Wednesday, September 24, 2014

ಸುರತೆ ಮೃಗತೆಗಳ ಮಿಶ್ರಣದಿಂದೆ ನರಜಂತು (672)

ಸುರತೆ ಮೃಗತೆಗಳ ಮಿಶ್ರಣದಿಂದೆ ನರಜಂತು |
ಪುರುಷತ್ವ ಪೆರ‍್ಚುವುದು ಮೃಗತೆಯಳಿದಂತೆ ||
ಪರಿಪೂರ್ಣದೈವ ಹರಿ ಪುರುಷೋತ್ತಮನಂತೆ |
ಪರಿಶುದ್ಧಸತ್ತ್ವವದು - ಮರುಳ ಮುನಿಯ || (೬೭೨)

(ಮಿಶ್ರಣದ+ಇಂದೆ)(ಮೃಗತೆ+ಅಳಿದಂತೆ)(ಪರಿಶುದ್ಧಸತ್ತ್ವ+ಅದು)

ಮನುಷ್ಯನೆಂಬ ಪ್ರಾಣಿಯು ದೈವತ್ವ ಮತ್ತು ಮೃಗತ್ವಗಳ ಮಿಶ್ರಣ. ಮೃಗತ್ವವು ಕಡಿಮೆಯಾಗುತ್ತಾ ಬಂದಂತೆ ಮನುಷ್ಯತ್ಯವು ಹೆಚ್ಚುತ್ತದೆ. ದೈವತ್ವ ಹೆಚ್ಚುತ್ತಾ ಹೋಗಿ ಪರಿಶುದ್ಧ ಸತ್ತ್ವವಾದಾಗ ಮನುಷ್ಯನು ಪರಿಪೂರ್ಣ ದೇವರಾದ ಶ್ರೀ ಹರಿಪುರುಷೋತ್ತಮನಂತೆ ಆಗುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human being is a compound of beasty and divine traits
As the beasty nature decreases human nature increases,
It is the pure essence of Hari Purushothama
The God Infinite – Marula Muniya (672)
(Translation from "Thus Sang Marula Muniya" by Sri. Narasimha Bhat)

Tuesday, September 23, 2014

ಜ್ಞಾನವಿಜ್ಞಾನದಲಿ ಗೃಹರಾಷ್ಟ್ರಸಂಸ್ಥೆಯಲಿ (671)

ಜ್ಞಾನವಿಜ್ಞಾನದಲಿ ಗೃಹರಾಷ್ಟ್ರಸಂಸ್ಥೆಯಲಿ |
ಗಾನ ನರ್ತನ ಕಾವ್ಯಚಿತ್ರಕಲೆಗಳಲಿ ||
ಯಾನಯಂತ್ರಂಗಳಲಿ ವೈದ್ಯತಂತ್ರಂಗಳಲಿ |
ಮಾನವ ಪ್ರಗತಿಯೆಲೊ - ಮರುಳ ಮುನಿಯ || (೬೭೧)

ಮನುಷ್ಯನ ಏಳಿಗೆ ಮತ್ತು ಮುನ್ನಡೆಯು ಅವನು ಗಳಿಸಿದ ತಿಳುವಳಿಕೆಗಳಲ್ಲಿ, ವಿಜ್ಞಾನದಲ್ಲಿ, ರಚಿಸಿದ ಮನೆ, ರಾಷ್ಟ್ರ ಮತ್ತು ಸಂಘಗಳಲ್ಲಿ, ಸಂಗೀತ, ನಾಟ್ಯ, ಕವಿತೆ ಮತ್ತು ಚಿತ್ರಕಲೆಗಳಲ್ಲಿ, ಪಯಣಿಸುವ ಸಾಧನಗಳಲ್ಲಿ, ಯಂತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಔಷಧಿಗಳನ್ನು ಬಳಸುವ ಉಪಾಯಗಳಲ್ಲಿ ಕಂಡು ಬರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In the various branches of knowledge and science, in family, associations and nations
In music, drama, poetry, painting and other arts,
In the means of conveyance and other machines, medicine and technology
Human progress is commemorable – Marula Muniya (671)
(Translation from "Thus Sang Marula Muniya" by Sri. Narasimha Bhat)

Monday, September 22, 2014

ಪುರುಷಸತ್ತ್ವದ ವಿಜಯರಥ ಸಾಗಿಬರುತಿಹುದು (670)

ಪುರುಷಸತ್ತ್ವದ ವಿಜಯರಥ ಸಾಗಿಬರುತಿಹುದು |
ಭರದಿನೊಮ್ಮೊಮ್ಮೆ ಮಂಥರದಿನೊಮ್ಮೊಮ್ಮೆ ||
ಸರಲ ಮಾರ್ಗದೊಳೊಮ್ಮೆ ದುರ್ಗವಕ್ರದೊಳೊಮ್ಮೆ |
ಪರಿಪರಿಯ ಯಾತ್ರೆಯದು - ಮರುಳ ಮುನಿಯ || (೬೭೦)

(ಭರದಿನ್+ಒಮ್ಮೊಮ್ಮೆ)(ಮಂಥರದಿನ್+ಒಮ್ಮೊಮ್ಮೆ)(ಮಾರ್ಗದೊಳ್+ಒಮ್ಮೆ)(ದುರ್ಗ+ವಕ್ರದೊಳ್+ಒಮ್ಮೆ)

ಮನುಷ್ಯನ ಪೌರುಷ ಶಕ್ತಿಯ ಗೆಲುವಿನ ರಥಯಾತ್ರೆಯು, ಕೆಲವು ಸಲ ಬಹಳ ವೇಗದಿಂದ ಮತ್ತು ಕೆಲವು ಸಲ ನಿಧಾನ(ಮಂಥರ)ವಾಗಿ, ಕೆಲವೊಮ್ಮೆ ನೇರವಾದ ದಾರಿಯಲ್ಲಿ ಮತ್ತು ಕೆಲವು ಸಲ ಕಠಿಣವಾದ ದಾರಿಯಲ್ಲಿ ಮುಂದುವರಿದು ಬರುತ್ತಾ ಇದೆ. ಇದು ಅನೇಕ ತರಹವಾಗಿರುವ ಪಯಣ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The victorious chariot of human heroism is advancing,
Sometimes it is fast and sometimes it is slow,
Now on straight easy road and then on difficult serpentine road,
Thus it moves on and on, on different roads – Marula Muniya (670)
(Translation from "Thus Sang Marula Muniya" by Sri. Narasimha Bhat)

Friday, September 19, 2014

ನರಚರಿತೆಯೆಡೆಬಿಡದೆ ವಿಜಯ ಸಾಹಸದ ಕಥೆ (669)

ನರಚರಿತೆಯೆಡೆಬಿಡದೆ ವಿಜಯ ಸಾಹಸದ ಕಥೆ |
ವರದಶೆಯ ತಾನೊಂದನೆಳಸಿ ಬಿಡದರಸಿ ||
ಪರಿಯುವುದು ತಲೆಯಿಂದ ತಲೆಗೆ ಯುಗದಿಂ ಯುಗಕೆ |
ಪುರುಷಸತ್ತ್ವದ ಲಹರಿ - ಮರುಳ ಮುನಿಯ || (೬೬೯)

(ತಾನ್+ಒಂದನ್+ಎಳಸಿ)(ಬಿಡದೆ+ಅರಸಿ)

ಮನುಷ್ಯನ ಚರಿತ್ರೆ ನಿರಂತರವಾದ ಗೆಲುವು ಮತ್ತು ಪೌರುಷಗಳ ಕಥೆ. ಒಂದು ಶ್ರೇಷ್ಠವಾದ ಸ್ಥಿತಿಯನ್ನು ಬಯಸಿ (ಎಳಸಿ) ಸದಾ ಕಾಲವೂ ಹುಡುಕಿಕೊಂಡು ಹೋಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮತ್ತು ಒಂದು ಯುಗದಿಂದ ಇನ್ನೊಂದು ಯುಗಕ್ಕೆ ಪುರುಷತ್ವದ ಲಹರಿಯು ಹರಿಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human history is along continuous saga of valour and victory
Intensely aspiring after and ceaselessly seeking a state of excellence
Flows the current of human prowess from generation to generation
And from age to age – Marula Muniya (669)
(Translation from "Thus Sang Marula Muniya" by Sri. Narasimha Bhat)

Thursday, September 18, 2014

ಪ್ರಾಣಿಪ್ರಪಂಚಕ್ಕೆ ಮಾನವಂ ಮುಕುಟಮಣಿ (668)

ಪ್ರಾಣಿಪ್ರಪಂಚಕ್ಕೆ ಮಾನವಂ ಮುಕುಟಮಣಿ |
ಜ್ಞಾನದಿಂ ಮಾನ ತರತಮ ನಯವಿನಯದಿಂ ||
ಮಾನವತ್ವದ ಬೆಲೆಯೆ ಲೋಕಕೆಲ್ಲಾ ಬೆಲೆಯು |
ಮಾನವತೆಯನು ಗಣಿಸು - ಮರುಳ ಮುನಿಯ || (೬೬೮)

ಮನುಷ್ಯನು ಪ್ರಾಣಿಪ್ರಪಂಚಕ್ಕೇ ಕಿರೀಟ(ಮುಕುಟ)ಪ್ರಾಯನಾಗಿರುವನು. ತನ್ನ ವಿಶೇಷವಾದ ತಿಳುವಳಿಕೆಯಿಂದ, ಹೆಚ್ಚು ಕಡಿಮೆಗಳನ್ನು ಅಳೆಯುವ ಉಪಾಯ, ನಾಜೂಕು ಮತ್ತು ನಮ್ರತೆಗಳಿಂದ, ಮನುಷ್ಯನು ಗೊತ್ತುಮಾಡಿರುವ ಮೌಲ್ಯಗಳೇ ಜಗತ್ತಿಗೆಲ್ಲಾ ಮೌಲ್ಯಗಳಾಗುತ್ತವೆ. ಆದುದ್ದರಿಂದ ಮನುಷ್ಯತ್ವ ಎಂಬುದು ನಾವು ಗಣನೆಗೆ ತೆಗೆದುಕೊಳ್ಳಬೇಕಾದದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With wisdom, honour, discriminative faculty and cultured virtues,
Man is the crown jewel of the living beings in the world
The value and worth of its human beings is the value and worth of the world,
Hold high therefore the valuable human values - Marula Muniya (668)
(Translation from "Thus Sang Marula Muniya" by Sri. Narasimha Bhat)

Wednesday, September 17, 2014

ಕೈಯ ದುಡುಕಿಸಬೇಡ ಜೀವಪರಿಸರಗಳಲಿ (667)

ಕೈಯ ದುಡುಕಿಸಬೇಡ ಜೀವಪರಿಸರಗಳಲಿ |
ಗಾಯ ಮಾಯದು ಬೆರಲು ತಗಲುತಿರಲದಕೆ ||
ಕಾಯಿ ಮಾಗದು ಹುಲ್ಲೊಳದನು ಬಿಡದವುಕುತಿರೆ |
ಸ್ವಾಯತ್ತೆಯಿಂದಾತ್ಮ - ಮರುಳ ಮುನಿಯ || (೬೬೭)

(ತಗಲುತ+ಇರಲ್+ಅದಕೆ)(ಹುಲ್ಲೊಳ್+ಅದನು)(ಬಿಡದೆ+ಅವುಕುತ+ಇರೆ)(ಸ್ವಾಯತ್ತೆಯಿಂದ+ಆತ್ಮ)

ನಿನ್ನ ಕೈಗಳನ್ನು ಮುಂದಾಲೋಚನೆಯಿಲ್ಲದೆ, ಪ್ರಕೃತಿಯ ಜೀವ ಮತ್ತು ಪರಿಸರಗಳಲ್ಲಿ ಆಡಿಸಬೇಡ. ಸದಾ ಕಾಲವೂ ನಿನ್ನ ಬೆರಳುಗಳು ಅದಕ್ಕೆ ತಗಲುತ್ತಿದ್ದರೆ, ಅದು ಗಾಯವನ್ನು ವಾಸಿಯಾಗಲು ಬಿಡುವುದಿಲ್ಲ. ಕಾಯನ್ನು ಹುಲ್ಲಿನೊಳಗಡೆ ಬಿಗಿಯಾಗಿ ಅದುಮಿಟ್ಟರೆ ಅದು ಹಣ್ಣಾಗಲಾರದು. ಸ್ವಾಧೀನತೆಯಿಂದ(ಸ್ವಯತ್ತೆ) ಆತ್ಮಶಕ್ತಿಯು ವೃದ್ಧಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rush not your hands on life and environment,
The wound doesn’t heal when your finger frequently touches it,
The unique fruit in hay doesn’t ripen, if you keep on pressing it now and then,
Autonomy is essential for the excellence of Atman – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 16, 2014

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು (666)

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು |
ಪೊಡವಿಯನು ಪಾತಾಳ ಮುಟ್ಟಿ ಕೊರೆಯುವನು ||
ಕಡಲುಗಳ ಹಾಯುವನು ಉಡುಪಥವ ಸೀಳುವನು |
ದುಡುಕನೇ ಸೃಷ್ಟಿಯೆಡೆ - ಮರುಳ ಮುನಿಯ || (೬೬೬)

(ಬೆಟ್ಟಗಳನ್+ಇಡಿಯುವನು)

ಕಾಡುಗಳನ್ನು ಕಡಿದು ಭೂಮಿಯನ್ನು ಮಟ್ಟಸ ಮಾಡುವವನು, ಬೆಟ್ಟಗಳನ್ನು ಒಡೆದು ಅದರ ಕಲ್ಲುಬಂಡೆಗಳನ್ನು ಉಪಯೋಗಿಸುವವನು, ಭೂಮಿಯನ್ನು ಪೂರ್ತಿಯಾಗಿ ಕೊರೆದು ಪಾತಾಳದವರೆಗೂ ಹೋಗುವವನು, ಸಮುದ್ರಗಳನ್ನು ದಾಟುವವನು ಮತ್ತು ಆಕಾಶವನ್ನು ಸೀಳಿ ಪಯಣಿಸುವವನು, ಸೃಷ್ಟಿಯ ಸ್ಥಾನದಲ್ಲಿ ಮುಂದಾಲೋಚನೆ ಇಲ್ಲದೆಯೇ, ಒಂದು ಕ್ರಿಯೆಯನ್ನು ಮಾಡದಿರುತ್ತಾನೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He cuts and clears forests, he pounds mountains into dust
He drills into the earth to the depth of nether world,
He crosses all oceans and tears off the starry sky,
Wouldn’t he rush at Nature at haste? – Marula Muniya
(Translation from "Thus Sang Marula Muniya" by Sri. Narasimha Bhat)

Monday, September 15, 2014

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ (665)

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ |
ಕರ್ಮಗಳ್ ತನಗಾಗಿ ನೈಜದಿಂ ತಾನೆ ||
ಉಣ್ಣಿಪ್ಪವದು ಫಲವ ಶೇಷಮಂ ಭುಕಿಸಲ್ಕೆ |
ಜನ್ಮಾಂತರದ ವಿಧಿಯೊ - ಮರುಳ ಮುನಿಯ || (೬೬೫)

(ಕರ್ಮಗಳನ್+ಅನುಕ್ಷಣಮುಂ+ಎಸಗದೆ+ಇಹನ್+ಆರಯ್ಯ)(ಉಣ್ಣಿಪ್ಪ+ಅದು)

ನಾವು ಪ್ರತಿಯೊಂದು ಕ್ಷಣವೂ ಏನಾದರೂ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿಯಾಗಿ ಕರ್ಮಗಳನ್ನು ಮಾಡದಿರುವ ಮನುಷ್ಯರು ಯಾರೂ ಇಲ್ಲ. ಕರ್ಮಗಳು ಸಹಜವಾಗಿ ಅವುಗಳ ಫಲವನ್ನು ಮನುಷ್ಯನು ತಾನೇ ಉಣ್ಣುವಂತೆ ಮಾಡಿ, ಮಿಕ್ಕಿರುವುದನ್ನು ಅನುಭವಿಸಲು ಪುನಃ ಜನ್ಮಗಳನ್ನೆತ್ತುವಂತೆ ಮಾಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is there anyone who is not engaged in activity every moment?
The action done for one’s own sake would make him
Eat their fruits and the soul passes through rebirths,
To experience the balance of his Karma – Marula Muniya (665)
(Translation from "Thus Sang Marula Muniya" by Sri. Narasimha Bhat)

Friday, September 12, 2014

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು (664)

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು |
ತನುವೊಂದಕಿನ್ನೊಂದರಿಂ ಪರಿವ ತೆರದಿ ||
ಮನುಜನೊಳು ಹಸಿವನಾಗಿಸೆ ಸೃಷ್ಟಿಯವನವಳ |
ಋಣವುಂಡು ಬೆಳೆಯುವನೊ - ಮರುಳ ಮುನಿಯ || (೬೬೪)

(ತನಯನಂ+ಎತ್ತಿಕೊಂಡು+ಇರಲ್)(ತನು+ಒಂದಕೆ+ಇನ್ನೊಂದರಿಂ)(ಮನುಜನ+ಒಳು)(ಹಸಿವನ್+ಆಗಿಸೆ)(ಸೃಷ್ಟಿ+ಅವನ್+ಅವಳ)

ತಾಯಿಯು ತನ್ನ ಮಗನನ್ನ ಎತ್ತಿಕೊಂಡಿರುವಾಗ ಅವರಿಬ್ಬರ ದೇಹಗಳ ಶಾಖವು ಒಬ್ಬರಿಂದ ಇನ್ನೊಬ್ಬರಿಗೆ ಹರಿಯುವಂತೆ, ಸೃಷ್ಟಿಯು ಮನುಷ್ಯನಲ್ಲಿ ಹಸಿವನ್ನುಂಟುಮಾಡಲು ಅವನು ಆಕೆಯ ಋಣವನ್ನು ಸೇವಿಸಿ ಬೆಳೆಯುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When mother lift up and embraces her child,
The warmth of the one’s body flows into the other
Likewise when Nature kindles hunger in man and feeds him
He grows up feeding on indebtedness – Marula Muniya (664)
(Translation from "Thus Sang Marula Muniya" by Sri. Narasimha Bhat)

Wednesday, September 10, 2014

ಋಣವ ತೀರಿಸಬೇಕು ಋಣವ ತೀರಿಸಬೇಕು (663)

ಋಣವ ತೀರಿಸಬೇಕು ಋಣವ ತೀರಿಸಬೇಕು |
ಋಣವ ತೀರಿಸಿ ಜಗತ್ಪ್ರಕೃತಿ ಲೇಖ್ಯದಲಿ ||
ಋಣ ಮತ್ತೆ ಬೆಳೆಯದವೊಲಿರುತ್ತಲಿ ಪುರಾಕೃತದ |
ಹೆಣವ ಸಾಗಿಸಬೇಕೋ - ಮರುಳ ಮುನಿಯ || (೬೬೩)

(ಜಗತ್+ಪ್ರಕೃತಿ)(ಬೆಳೆಯದವೊಲ್+ಇರುತ್ತಲಿ)

ನಮ್ಮ ಪೂರ್ವಾಜಿತದ ಸಾಲಗಳನ್ನು ತೀರಿಸುವುದಕ್ಕೋಸ್ಕರ ನಾವು ಈ ಜಗತ್ತಿಗೆ ಬಂದಿದ್ದೇವೆ. ಆದುದ್ದರಿಂದ ಈ ಸಾಲಗಳನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯ. ಈ ಜಗತ್ತಿನ ಲೇಖನ(ಲೇಖ್ಯ)ದಲ್ಲಿರುವ ಸಾಲಗಳನ್ನು ನಾವು ಈ ಸಾಲಗಳು ಪುನಃ ಬೆಳೆಯದಂತೆ ನಮ್ಮ ಪೂರ್ವಾಜಿತದ ಹೆಣವನ್ನು ಸಾಗಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Debts must be settled, debts must be settled and settling all debts,
We must see to it that debts don’t grow any longer
In the records of the world and nature and at the same time
We must carry the corpse of past Karma to its cremation ground – Marula Muniya (663)
(Translation from "Thus Sang Marula Muniya" by Sri. Narasimha Bhat)

Tuesday, September 9, 2014

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು (662)

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು |
ಪೌರುಷದ ಸಾಂಪ್ರತ ವಿವೇಕಮೊಂದಿಂತು ||
ಹೋರುತಿರೆ ನರನೆರಡು ಪಕ್ಷಗಳ್ ನ್ಯಾಯಮಂ |
ತೀರುಗೊಳಿಪಂ ಸ್ವಾಮಿ - ಮರುಳ ಮುನಿಯ || (೬೬೨)

(ಗುಣ+ಉತ್ಕರಂ+ಒಂದು)(ವಿವೇಕಂ+ಒಂದು+ಇಂತು)(ಹೋರುತ+ಇರೆ)(ನರನ್+ಎರಡು)

ಹಿಂದಿನ ಜನ್ಮಗಳ ಕರ್ಮಗಳಿಂದ(ಪ್ರಾರಬ್ಧ) ಹುಟ್ಟಿದ ಬಯಕೆಗಳ(ವಾಸನೆ) ಋಣಗಳನ್ನು ತೀರಿಸುವ ಸ್ವಭಾವಗಳ ರಾಶಿ(ಉತ್ಕರ) ಒಂದು ಕಡೆ. ಸದ್ಯ ಇರುವ ಪ್ರಪಂಚಕ್ಕೆ ಸಂಬಂಧಪಟ್ಟ ಉಚಿತವಾದ (ಸಾಂಪ್ರತ) ಪೌರುಷದ ವಿವೇಚನಾಶಕ್ತಿ ಇನ್ನೊಂದು ಕಡೆ. ಇವೆರಡು ಪಕ್ಷಗಳ ನಡುವೆ ಮನುಷ್ಯನು ಹೋರಾಡುತ್ತಿರಲಾಗಿ, ಪರಮಾತ್ಮನು ನ್ಯಾಯವನ್ನು ತೀರ್ಪುಗೊಳಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The debts of past Karma and instincts are on one side,
Your wisdom and manliness are on another side,
These two sides in man fight for justice,
The Lord would deliver His verdict in time – Marula Muniya
(Translation from "Thus Sang Marula Muniya" by Sri. Narasimha Bhat)

Monday, September 8, 2014

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ (661)

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ |
ಸೊಗ ಕುಡಿಯಲಿಕೆ ಕೆರೆಗಳೇತಕೆನ್ನುವನಾರ್? ||
ಅಗುಣ ಅಶರೀರ ಸತ್ತ್ವವ ನಿನಗೆ ಪಿಡಿದೀಯೆ |
ಸಗುಣಾಕೃತಿಯೆ ಘಟವೊ - ಮರುಳ ಮುನಿಯ || (೬೬೧)

(ಮುಗಿಲಿಂದ+ಇಳಿದು)(ನೆಲವಂ+ಇನ್ನುಂ+ಆನದೆ+ಇಹ)(ಕೆರೆಗಳ್+ಏತಕೆ+ಎನ್ನುವನ್+ಆರ್)(ಸಗುಣ+ಆಕೃತಿಯೆ)

ಮೋಡಲಿಂದಿದಿಳಿದು ಇನ್ನೂ ನೆಲವನ್ನು ಸೇರದಿರುವ ಮಳೆಯ ನೀರು ಅನುಭವಿಲಿಸಲಿಕ್ಕೆ ಸುಖವನ್ನುಂಟುಮಾಡುತ್ತದೆ. ಆ ನೀರನ್ನು ಕುಡಿಯಲು ಕೆರೆಗಳು ಏಕೆ ಬೇಕೆಂದು ಯಾರಾದರೂ ಹೇಳಿಯಾರೇನು? ಸ್ವಾಭಾವತೀತ ಮತ್ತು ಶರೀರವಿಲ್ಲದ ಪರಮಾತ್ಮನೆಂಬ ಸತ್ತ್ವವನ್ನು ನಿನಗೆ ಹಿಡಿದುಕೊಟ್ಟಿರಲು, ಸ್ವಭಾವಗಳಿಂದ ಕೂಡಿದ ಆಕೃತಿಯೇ ಈ ಮನುಷ್ಯ ಎಂಬ ಗಡಿಗೆ (ಘಟ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who would say the lakes aren’t necessary for one to drink
The drops from clouds that have not yet reached the earth?
The image with form is the most suitable pot
For you to hold the formless and attribute less
Divine Substance – Marula Muniya (661)
(Translation from "Thus Sang Marula Muniya" by Sri. Narasimha Bhat)

Friday, September 5, 2014

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ (660)

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ |
ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ ||
ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ |
ಸಡಲದೆದೆಯವನಾರು? - ಮರುಳ ಮುನಿಯ || (೬೬೦)

(ನಗುತಲ್+ಇರೆ)(ಗುಡಿಗೆ+ಅದನು)(ಕೊಂಡು+ಒಯ್ವೆನು+ಎನ್ನುವನು)(ಮುಡಿಗೆ+ಅದು+ಎನ್ನುವನು)(ಸಡಲದ+ಎದೆಯವನು+ಆರು)

ಪ್ರಕೃತಿಯ ಸೊಬಗನ್ನು ಕಂಡು ಸಂತೋಷಪಡುವವನು ಒಂದು ಗಿಡದಲ್ಲಿ ಹುಟ್ಟಿರುವ ಹೂವನ್ನು ಕೀಳದೆಯೇ ನೋಡಿ ನಲಿಯುತ್ತಾನೆ. ಈ ಹೂವನ್ನು ತೆಗೆದುಕೊಂಡು ಹೋಗಿ ದೇವಸ್ಥಾನದಲ್ಲಿರುವ ದೇವರಿಗೆ ಸಮರ್ಪಿಸುತ್ತೇನೆಂದು ಒಬ್ಬ ಭಕ್ತನು ಹೇಳುತ್ತಾನೆ. ಇದು ನನ್ನ ಹೆಂಡತಿ, ಮಕ್ಕಳ ಮುಡಿಗಾಗುತ್ತದೆನ್ನುವವನು ಸಂಸಾರಿ. ಈ ಮೂರೂ ವಿಧವಾದ ಅನುಭವವನ್ನು ಕಂಡು ತನ್ನ ಹೃದಯವನ್ನು ಸಡಿಲಿಸದಿರುವವನು ಯಾರಿದ್ದಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who can enjoy flowers smiling on a plant is really wise,
One who chooses to offer them to the temple deity is a devotee,
One who plucks them for his wife and children is a householder
Is there any one unmoved in such situation? – Marula Muniya (660)
(Translation from "Thus Sang Marula Muniya" by Sri. Narasimha Bhat)

Thursday, September 4, 2014

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ (659)

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ |
ವ್ಯಾಳಕೆಳಗಿರೆ ಬದಿಯತಬ್ಬಿ ನಡುಗುವವಂ ||
ಮೇಲಣಿಂದುದುರಿದರಲಿನ ರಸಕೆ ಬಾಯೊಡ್ಡೆ |
ಬಾಳರಿತ ಯೋಗಮದು - ಮರುಳ ಮುನಿಯ || (೬೫೯)

(ಪುಲಿ+ಅಂಜಿಕೆಯಿನ್+ಎಗರಿ)(ಮೇಲಣಿಂದ+ಉದುರಿದ+ಅರಲಿನ)(ಬಾಯ್+ಒಡ್ಡೆ)(ಯೋಗಂ+ಅದು)

ಒಬ್ಬ ಮನುಷ್ಯನನ್ನು ಒಂದು ಹುಲಿಯು ಅಟ್ಟಿಸಿಕೊಂಡು ಬಂದು, ಅವನು ಹೆದರಿಕೆಯಿಂದ ಓಡಿ ಹೋಗಿ ಹಾಳುಬಾವಿಯಲ್ಲಿ ಬಿದ್ದು, ಕೆಳಗೆ ನೋಡಿದರೆ ಒಂದು ಹಾವ(ವ್ಯಾಳ)ನ್ನು ಕಂಡು, ಅವನು ಪಕ್ಕದಲ್ಲಿರುವ ಬಾವಿಯ ಕಟ್ಟೆಯನ್ನು ತಬ್ಬಿಕೊಂಡಿರುವಾಗ, ಬಾವಿಯ ಮೇಲೆ ಇರುವ ಜೇನುಗೂಡಿನಿಂದ ಜೇನುತುಪ್ಪವು (ಅರಲ ರಸ) ಹನಿಹನಿಯಾಗಿ ಬೀಳುವುದನ್ನು ಕಂಡು, ಆ ಸಂಕಷ್ಟ ಸಮಯದಲ್ಲೂ, ಅವನ ಆಸೆಯು ಇಂಗದೆ, ಅವನು ತನ್ನ ಬಾಯನ್ನು ಆ ಜೇನುತುಪ್ಪದ ಹನಿಯನ್ನು ಕುಡಿಯಲು ತೆರೆಯುತ್ತಾನೆ. ಇದನ್ನು ಕಂಡು ಜೀವನವನ್ನು ಅರಿಯುವುದೇ ಒಂದು ಯೋಗ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Terrified by a chasing tiger one runs and falls into a dry well,
Down below he sees a cobra crawling and clings to the wall trembling,
From there itself he stretches his tongue to the dripping drops of honey,
That is the yoga practised by men well versed in life – Marula Muniya (659)
(Translation from "Thus Sang Marula Muniya" by Sri. Narasimha Bhat)

Wednesday, September 3, 2014

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ (658)

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ |
ನಾಣ್ಯಸಂಚಿಕೆಗಂತು ತಣಿವಪ್ಪುದುಂಟೆ? ||
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ |
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ || (೬೫೮)

(ತೇಗುವುದು+ಒಡನೆ)(ನಾಣ್ಯಸಂಚಿಕೆಗೆ+ಅಂತು)(ತಣಿವು+ಅಪ್ಪುದು+ಉಂಟೆ)(ಪಣ್ಯ+ಆಗಿಸಿತು+ಎಲ್ಲ)(ಸನ್ನೆ+ಅದು)

ಊಟ ಮಾಡಿದ ನಂತರ ಹೊಟ್ಟೆ ತುಂಬಿ ತೃಪ್ತಿಯಿಂದ ತೇಗುತ್ತೇವೆ. ಆದರೆ ಎಷ್ಟು ಹಣವನ್ನು ಕೂಡಿಟ್ಟರೂ ತೃಪ್ತಿ ಏನಾದರೂ ಸಿಗುವುದೇ? ಹಣವೆನ್ನುವುದು ಮನುಷ್ಯ ಮನುಷ್ಯರ ಬಂಧುತ್ವವನ್ನು ಒಂದು ವ್ಯಾಪಾರ(ಪಣ್ಯ)ದ ವಸ್ತುವನ್ನಾಗಿ ಮಾಡಿದೆ. ಇದು ಕಲಿಯೆಂಬ ದೊರೆಯು ಜೀವನದಲ್ಲಿ ಕಾಲಿಡಲು ಚಿಹ್ನೆ (ಸನ್ನೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the stomach is full it sends out belches of satisfaction,
But would the money bag ever express such satisfaction?
Money has made all human relations quite commercial,
It is the symbol of Kali, the monarch of this age – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 2, 2014

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? (657)

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? |
ಕಣ್ಣೊಳಿತೆನುವುದೆಲ್ಲ ಹೃದಯಕೊಳಿತಹುದೇಂ? ||
ಅನ್ನಭೋಗಗಳಳಿಸದಾಶೆಯುಮದೊಂದಿಹುದು |
ನಿನ್ನೊಳರಹಸ್ಯವದು - ಮರುಳ ಮುನಿಯ || (೬೫೭)

(ತಿನ್ನಲ್+ಒಳಿತು+ಎನೆ)(ಕುಕ್ಷಿಗೆ+ಒಳಿತು+ಅಹುದೆ)(ಕಣ್ಣ್+ಒಳಿತು+ಎನುವುದೆಲ್ಲ)(ಹೃದಯಕೆ+ಒಳಿತು+ಅಹುದೇಂ)(ಅನ್ನಭೋಗಗಳ್+ಅಳಿಸದ+ಆಶೆಯುಂ+ಅದೊಂದು+ಇಹುದು)(ನಿನ್ನ+ಒಳರಹಸ್ಯ+ಅದು)

ನಾಲಿಗೆ(ರಸನೆಗೆ) ರುಚಿಕರವಾಗಿ ಕಂಡ ಪದಾರ್ಥಗಳೆಲ್ಲವೂ ಹೊಟ್ಟೆ(ಕುಕ್ಷಿ)ಗೆ ಸಹ ಒಳ್ಳೆಯದನ್ನು ಮಾಡುತ್ತದೋ? ಕಣ್ಣಿಗೆ ಸುಂದರವಾಗಿ ಕಂಡ ವಸ್ತುಗಳೆಲ್ಲವೂ ಹೃದಯಕ್ಕೆ ಹಿತಕಾರಿಯೇ? ತಿನಿಸುಗಳ ಸುಖಾನುಭವಗಳು ತೃಪ್ತಿಪಡಿಸದಂತಹ ಒಂದು ಬಯಕೆ ಇದೆ. ಅದು ನಿನ್ನೊಳಗಿರುವ ಗುಟ್ಟು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Delicious to eat’ the tongue may say, but is it good for stomach?
‘Beautiful it is’, the eyes may say, but is it good for heart?
There’s a desire which food and other enjoyments cannot satisfy
That is your inner secret – Marula Muniya (657)
(Translation from "Thus Sang Marula Muniya" by Sri. Narasimha Bhat)