿರಬೇಕು. ಘಮಘಮಿಸುವ ಮಲ್ಲಿಗೆಯ ಹೂವಿನರಾಶಿಗಳ ಮಧ್ಯದಲ್ಲಿ ನಾಗರಹಾವು ಇರುವ ಸಾಧ್ಯತೆಗಳಿವೆ. ರುಚಿಯಾಗಿರುವುದನ್ನು ನೀಡಿ ಮತ್ತೇರುವಂತೆ ಮಾಡುತ್ತಾನೆ, ಕಹಿಯಾಗಿರುವುದನ್ನು ಕೊಟ್ಟು ನಿನ್ನನ್ನು ಪರೀಕ್ಷೆಗೊಳಪಡಿಸುತ್ತಾನೆ. ಅವನನ್ನು ಸದಾಕಾಲವೂ ಜ್ಞಾಪಿಸಿಕೊಂಡು ಅವನಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The gifts of Shiva are of many varieties and therefore be careful
A serpent there may be under fresh jasmine flowers
He makes you heady with delicious dishes and tests with bitter doses
Remember Him and take your food – Marula Muniya
(Translation from "Thus Sang Marula Muniya" by Sri. Narasimha Bhat)

Friday, June 27, 2014

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ (635)

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ  |
ಹುಡುಗಾಟ ಕುಡಕಾಟ ಮುಡುಕಾಟಗಳಲಿ ||
ಸಿಡುಕೇಕೆ? ಬರಿಯಾಟವೆಂದು ನೀನದನರಿತು |
ಬಿಡಿನಿಲ್ಲು ನಿನ್ನೊಳಗೆ - ಮರುಳ ಮುನಿಯ || (೬೩೫)

ಪ್ರಕೃತಿಯು ಹೇಗೆ ನಡೆಸುತ್ತದೆಯೋ ಹಾಗೆ ಜನಗಳು ಪ್ರಪಂಚದ ಹುಡುಗಾಟ, ತಡಕಾಟದಲ್ಲಿ, ಕುಕ್ಕಾಟ ಮತ್ತು ಮುದರಾಟದಲ್ಲಿ ನಿರತರಾಗುತ್ತಾರೆ. ಇದನ್ನು ಕಂಡು ನೀನು ಕೋಪಗೊಳ್ಳುವುದೇಕೆ? ಇವೆಲ್ಲ ಕ್ರಿಯೆಗಳು ಒಂದು ವಿನೋದವೆಂದು ತಿಳಿದು ಅಂತರಂಗದಲ್ಲಿ ಅವುಗಳಿಂದ ದೂರ ಸರಿದು ಏಕಾಂತನಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just as an act of free walk, human beings sometimes engage themselves
In childhood acts and acts causing pain and distortions, instigated by Nature
Don’t be annoyed by this but understand that it is mere play
Remain uninvolved in self – Marula Muniya (635)
(Translation from "Thus Sang Marula Muniya" by Sri. Narasimha Bhat)

Thursday, June 26, 2014

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? (634)

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? |
ಚುಚ್ಚದೇಂ ನಿನ್ನ ಕಣ್ಣನೆ ನಿನ್ನ ಬೆರಳು? ||
ಕಿಚ್ಚಹುದು ನಿನ್ನ ಭಾವ್ಯಕ್ಕೆ ನಿನ್ನ ಪೂರ್ವಿಕವೆ |
ಎಚ್ಚರಿರೆ ನಿನಗುಳಿವು - ಮರುಳ ಮುನಿಯ || (೬೩೪)

ನಿನ್ನ ಹಲ್ಲುಗಳೇ ಕೆಲವು ಸಲ ನಿನ್ನ ನಾಲಿಗೆಯನ್ನು ಕಚ್ಚುವುದಿಲ್ಲವೇನು? ಇನ್ನೂ ಕೆಲವು ಸಲ ನಿನ್ನ ಬೆರಳುಗಳೇ ನಿನ್ನ ಕಣ್ಣುಗಳನ್ನು ಚುಚ್ಚುವುದಿಲ್ಲವೇನು? ಹಾಗೆಯೇ ನಿನ್ನ ಭವಿಷ್ಯತ್ತಿಗೆ(ಭಾವ್ಯಕ್ಕೆ) ನಿನ್ನ ಪೂರ್ವಜನ್ಮದ ಕೃತಿಗಳೇ ದಹಿಸುವ ಸಾಧನಗಳಾಗಬಹುದು. ಆದ ಕಾರಣ ನೀನು ಸದಾ ಜಾಗರೂಕನಾಗಿದ್ದರೆ ಮಾತ್ರ ಉಳಿದುಕೊಳ್ಳುತ್ತೀಯೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t your teeth bite your own tongue at times?
Doesn’t your finger at times prick your own eyes?
Your won past may set fire to your future
Constant vigil alone can enable you to survive – Marula Muniya (634)
(Translation from "Thus Sang Marula Muniya" by Sri. Narasimha Bhat)

Wednesday, June 25, 2014

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- (633)

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- |
ಯನುಕರಣಮವನ ಸಾಮಾಗ್ರಿಯವಳಿತ್ತ ||
ಋಣಮಾತ್ರವಂತಿರೆಯುಮವಳವುತಣದ ಮತ್ತ- |
ನಣಗಿಪೌಷದ ನಿನದ - ಮರುಳ ಮುನಿಯ || (೬೩೩)

(ಮನುಜನ್+ಎಲ್ಲ)(ಪ್ರಕೃತಿಯ+ಅನುಕರಣಂ+ಅವನ)(ಸಾಮಾಗ್ರಿ+ಅವಳಿತ್ತ)(ಋಣಮಾತ್ರ+ಅಂತು+ಇರೆಯುಂ+ಅವಳ+ಅವುತಣದ)(ಮತ್ತನ್+ಅಣಗಿಪ+ಔಷದ)

ಮನುಷ್ಯನ ಎಲ್ಲಾ ಲಲಿತಕಲೆ ಮತ್ತು ವಿಸ್ಮಯಗೊಳಿಸುವ ಕೆಲಸಗಳೆಲ್ಲವೂ ಪ್ರಕೃತಿಯ ಅನುಕರಣ. ಅವಳು ಮಾಡಿದಂತೆ ಇವನೂ ಮಾಡಲು ಯತ್ನಿಸುತ್ತಾನೆ. ಅದಕ್ಕೆ ಬೇಕಾಗುವ ಸಲಕರಣೆಗಳೂ ಸಹ ಅವಳು ಕೊಟ್ಟಿದ್ದೇ ಹೌದು. ಈ ರೀತಿಯಾಗಿ ಅವನು ಅವಳಿಗೆ ಋಣಿಯಾಗಿದ್ದರೂ ಸಹ, ಅವಳ ಔತಣ(ಅವುತಣ)ದ ಅಮಲು ಮತ್ತು ಮದವನ್ನು ಕಡಿಮೆ ಮಾಡಿಸುವ ಔಷದಿ ನಿನ್ನದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All the marvels of man’s art are the imitation of Nature
All the materials he uses are the gifts of Nature
Even then her grand feast may sometimes cause intoxication
And you alone have the antidote to relieve you of it – Marula Muniya (633)
(Translation from "Thus Sang Marula Muniya" by Sri. Narasimha Bhat)

Wednesday, June 18, 2014

ಪ್ರಕೃತಿಯನ್ನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು (631)

ಪ್ರಕೃತಿಯನ್ನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು |
ವಿಕೃತಿಗೆಯ್ಸುವ ಜಗದಿ ಸಂಸ್ಕೃತಿಯ ಗಳಿಸು ||
ಸುಕೃತ ಧರ್ಮಂ ಪ್ರಾಕೃತ ದ್ವಂದ್ವಗಳ ಮೀರೆ |
ಸ್ವಕೃತವೋ ಸ್ವಾತ್ಮಗತಿ - ಮರುಳ ಮುನಿಯ || (೬೩೧)

(ಸ್ವ+ಆತ್ಮಗತಿ)

ಪ್ರಕೃತಿಯನ್ನು ಅರ್ಥ ಮಾಡಿಕೊ. ತಿಳಿವಳಿಕೆಯಿಂದ ಅದನ್ನು ದಾಟಿಹೋಗು. ಬದಲಾವಣೆ(ವಿಕೃತಿ)ಗಳನ್ನು ಮಾಡಿಸುವ ಜಗತ್ತಿನಲ್ಲಿ ಸಂಸ್ಕೃತಿಯನ್ನು ಸಂಪಾದಿಸು. ಒಳ್ಳೆಯ ಕೆಲಸಗಳನ್ನು ಮಾಡುವ ಧರ್ಮಾಚರಣೆಗಳು ಪ್ರಕೃತಿಯ ವಿರುದ್ಧ ಜೋಡಿಗಳನ್ನು ದಾಟಿ ಹೋದಾಗ, ನಿನ್ನ ಆತ್ಮದ ನಡಗೆಯು ನಿನ್ನ ಸ್ವಂತ ಕೃತಿಯಿಂದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Know the nature of Nature and cross it with the knowledge
Develop noble culture in the world that eggs you do evil deeds
Virtuous acts of dharma enable you to rise above the dualities of Nature
You are the architect of your destiny – Marula Muniya (631)
(Translation from "Thus Sang Marula Muniya" by Sri. Narasimha Bhat)

Tuesday, June 17, 2014

ಆಶೆಗಳ ಕೆರಳಿಪುದು ತೋಷಗಳನುಣಿಸುವುದು (630)

ಆಶೆಗಳ ಕೆರಳಿಪುದು ತೋಷಗಳನುಣಿಸುವುದು |
ನಾಶ ಭಯಗಳಿನೆದೆಯ ಕಾಡಿ ಕುಗ್ಗಿಪುದು ||
ಈ ಸೇನೆ ನಿನ್ನ ಸ್ವತ್ತೆನುತಿಹುದು ದೈವಕೃತಿ |
ಲೇಸು ನಿನ್ನೊಳು ನೀನು - ಮರುಳ ಮುನಿಯ || (೬೩೦)

(ತೋಷಗಳನ್+ಉಣಿಸುವುದು)(ಭಯಗಳಿನ್+ಎದೆಯ)(ಸ್ವತ್ತು+ಎನುತ+ಇಹುದು)

ಬಯಕೆಗಳ ಕೆರಳಿಸುವುದು, ಸಂತೋಷ ಮತ್ತು ತೃಪ್ತಿ(ತೋಷ)ಗಳನ್ನನುಭವಿಸುವಂತೆ ಮಾಡುವುದು, ನಷ್ಟ, ಹಾನಿ ಮತ್ತು ಹೆದರಿಕೆಗಳಿಂದ ಎದೆಯನ್ನು ಕಾಡಿ ಕುಗ್ಗಿಸುವುದು, ಈ ದಂಡುಗಳು ನಿನ್ನ ಸ್ವತ್ತು ಎಂದು ದೈವವು ಹೇಳುತ್ತದೆ. ಆದ್ದರಿಂದ ನಿನ್ನೊಳಗೆ ನೀನೇ ಉತ್ತಮತೆ ಮತ್ತು ಒಳ್ಳೆಯದನ್ನು ಕಂಡುಹಿಡಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It stirs up your desires and feeds you with merriments,
It worries and disheartens you with the fear of destruction
This army swears that God’s work is your own monopoly
The best solution is to dwell in your own self – Marula Muniya (630)
(Translation from "Thus Sang Marula Muniya" by Sri. Narasimha Bhat)

Monday, June 16, 2014

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು (629)

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು |
ಶೋಕಂಗಳದಕಮಿಹುವಂತು ನಿನಗೆಂತೋ ||
ವ್ಯಾಕುಲಿಸದಿರದಾರುಮಾದರಿಪರಿಲ್ಲೆಂದು |
ಏಕಾಂತ ಶವವಾಹಿ - ಮರುಳ ಮುನಿಯ || (೬೨೯)

(ಚಿಂತಿಸುತ+ಇರಲು)(ಶೋಕಂಗಳ್+ಅದಕಂ+ಇಹುವು+ಅಂತು)(ನಿನಗೆ+ಎಂತೋ)(ವ್ಯಾಕುಲಿಸದೆ+ಇರು+ಅದು+ಆರುಂ+ಆದರಿಪರು+ಇಲ್ಲ+ಎಂದು)

ನಿನ್ನ ಬಗ್ಗೆ ತಲೆ ಕೆಡಿಸಿಕೊಳ್ಳಲು ಪ್ರಪಂಚದಲ್ಲಿ ಯಾರಿಗೂ ಸಮಯವಿಲ್ಲ. ದುಃಖ ಮತ್ತು ದುಮ್ಮಾನಗಳು ನಿನಗಿರುವಂತೆಯೇ ಅವರಿಗೂ ಇವೆ. ಯಾರೂ ನಿನಗೆ ಪ್ರೀತಿ, ಮರ್ಯಾದೆ ಮತ್ತು ಗೌರವವನ್ನು ತೋರಿಸುತ್ತಿಲ್ಲವೆಂದು ದುಃಖಿಸಬೇಡ. ಹೆಣವನ್ನು ಹೊರುವವನು ಒಂಟಿಯಾಗಿಯೇ ಇರಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world has no time to think and worry about you,
It has its own sorrows just as you have your own,
Don’t feel bad thinking that no one treats you with the love and respect,
You have to carry your dead body all alone – Marula Muniya (629)
(Translation from "Thus Sang Marula Muniya" by Sri. Narasimha Bhat)

Friday, June 13, 2014

ಅಹಿತಹಿತಗಳ ಮೂಲವಿಹುದಹಂಭಾವದಲಿ (628)

ಅಹಿತಹಿತಗಳ ಮೂಲವಿಹುದಹಂಭಾವದಲಿ |
ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||
ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |
ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)

(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)

ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದರ ಮೂಲವು ಅಹಂಭಾವದಲ್ಲಿರುತ್ತದೆ. ಅದೇ ಪ್ರಪಂಚದ ಎಲ್ಲ ಪದಾರ್ಥಗಳಿಗೂ ಬೆಲೆಯನ್ನು ಕಟ್ಟುತ್ತದೆ. ವಿಧವಿಧವಾದ ರುಚಿಗಳನ್ನು ತೋರಿಸಿ ಪ್ರಕೃತಿಯು ನಿನ್ನನ್ನು ಕರೆಯುತ್ತಿರಲು, ನಿನಗೆ ಯಾವುದು ಹಿತವೆನ್ನುವುದನ್ನು ನೀನೇ ನಿಶ್ಚಯಿಸಿಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The roots of good and evil are in your egoism
It is your ego-sense that fixes the value of all objects
It is Nature’s nature to entice you with many tastes
You yourself should decide what is good for you – Marula Muniya (628)
(Translation from "Thus Sang Marula Muniya" by Sri. Narasimha Bhat)

Thursday, June 12, 2014

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ (627)

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ |
ಎನಿತುದಿನವವರಿವರನವಲಂಬಿಸುವೆ? ||
ಹೆಣ ಹೊರೆಯವರವರಿಗವರವರೆ ಹೊರುವನಿತು |
ನಿನಗೆ ನೀನೇ ಗತಿಯೋ - ಮರುಳ ಮುನಿಯ || (೬೨೭)

(ಎನಿತುದಿನ+ಅವರ್+ಇವರನ್+ಅವಲಂಬಿಸುವೆ)(ಹೊರೆ+ಅವರವರಿಗೆ+ಅವರವರೆ)

ನಿನಗೆ ಎದುರಾಗಿರುವ ಪ್ರಶ್ನೆಗಳನ್ನು ನೀನೇ ಪರಿಹರಿಸಿಕೊ. ಎನ್ನೆಷ್ಟು ದಿನ ಇದಕ್ಕಾಗಿ ನೀನು ಬೇರೆಯವರನ್ನು ಅವಲಂಬಿಸಿರುತ್ತೀಯೆ? ಪ್ರಪಂಚದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ಅವರವರು ಹೊರುವಷ್ಟು ಹೆಣಭಾರಗಳಿರುತ್ತದೆ. ಆದುದ್ದರಿಂದ ನಿನಗೆ ನೀನೇ ಗತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You yourself should solve your own problems
How long can you depend on others?
The dead weight for each to carry is only as much as one can
You yourself are your refuge – Marula Muniya (627)
(Translation from "Thus Sang Marula Muniya" by Sri. Narasimha Bhat)

Friday, June 6, 2014

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು (626)

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು |
ಖರ್ವಪಾದಗಳಿರಲಿ ಗುರಿ ದೂರವಿರಲಿ ||
ಸರ್ವರುಂ ತೊರೆದಿರಲಿ ಶರ್ವರಿಯ ಕಾಳಿರಲಿ |
ನಿರ್ವಂಚನೆಯೊ ಮುಖ್ಯ - ಮರುಳ ಮುನಿಯ || (೬೨೬)

ಧರ್ಮಯಾತ್ರೆಯನ್ನು ಮಾಡಲು ನೀನು ಒಬ್ಬನೇ ತಯಾರಾಗಿರು. ನಿನಗೆ ಗಿಡ್ಡ(ಖರ್ವ)ವಾದ ಕಾಲುಗಳಿರಬಹುದು. ನೀನು ತಲುಪಬೇಕಾಗಿರುವ ಗುರಿಯು ಬಹಳ ದೂರದಲ್ಲಿರಬಹುದು. ನಿನ್ನನ್ನು ಎಲ್ಲರೂ ಬಿಟ್ಟುಹೋಗಿರಬಹುದು. ಅದು ಕರಾಳ (ಕಾಳ್) ರಾತ್ರಿ(ಶರ್ವರಿ)ಯಾಗಿರಬಹುದು. ಧರ್ಮಯಾತ್ರೆಯನ್ನು ಮಾಡುವಾಗ ಮತ್ತು ನಿನ್ನ ಗುರಿಯನ್ನು ತಲುಪುವಾಗ ನಿಷ್ಕಪಟಿಯಾಗಿ ಇರುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be ready for pilgrimage all alone
Your strides may be short and your goal may be far off
All may desert you and the night may be dark
Sincerity is of supreme importance – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 5, 2014

ಎಡಕೆ ತಿರುಗಲೆ ಬೇಡ ಬಲಕೆ ತಿರುಗಲೆ ಬೇಡ |
ಒಡನಾಡಿಯೆತ್ತಲೆಂದುಸಿರೆತ್ತಬೇಡ ||
ನಡೆ ನಿನ್ನ ಪಾಡ ನೀನಡರಲೊಮ್ಮತಿಯಿಂದೆ |
ಬಿಡುಗಡೆಯೊ ಒರ‍್ತನದಿ - ಮರುಳ ಮುನಿಯ || (೬೨೫)

(ಒಡನಾಡಿ+ಎತ್ತಲ್+ಎಂದು+ಉಸಿರ್+ಎತ್ತ+ಬೇಡ)(ನೀನ್+ಅಡರಲ್+ಒಮ್ಮತಿಯಿಂದೆ)

ಜೀವನದ ಹಾದಿಯಲ್ಲಿ ನಡೆಯುವಾಗ ಎಡಗಡೆ ಅಥವಾ ಬಲಗಡೆ ತಿರುಗಿ ನೋಡಬೇಡ. ನಿನ್ನ ಜೊತೆಗಾರರು ಎಲ್ಲೆಂದು ಉಸಿರೆತ್ತಬೇಡ. ನಿನ್ನ ಪಾಲಿಗೆ ಬಂದ ಅವಸ್ಥೆಯನ್ನು ನೀನು ಸ್ಥಿರಮನದಿಂದ ಹತ್ತು. ನಿನ್ನ ಒಂಟಿ ಸಾಹಸದಿಂದಲೇ ನಿನಗೆ ಈ ಪ್ರಪಂಚದ ವ್ಯವಹಾರಗಳಿಂದ ಬಿಡುಗಡೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Turn not to the left, turn not to the right,
Don’t even ask where your companion is,
Walk your path with singleness of mind and reach the goal
Singleness is deliverance – Marula Muniya (625)
(Translation from "Thus Sang Marula Muniya" by Sri. Narasimha Bhat)