Friday, March 29, 2013

ಏನೆಂದು ರಚಿಸಿದನೊ ಧಾತನೀ ಜಂತುವನು (396)

ಏನೆಂದು ರಚಿಸಿದನೊ ಧಾತನೀ ಜಂತುವನು |
ಮಾನಿಸನೆನಿಪ್ಪ ಮೃಗ ದೈವ ಸಂಕರವ ||
ಬಾನಿಗೆಗರುವನೊಮ್ಮೆ ಮಣ್ಣಿಗೆರಗುವನೊಮ್ಮೆ |
ತಾಣವೊಂದರೊಳಿರನು - ಮರುಳ ಮುನಿಯ || (೩೯೬)

(ಏನು+ಎಂದು)(ಧಾತನು+ಈ)(ಮಾನಿಸನ್+ಎನಿಪ್ಪ)(ಬಾನಿಗೆ+ಎಗರುವನ್+ಒಮ್ಮೆ)(ಮಣ್ಣಿಗೆ+ಎರಗುವನ್+ಒಮ್ಮೆ)(ತಾಣ+ಒಂದರೊಳ್+ಇರನು)

ಪಶು ಮತ್ತು ದೈವೀ ಗುಣಗಳ ಮಿಶ್ರಣದಿಂದ (ಸಂಕರ) ಒಡಗೂಡಿರುವ ಮನುಷ್ಯ(ಮಾನಿಷ)ನೆಂದೆನ್ನಿಸಿಕೊಳ್ಳುವ ಈ ಪ್ರಾಣಿಯನ್ನು ಏನೆಂದು ತಿಳಿದುಕೊಂಡು ನಿರ್ಮಾಣ ಮಾಡಿದನೋ ಈ ಬ್ರಹ್ಮ (ಧಾತ) ನಮಗೆ ಅರ್ಥವಾಗುತ್ತಿಲ್ಲ. ಒಂದೊಂದು ಸಲ ಇವನು ಆಕಾಶಕ್ಕೆ (ಬಾನಿಗೆ) ಹಾರುತ್ತಾನೆ, ಮತ್ತೊಂದು ಸಲ ಮಣ್ಣಿಗೆ ಬೀಳುತ್ತಾನೆ. ಇವನು ಯಾವಾಗಲೂ ಒಂದೇ ಸ್ಥಳದಲ್ಲಿ (ತಾಣ) ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

For what purpose did the Lord bring out this creature?
This human being a hybrid of animal and God?
One moment he soars to the sky, the next moment he rolls on dust,
He never sticks to any one place – Marula Muniya (396)
(Translation from "Thus Sang Marula Muniya" by Sri. Narasimha Bhat)

Thursday, March 28, 2013

ಬ್ರಹ್ಮ ವಿಭು ಜಗಕೆಂದು ಜನ ನೆನೆದು ನಡೆವಂದು (395)

ಬ್ರಹ್ಮ ವಿಭು ಜಗಕೆಂದು ಜನ ನೆನೆದು ನಡೆವಂದು |
ಕರ್ಮಫಲವೆಂದು ಲಬ್ಧವ ಭುಜಿಸುವಂದು ||
ಧರ್ಮವಲ್ಲದ ಭಾಗ್ಯ ವಿಷವೆಂದು ತೊರೆವಂದು |
ನೆಮ್ಮದಿಯೊ ಲೋಕದಲಿ - ಮರುಳ ಮುನಿಯ || (೩೯೫)

(ಜಗಕೆ+ಎಂದು)(ಕರ್ಮಫಲ+ಎಂದು)(ಭುಜಿಸುವ+ಅಂದು)(ಧರ್ಮ+ಅಲ್ಲದ)(ವಿಷ+ಎಂದು)(ತೊರೆವ+ಅಂದು)

ಜಗತ್ತಿನಲ್ಲಿ ವಾಸಿಸುತ್ತಿರುವ ಜನಗಳು, ಈ ಪ್ರಪಂಚಕ್ಕೆ ಒಡೆಯ (ವಿಭು) ಬ್ರಹ್ಮನೆಂದು ಜ್ಞಾಪಿಸಿಕೊಂಡು ಅದೇ ರೀತಿ ನಡೆದುಕೊಂಡ ದಿನ, ತಮಗೆ ದೊರಕಿದ್ದುದನ್ನು (ಲಬ್ಧ) ತಮ್ಮ ಕರ್ಮದ ಫಲವೆಂದು ತಿಳಿದು ಅದನ್ನು ಸಂತೋಷದಿಂದ ಸೇವಿಸಿದ ದಿನ, ಧರ್ಮವನ್ನು ಬಿಟ್ಟು ದೊರಕಿದ ಸಿರಿ, ಸಂಪತ್ತುಗಳು, ವಿಷಕ್ಕೆ ಸಮಾನವೆಂದು ಅವುಗಳನ್ನು ತೊರೆದ ದಿನ, ಈ ಪ್ರಪಂಚದಲ್ಲಿ ನೆಮ್ಮದಿ, ಸುಖ ಮತ್ತು ಸಂತೋಷಗಳು ನೆಲಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When people accept God as Overlord and live in peace
When they accept their lot as the fruit of their Karma and live their lives
When reject unrighteous wealth as deadly poison
Happiness will prevail in the world – Marula Muniya || (395)
(Translation from "Thus Sang Marula Muniya" by Sri. Narasimha Bhat)

Wednesday, March 27, 2013

ತುರಿ ಬಂದ ಮೈಯ ಬೆರಲಿಂ ಕೆರೆವುದೊಂದು ಸುಖ (394)

ತುರಿ ಬಂದ ಮೈಯ ಬೆರಲಿಂ ಕೆರೆವುದೊಂದು ಸುಖ |
ಎರೆದು ಬಿಸಿನೀರ ಪಲ್ಕಿರಿವುದೊಂದು ಸುಖ ||
ಉರಿಯೆಂದು ಲೇಪಗಳ ಸವರಲಿನ್ನೊಂದು ಸುಖ |
ನರಸುಖಗಳಿವು ತಾನೆ? - ಮರುಳ ಮುನಿಯ || (೩೯೪)

(ಕೆರೆವುದು+ಒಂದು)(ಪಲ್ಕಿರಿವುದು+ಒಂದು)(ಸವರಲ್+ಇನ್ನೊಂದು)(ನರಸುಖಗಳ್+ಇವು)

ಕೆರೆತ ಮತ್ತು ನವೆ ಎಂದು ತನ್ನ ದೇಹವನ್ನು ಬೆರಳುಗಳಿಂದ ಕೆರೆದುಕೊಳ್ಳುವುದು ಒಂದು ವಿಧವಾದ ನೆಮ್ಮದಿಯನ್ನು ಕೊಡುತ್ತದೆ. ನವೆ ಇರುವ ಸ್ಥಳಕ್ಕೆ ಬಿಸಿ ಬಿಸಿಯಾದ ನೀರನ್ನು ಸುರಿದು ಹಲ್ಕಿರಿದು ಅನುಭವಿಸುವುದು ಇನ್ನೊಂದು ವಿಧವಾದ ಸಂತೋಷವನ್ನು ಕೊಡುತ್ತದೆ. ಉರಿಯುತ್ತಿದೆಯೆಂದು ಮುಲಾಮುಗಳನ್ನು ಆ ಜಾಗಕ್ಕೆ ಸವರಿಕೊಂಡು ಅನುಭವಿಸುವುದು ಮತ್ತೊಂದು ರೀತಿಯ ಸುಖವನ್ನು ಕೊಡುತ್ತದೆ. ಮನುಷ್ಯನು ಸುಖಗಳನ್ನನುಭವಿಸುವ ರೀತಿಯಿವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Scratching the scabies-infected body with fingers is one kind of happiness
Pouring very hot water on the and gnashing is another kind of happiness
Applying ointments to the burning wounds is some other kind of happiness
Is not human happiness only this much? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, March 26, 2013

ದಡದಿಂದ ತೆರೆಗಳಾಟವ ನೋಡಿ ನಲಿವವನು (392) ದಡದಿನಲೆಸಾಲ್ಗಳಾಟವ ನೋಳ್ಪನದೊಬ್ಬ (393)

ದಡದಿಂದ ತೆರೆಗಳಾಟವ ನೋಡಿ ನಲಿವವನು |
ಅಡಿಗಳನು ತೆರೆ ಬಡಿದು ತೊಳೆಯೆ ನಲಿವವನು ||
ಪಿಡುದುಸಿರ ತಳಕಿಳಿದು ಮುಳುಗುವವ ಮತ್ತೊಬ್ಬ |
ಕಡಲ ಸುಖ ಮೂರು ತೆರ - ಮರುಳ ಮುನಿಯ || (೩೯೨)

(ತೆರೆಗಳ+ಆಟವ)(ನಲಿವ+ಅವನು)(ಪಿಡುದು+ಉಸಿರ)(ತಳಕೆ+ಇಳಿದು)

ದಡದಿನಲೆಸಾಲ್ಗಳಾಟವ ನೋಳ್ಪನದೊಬ್ಬ - |
ನಡಿಯನಲೆ ಬಡಿದು ತೊಳೆವುದ ನೋಳ್ಪನೊಬ್ಬ ||
ಪಿಡಿದುಸಿರ ತಳಕೆ ಮುಳುಗುತನೋಳ್ಪನಿನ್ನೊಬ್ಬ |
ಕಡಲಸೊಗ ಮೂವರಿಗೆ - ಮರುಳ ಮುನಿಯ || (೩೯೩)

(ದಡದಿನ್+ಅಲೆಸಾಲ್ಗಳ+ಆಟವ)(ನೋಳ್ಪನ್+ಅದು+ಒಬ್ಬನ್+ಅಡಿಯನ್+ಅಲೆ)(ನೋಳ್ಪನ್+ಒಬ್ಬ)(ಪಿಡಿದು+ಉಸಿರ)(ಮುಳುಗುತ+ನೋಳ್ಪನ್+ಇನ್ನೊಬ್ಬ)

ಒಬ್ಬ ಮನುಷ್ಯನು ಸಮುದ್ರದ ದಡದಲ್ಲಿ ನಿಂತುಕೊಂಡು, ಅದರ ಅಲೆಗಳಾಟವನ್ನು ಕಂಡು ಸಂತೋಷಿಸುತ್ತಾನೆ. ಇನ್ನೊಬ್ಬ ಮನುಷ್ಯ, ಸಮುದ್ರದ ಅಲೆಗಳು ತನ್ನ ಪಾದ(ಅಡಿ)ಗಳಿಗೆ ಬಡಿದು ಅವುಗಳನ್ನು ತೊಳೆದುಕೊಳ್ಳುವುದನ್ನು ಅನುಭವಿಸಿ ಸಂತೋಷಿಸುತ್ತಾನೆ. ಮತ್ತೊಬ್ಬ ಮನುಷ್ಯನಾದರೋ, ಉಸಿರು ಬಿಗಿ ಹಿಡಿದು ಸಮುದ್ರದ ಕೆಳಕ್ಕೆ ಮುಳುಗಿ ಹೋಗಿ, ಅದರ ತಳದಲ್ಲಿರುವುದನ್ನು ನೋಡಿ ಸಂತೋಷಿಸುತ್ತಾನೆ. ಈ ರೀತಿಯಾಗಿ ಸಮುದ್ರ ಒಂದೇ ಆದರೂ ಅದು ಮೂವರಿಗೆ ಮೂರು ವಿಧವಾದ ಅನುಭವಗಳನ್ನು ಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One sees the play of waves from the shore and enjoys
Another one is happy when waves beat and wash his feet
The third one controls his breath and dives into the sea
The three enjoy the sea in three different ways – Marula Muniya
(Translation from "Thus Sang Marula Muniya" by Sri. Narasimha Bhat)

Monday, March 25, 2013

ನರದೇಹದಿಂದ ದುರ್ವಾಸನೆಗಳೊಗೆವಂತೆ (391)

ನರದೇಹದಿಂದ ದುರ್ವಾಸನೆಗಳೊಗೆವಂತೆ |
ಪರಿಮಳಗಳದರಿಂದಲೊಗೆದು ಸೊಗಯಿಪುವೇ? ||
ಮರುಗದೆಲೆಯಲಿ ಸುರಭಿ ಮಲ್ಲಿಗೆಯರಲ್ ಸುರಭಿ |
ನರಸುರಭಿಯಾತ್ಮದಲಿ - ಮರುಳ ಮುನಿಯ || (೩೯೧)

(ದುರ್ವಾಸನೆಗಳು+ಒಗೆವಂತೆ)(ಪರಿಮಳಗಳ್+ಅದರಿಂದಲ್+ಒಗೆದು)(ಮರುಗದ+ಎಲೆಯಲಿ)(ಮಲ್ಲಿಗೆ+ಅರಲ್)(ನರಸುರಭಿ+ಆತ್ಮದಲಿ)

ಮನುಷ್ಯನ ದೇಹದಿಂದ ಕೆಟ್ಟ ವಾಸನೆಗಳು ಹುಟ್ಟು(ಒಗೆ)ವಂತೆ, ಅವನ ದೇಹದಿಂದ ಸುವಾಸನೆ(ಪರಿಮಳ)ಗಳೂ ಸಹ ಹುಟ್ಟಿ, ಜನಗಳಿಗೆ ಸಂತೋಷವನ್ನುಂಟು ಮಾಡಬಲ್ಲವೇ? ಮರುಗದ ಎಲೆಯಲ್ಲಿ ಸುಗಂಧ(ಸುರಭಿ) ಮತ್ತು ಮಲ್ಲಿಗೆಯ ಹೂ(ಅರಲ್)ವಿನಲ್ಲಿ ಸುಗಂಧ ಇರುವಂತೆ, ಮನುಷ್ಯನ ಸುಗಂಧವು ಮಾತ್ರ ಅವನ ಆತ್ಮದಿಂದ ಹೊರಹೊಮ್ಮುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sweet fragrances spread out from human bodies
Just as foul odours emanate from them.
There’s fragrance in mint leaves and jasmine flowers,
But human fragrance lies in the Self – Marula Muniya (391)
(Translation from "Thus Sang Marula Muniya" by Sri. Narasimha Bhat)

Friday, March 22, 2013

ಎಡಬಲಗಳೆಣಿಕೆಗಳು ಬುಡ ತಲೆಯ ಗಣನೆಗಳು (390)

ಎಡಬಲಗಳೆಣಿಕೆಗಳು ಬುಡ ತಲೆಯ ಗಣನೆಗಳು |
ಕಡೆ ಮೊದಲು ಲೆಕ್ಕಗಳು ಜಡ ಜೀವಭೇದ ||
ಕೆಡಕು ಮತಿಯೇನಲ್ಲ, ಬದುಕಿಗದು ಸೌಕರ್ಯ |
ಪೊಡವಿಯ ವಿವೇಕವದು - ಮರುಳ ಮುನಿಯ || (೩೯೦)

(ಎಡಬಲಗಳ+ಎಣಿಕೆಗಳು)(ಬದುಕಿಗೆ+ಅದು)(ವಿವೇಕ+ಅದು)

ಸರಿ ಮತ್ತು ತಪ್ಪುದಾರಿಗಳ ಆಲೋಚನೆಗಳು, ಮೇಲೆ ಮತ್ತು ಕೆಳಗಾಗಿಸುವಂತಹ ಲೆಕ್ಕಾಚಾರಗಳು, ಮೊದಲು ಮತ್ತು ಕೊನೆಗಳ ಲೆಕ್ಕಗಳು ಮತ್ತು ಜಡವಸ್ತು ಮತ್ತು ಜೀವಿಗಳಲ್ಲಿರುವ ವ್ಯತ್ಯಾಸಗಳು. ಕೆಟ್ಟಬುದ್ಧಿ ಮತ್ತೇನು ಅಲ್ಲ. ನಮ್ಮಗಳ ಜೀವನಕ್ಕೆ ಅವು ಅನುಕೂಲತೆಗಳನ್ನುಂಟು ಮಾಡುತ್ತವೆ. ಇದರಿಂದ ಬದುಕಿನಲ್ಲಿ ವಿವೇಕ ಉಂಟಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Concepts like left and right, top and bottom
Beginning and end, living and non-living
Aren’t bad ideas but they make life comfortable
It is worldly wisdom – Marula Muniya
(Translation from "Thus Sang Marula Muniya" by Sri. Narasimha Bhat)

Thursday, March 21, 2013

ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ (389)

ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ |
ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ ||
ಕರುಮಮೇಘದಿನಂತು ಮಬ್ಬೊಮ್ಮೆ ತೆರಪೊಮ್ಮೆ |
ಬರುತಿಹುದು ಬಾಳಿನಲಿ - ಮರುಳ ಮುನಿಯ || (೩೮೯)

(ನೆರಳು+ಒಮ್ಮೆ)(ಬೆಳಕು+ಒಮ್ಮೆ)(ಮೇಘದಿನ್+ಅಂತು)(ಮಬ್ಬು+ಒಮ್ಮೆ)(ತೆರಪು+ಒಮ್ಮೆ)(ಬರುತ+ಇಹುದು)

ಕರಿಯ ಮೋಡ ಮತ್ತು ಬಿಳಿಯ ಮೋಡಗಳು ಒಂದು ಸರಪಳಿಯಂತೆ ಪ್ರವಹಿಸುತ್ತಿರಲು, ಭೂಮಿ(ಧರೆ)ಯನ್ನು ಒಂದು ಸಲ ನೆರಳು ಆವರಿಸುತ್ತದೆ. ಮತ್ತೊಂದು ಸಲ ಬೆಳಕು ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಕರ್ಮವೆಂಬ ಮೋಡವೂ ಸಹ ಒಂದು ಸಲ ಕತ್ತಲಿನಂತೆ ಆವರಿಸುತ್ತಾ ಇನ್ನೊಮ್ಮೆ ದೂರವಾಗುತ್ತಾ ನಮ್ಮ ಜೀವನದಲ್ಲಿ ಬಂದು ಹೋಗುತ್ತಾ ಇರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Clouds black and white sail in the sky like the links of a chain
Darkness and brightness then envelope the earth alternately
Gloom and glow likewise occur in life alternately
Due to the clouds of Karma – Marula Muniya (389)
(Translation from "Thus Sang Marula Muniya" by Sri. Narasimha Bhat)

Wednesday, March 20, 2013

ಮಲರ ಕಂಪಾಕ್ಷಣದ ಗಾಳಿಯಲೆಯೊಳು ಬೆರೆತು (388)

ಮಲರ ಕಂಪಾಕ್ಷಣದ ಗಾಳಿಯಲೆಯೊಳು ಬೆರೆತು |
ಮಿಳಿತವಪ್ಪುದನಂತಕಾಲಸಾಗರದಿ |
ಒಳಿತು ಕೆಡಕುಗಳಂತು ನಿನ್ನ ಬಾಳರಲುಗಳು |
ನೆಲಸುವವನಂತದಲಿ - ಮರುಳ ಮುನಿಯ || (೩೮೮)

(ಕಂಪು+ಆ+ಕ್ಷಣದ)(ಗಾಳಿ+ಅಲೆಯೊಳು)(ಮಿಳಿತ+ಅಪ್ಪುದು+ಅನಂತ)(ಕೆಡಕುಗಳ್+ಅಂತು)(ಬಾಳ್+ಅರಲುಗಳು)(ನೆಲಸುವವು+ಅನಂತದಲಿ)

ಹೂವು (ಮಲರ್) ಅರಳುವಾಗ ಸೂಸುವ ಸುಗಂಧ(ಕಂಪು)ವು ಗಾಳಿಯ ಅಲೆಗಳೊಳಗಡೆ ಸೇರಿಕೊಂಡು, ಕೊನೆಯಿಲ್ಲದಿರುವ ಕಾಲವೆಂಬ ಸಮುದ್ರದಲ್ಲಿ ಮಿಶ್ರವಾಗಿ ಹೋಗುತ್ತದೆ. ಇದೇ ರೀತಿಯಾಗಿ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಸಹ ನಿನ್ನ ಜೀವನದ ಹೂ(ಅರಲ್)ವುಗಳೇ ಸರಿ. ಅವೂ ಸಹ ಪರಮಾತ್ಮನಲ್ಲಿ ಚಿರಕಾಲವೂ ನಿಂತುಕೊಂಡಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fragrance of flowers at once mixes in the waves of winds
And become one with the infinite ocean of time
Your merits and demerits likewise are the flowers of your life
They dwell forever in the infinite – Marula Muniya (388)
(Translation from "Thus Sang Marula Muniya" by Sri. Narasimha Bhat)

Tuesday, March 19, 2013

ಬರಿಯ ಸದ್ವಸ್ತು ಚಿದ್ವಿರಹಿತವದಿರ‍್ದೇನು? (387)

ಬರಿಯ ಸದ್ವಸ್ತು ಚಿದ್ವಿರಹಿತವದಿರ‍್ದೇನು? |
ಸ್ಫುರಿಸದುದನಿಹುದೆಂಬುದೆಂತದರಿನೇನು? ||
ಅರಿವು - ನಾನ್‍ನೀನೆಂದು ಗುರುತಿಸುವ ಚಿಚ್ಛಕ್ತಿ |
ಪರವಸ್ತ್ವಭಿವ್ಯಕ್ತಿ - ಮರುಳ ಮುನಿಯ || (೩೮೭)

(ಚಿದ್+ವಿರಹಿತ+ಅದು+ಇರ‍್ದು+ಏನು)(ಸ್ಫುರಿಸದುದನ್+ಇಹುದು+ಎಂಬುದು+ಎಂತು+ಅದರಿನ್+ಏನು)(ಪರವಸ್ತು+ಅಭಿವ್ಯಕ್ತಿ)

ಪರಮಾತ್ಮನೆಂಬ ವಸ್ತು ಮನಸ್ಸಿನಲ್ಲಿ ಮೂಡದಿದ್ದರೇನಂತೆ? ನಮ್ಮ ಮನಸ್ಸಿಗೆ ಹೊಳೆಯದಿರುವ ಒಂದು ವಸ್ತು ಅದು ಹೇಗೆ ಇದೆ ಎಂದು ತಿಳಿಯುವುದರಿಂದಾಗಲಿ ಅದರಿಂದ ಏನು ಪ್ರಯೋಜನ ಎಂದಾಗಲಿ ಎಂದು ಚಿಂತಿಸಬೇಡ. ನಾನು ಮತ್ತು ನೀನೆಂಬ ತಿಳಿವಳಿಕೆಯನ್ನು ಕೊಡುವ ಮನಸ್ಸಿನ ಶಕ್ತಿ(ಚಿಚ್ಛಕ್ತಿ) ಪರಮಾತ್ಮನ ಇರುವಿಕೆಯನ್ನು ನಮಗೆ ವ್ಯಕ್ತಪಡಿಸುತ್ತದೆ(ಅಭಿವ್ಯಕ್ತಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the good of Absolute existence devoid of dynamism?
How to say that a thing is alive if it is static and what’s its use?
The consciousness, the intelligence that identifies as ‘you’ and I
Is the manifestation of the Supreme – Marula Muniya (387)
(Translation from "Thus Sang Marula Muniya" by Sri. Narasimha Bhat)

Monday, March 18, 2013

ಇಲ್ಲಿ ರವಿ ಮೆರೆವಂದಿನ್ನೆಲ್ಲೊ ಕಾರಿರುಳು (386)

ಇಲ್ಲಿ ರವಿ ಮೆರೆವಂದಿನ್ನೆಲ್ಲೊ ಕಾರಿರುಳು |
ಅಲ್ಲಿ ವಿಜಯೋತ್ಸಹವಿಲ್ಲಿ ಸೋಲಳುವು ||
ಉಲ್ಲಾಸವೇಕಿದಕೆ? ತಲ್ಲಣವದೇಕದಕೆ? |
ಎಲ್ಲ ಪ್ರಕೃತಿಯ ಲೀಲೆ - ಮರುಳ ಮುನಿಯ || (೩೮೬)

(ಮೆರೆವಂದು+ಇನ್ನೆಲ್ಲೊ)(ಕಾರ್+ಇರುಳು)(ವಿಜಯೋತ್ಸಹವು+ಇಲ್ಲಿ)(ಸೋಲ್+ಅಳುವು)(ಉಲ್ಲಾಸ+ಏಕಿದಕೆ) (ತಲ್ಲಣ+ಅದು+ಏಕೆ+ಅದಕೆ)

ಪ್ರಪಂಚದ ಒಂದು ಭಾಗವು ಸೂರ್ಯನ ಬೆಳಕಿನಿಂದ ಪ್ರಕಾಶಮಾನವಾಗಿರುವಾಗ, ಅವರ ಮತ್ತೊಂದು ಭಾಗವು ಅಂಧಕಾರದಲ್ಲಿ ಮುಳುಗಿರುತ್ತದೆ. ಒಂದು ಕಡೆ ಗೆಲುವಿನ ಹುರುಪಿರಲು ಮತ್ತೊಂದು ಕಡೆ ಸೋಲು ಮತ್ತು ದುಃಖಗಳಿರುತ್ತದೆ. ಗೆಲುವು ಬಂದಾಗ ಸಂತೋಷಿಸು(ಉಲ್ಲಾಸ)ವುದು ಏಕೆ? ಮತ್ತು ಸೋಲುಂಟಾದಾಗ ತಳಮಳ(ತಲ್ಲಣ)ಗೊಳ್ಳುವುದೇಕೆ? ಸೂರ್ಯ ಒಂದು ಭಾಗದಲ್ಲಿ ಮುಳುಗಿ ಮತ್ತೊಂದು ಭಾಗದಲ್ಲಿ ಕಾಣಿಸಿಕೊಳ್ಳುವಂತೆ, ಸೋಲು ಗೆಲುವುಗಳೂ ಸಹ ಪ್ರಕೃತಿಯ ವಿನೋದವಾದ ಆಟವೆಂಬುದನ್ನರಿತು ಬಾಳು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the sun shines here, darkness reigns there,
Joy of victory there and sorrow of defeat here
Why enthusiasm for this? Why anxiety for that?
All, all are the play of Nature – Marula Muniya
(Translation from "Thus Sang Marula Muniya" by Sri. Narasimha Bhat)

Friday, March 15, 2013

ತಂದೆ ಮಗ ಬಂಧು ಸಖರೆಂಬ ಋಣಬಂಧದಿಂ (385)

ತಂದೆ ಮಗ ಬಂಧು ಸಖರೆಂಬ ಋಣಬಂಧದಿಂ |
ಬಂದಿಯಾಗಿಸಿ ನಿಷ್ಕೃತಿಗಳ ಕೊಳುತ್ತೆ ||
ದ್ವಂದ್ವಾನುಭವದಿಂದೆ ಜೀವನವು ಶೋಧಿಪ್ಪ |
ಸಂಧಾನ ದೈವಿಕವೊ - ಮರುಳ ಮುನಿಯ || (೩೮೫)

(ಸಖರ್+ಎಂಬ)(ಬಂದಿ+ಆಗಿಸಿ)(ದ್ವಂದ್ವ+ಆನುಭವದಿಂದೆ)

ತಂದೆ, ಮಗ, ಸಂಬಂಧಿಕರು, ಸ್ನೇಹಿತರುಗಳೆನ್ನುವ ಋಣಾನುಬಂಧದಿಂದ ನಿನ್ನನ್ನು ಈ ಪ್ರಪಂಚಕ್ಕೆ ಸೆರೆಯಾಳನ್ನಾಗಿಸಿ, ಅದೇ ಕಾಲದಲ್ಲಿ ಋಣ ವಿಮೋಚನೆ(ನಿಷ್ಕ್ರುತಿ)ಗಳನ್ನುಂಟು ಮಾಡುವ ಕೆಲಸಗಳಲ್ಲಿ ನಿನ್ನನ್ನು ತೊಡಗಿಸುತ್ತ, ಈ ರೀತಿಯ ವಿರುದ್ಧವಾದ ಜೋಡಿಗಳ (ದ್ವಂದ್ವ) ಅನುಭವದಿಂದ ಜೀವವನ್ನು ನಿರ್ಮಲಗೊಳಿಸುವ ಕಾರ್ಯ (ಸಂಧಾನ), ದೇವರಿಗೆ ಸಂಬಂಧಪಟ್ಟದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Binding the soul in the bonds of obligations
In forms like father, son, relations and friends and then freeing it,
The divine mechanism makes the soul undergo the two fold experience
And offers opportunities for its purification – Marula Muniya
(Translation from "Thus Sang Marula Muniya" by Sri. Narasimha Bhat)

Thursday, March 14, 2013

ಕಾಲ ನದಿ ವರ್ಷ ಋತು ಮಾಸ ದಿನ ಚಣ ಘಳಿಗೆ (384)

ಕಾಲ ನದಿ ವರ್ಷ ಋತು ಮಾಸ ದಿನ ಚಣ ಘಳಿಗೆ |
ಸಾಲು ಸಾಲಾಗಿ ಪರಿಯುತಿಹುದೆಡೆ ಬಿಡದೆ ||
ಬಾಳಂತು ರಾಜ್ಯ ಪುರ ಪಳ್ಳಿ ಕುಲ ಮನೆಯೆನಿಸಿ |
ಏಳುವುದು ಬೀಳುವುದು - ಮರುಳ ಮುನಿಯ || (೩೮೪)

(ಪರಿಯುತಿಹುದು+ಎಡೆ)(ಬಾಳ್+ಅಂತು)

ಕಾಲವೆನ್ನುವ ನದಿ ವರ್ಷ. ಋತು, ತಿಂಗಳು, ದಿವಸ, ಕ್ಷಣ, ಘಳಿಗೆ ಎಂದು ಸಾಲು ಸಾಲಾಗಿ ನಿರಂತರವಾಗಿ ಹರಿಯುತ್ತಿದೆ. ಹಾಗೆಯೇ ಜನಜೀವನವೂ ಸಹ ದೇಶ, ಪಟ್ಟಣ, ಹಳ್ಳಿ(ಪಳ್ಳಿ), ವಂಶ ಮತ್ತು ಮನೆಯೆಂದೆನ್ನಿಸಿಕೊಂಡು ಏಳು ಬೀಳುಗಳನ್ನು ಕಾಣುತ್ತಾ ಸಾಗುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The river of time is flowing as one continuous current,
Moments, hours, days, months, seasons and years in a procession
Life on the earth on homes, communities, villages and countries
Rises and falls repeatedly – Marula Muniya (384)
(Translation from "Thus Sang Marula Muniya" by Sri. Narasimha Bhat)

Wednesday, March 13, 2013

ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು (383)

ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು |
ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು ||
ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ |
ನೆಲವೊಂದು ಬೆಳೆ ಹಲವು - ಮರುಳ ಮುನಿಯ || (೩೮೩)

(ಜಾಜಿ+ಒಂದರೊಳ್+ಎಂತು)(ಹುಳಿಸಿಹಿಗಳ್+ಒಂದೆ)(ಕಾಯೊಳ್+ಎಂತು)(ಕೆಡುಕು+ಅಂತು)

ಜಾಜಿ ಹೂ ಬಿಡುವ ಬಳ್ಳಿಯಲ್ಲಿ ಎಲೆ ಮಾತ್ರ ಹಸಿರು ಬಣ್ಣ ಮತ್ತು ಹೂವು ಬಿಳಿಯ ಬಣ್ಣ ಹೇಗಾಯ್ತು? ಮಾವಿನಕಾಯಿ ಒಂದೇ ಆದರೂ ಅದು ಕಾಯಾಗಿದ್ದಾಗ ಹುಳಿ ಮತ್ತು ಹಣ್ಣಾಗಿದ್ದಾಗ ಸಿಹಿ ಹೇಗಾಗುತ್ತದೆ? ನೆಲ ಒಂದೇ ಆದರೂ ವಿಧ ವಿಧವಾದ ಬೆಳೆಗಳು ಆಗುವಂತೆ, ಒಳ್ಳೆಯದು ಮತ್ತು ಕೆಟ್ಟದ್ದು ಸಹ ಈ ಮಾಯೆಯಿಂದ ರಚಿತವಾದ ಈ ಮಾನವ ಯಂತ್ರದಲ್ಲಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Green leaves and white flowers in the same jasmine plant
Both sourness and sweetness exist in the same mango
Similarly good and evil are the products of one magic machine,
One earth and many crops – Marula Muniya (383)
(Translation from "Thus Sang Marula Muniya" by Sri. Narasimha Bhat)

Tuesday, March 12, 2013

ಅಚ್ಚರಿಯೊಳಚ್ಚರಿಯೊ ಸುಖದುಃಖದಾಂತರ್ಯ (382)

ಅಚ್ಚರಿಯೊಳಚ್ಚರಿಯೊ ಸುಖದುಃಖದಾಂತರ್ಯ |
ಮೆಚ್ಚಿಕೆಯದೇಕಿಲ್ಲಿ? ಕಿಚ್ಚದೇಕಲ್ಲಿ ? ||
ಬಿಚ್ಚಲಾಗದ ತೊಡಕು ಮನದ ಜಡೆಗಳೊಳಿಹುವು |
ಸಾಕ್ಷಿಯದಮೇಯಕ್ಕೆ - ಮರುಳ ಮುನಿಯ || (೩೮೨)

(ಅಚ್ಚರಿಯೊಳ್+ಅಚ್ಚರಿಯೊ)(ಸುಖದುಃಖದ+ಆಂತರ್ಯ)(ಮೆಚ್ಚಿಕೆ+ಅದು+ಏಕೆ+ಇಲ್ಲಿ)(ಕಿಚ್ಚು+ಅದು+ಏಕೆ+ಅಲ್ಲಿ)(ಬಿಚ್ಚಲು+ಆಗದ)(ಜಡೆಗಳ+ಒಳು+ಇಹುವು)(ಸಾಕ್ಷಿ+ಅದು+ಅಮೇಯಕ್ಕೆ)

ಈ ಸಂತೋಷ ಮತ್ತು ಆಳಲುಗಳಲ್ಲಿರುವ ಒಳಗುಟ್ಟು (ಆಂತರ್ಯ) ಆಶ್ಚರ್ಯಕರವಾಗಿರುವುದರಲ್ಲೂ ಆಶ್ಚರ್ಯಕರವಾಗಿರತಕ್ಕಂತಹ ವಿಷಯ. ಸಂತೋಷವಾಗಿರುವುದನ್ನು ಒಪ್ಪಿಕೊಳ್ಳುವುದು ಏಕೆ? ಮತ್ತು ದುಃಖವುಂಟಾದಾಗ ಸಂಕಟಪಡುವುದೇಕೆ? ಮನಸ್ಸಿನ ಹೆರಳುಗಳಲ್ಲಿ ಬಿಡಿಸಲಿಕ್ಕಾಗದಂತಹ ಸಿಕ್ಕುಗಳಿವೆ. ಇವುಗಳು, ನಮ್ಮ ಅಳತೆಗೆ ಸಿಗದಂತಹ (ಅಮೇಯ) ವಸ್ತುವಿರುವುದಕ್ಕೆ ಪ್ರತ್ಯಕ್ಷ ನಿದರ್ಶನಗಳಾಗಿವೆ (ಸಾಕ್ಷಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Wonder of wonders is the inner nature of happiness and sorrow,
Why admiration here and anger there?
Twists that can never be disentangled exist in mind’s hair
It is a sure proof of the unknowable existence – Marula Muniya (382)
(Translation from "Thus Sang Marula Muniya" by Sri. Narasimha Bhat)

Monday, March 11, 2013

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ (381)

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ |
ಮಿಗಿಲಾವುದೆರಡರೊಳು ನಿನ್ನ ಬೆಲೆ (ಏನು?) ||
ಬಗೆಯದೀ ಲೆಕ್ಕವನು ಜಗದುಣಿಸನುಂಬುವನು |
ಮೃಗಮಾತ್ರನಲ್ಲವೇಂ? - ಮರುಳ ಮುನಿಯ || (೩೮೧)

(ಮಿಗಿಲ್+ಆವುದು+ಎರಡರೊಳು)(ಬಗೆಯದೆ+ಈ)(ಜಗದ+ಉಣಿಸನು+ಉಂಬುವನು)(ಮೃಗಮಾತ್ರನ್+ಅಲ್ಲವೇಂ)

ನೀನು ಪ್ರಪಂಚದಿಂದ ತೆಗೆದುಕೊಂಡಿದ್ದು ಎಷ್ಟು? ಮತ್ತು ಕೊಟ್ಟದ್ದು ಎಷ್ಟು? ಇವೆರಡರಲ್ಲಿ ಅಧಿಕವಾಗಿರುವುದು ಯಾವುದು? ಅದರಲ್ಲಿ ನಿನ್ನ ಕೊಡುಗೆ ಎಷ್ಟು? ಇವುಗಳೆಲ್ಲವನು ಪರಿಗಣಿಸದೆ ಈ ಲೋಕದ ಫಲಾಫಲಗಳನ್ನು ಅನುಭವಿಸುವವನು ಪಶುವಿಗೆ ಸಮಾನನಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What have you given to the world and what have you received from it?
Which is greater of the two and what is your real worth?
One who eats the food of the food without pondering over these
Is nothing but an animal – Marula Muniya (381)
(Translation from "Thus Sang Marula Muniya" by Sri. Narasimha Bhat)

Wednesday, March 6, 2013

ಜೀವನವೆ ಪರಮಗುರು ಮಿಕ್ಕಗುರುಗಳಿನೇನು (380)

ಜೀವನವೆ ಪರಮಗುರು, ಮಿಕ್ಕಗುರುಗಳಿನೇನು |
ಭಾವಸಂಸ್ಕಾರ ಜೀವಾನುಭವಗಳಿಗೆ ||
ನೋವು ನಲಿವುಗಳೊಲೆಯ ಸೆಕೆಯೆ ನಿನ್ನಾತ್ಮಕ್ಕೆ |
ಪಾವಕವಿಧಾನವೆಲೊ - ಮರುಳ ಮುನಿಯ || (೩೮೦)

(ಗುರುಗಳಿನ್+ಏನು)(ಜೀವ+ಅನುಭವಗಳಿಗೆ)(ನಲಿವುಗಳ+ಒಲೆಯ)(ನಿನ್ನ+ಆತ್ಮಕ್ಕೆ)(ವಿಧಾನ+ಎಲೊ)

ಈ ಪ್ರಪಂಚದ ಜೀವನವೇ ನಿನಗೆ ಒಂದು ಶ್ರೇಷ್ಠವಾದ ಗುರು. ನಿನಗಿನ್ಯಾವ ಗುರುಗಳೂ ಬೇಕಿಲ್ಲ. ಇದರಿಂದ ಜೀವವು ಅನುಭವಿಸುವ ಭಾವನೆಗಳ ಪರಿಷ್ಕರಣೆಯಾಗುತ್ತದೆ. ಸುಖ ದುಃಖಗಳೆಂಬ ಒಲೆಯ ತಾಪ ಮತ್ತು ಧಗೆಗಳೇ ನಿನ್ನ ಆತ್ಮವನ್ನು ಶುದ್ಧ ಮಾಡುವ (ಪಾವಕ) ಉಪಾಯಗಳು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When life is the Supreme Preceptor, why go after other teachers?
Life experiences sublimate and refine your emotions
The fireplace of joys and sorrows radiates heat
And purifies your soul – Marula Muniya || (380)
(Translation from "Thus Sang Marula Muniya" by Sri. Narasimha Bhat)

Tuesday, March 5, 2013

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ (374)

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ |
ಚಿತ್ತವನು ತಾಂ ಕಾಣದಂದೆನ್ನಬೇಡ ||
ಪ್ರತ್ಯಹದಿ ನಿನಗೆ ಬಹ ಲೋಕ ಸಂಪರ್ಕದಿನೆ |
ಕೃತ್ಯಸೂಚನೆ ನಿನಗೆ - ಮರುಳ ಮುನಿಯ || (೩೭೯)

(ಭೃತ್ಯನು+ಎಂತರಿಗುಂ)(ಕಾಣದು+ಅಂದು+ಎನ್ನಬೇಡ)

ಸೇವಕನಾದವನು ತಾನು ಮಾಡಬೇಕಾದ ಕೆಲಸವನ್ನು ಎಷ್ಟು ಮಾತ್ರ ಅರ್ಥ ಮಾಡಿಕೊಂಡರೂ ಸಹ ಅವನು ತನ್ನ ಒಡೆಯನ ಮನಸ್ಸನ್ನು ತಿಳಿದುಕೊಳ್ಳಲಾರ ಎಂದು ಹೇಳಬೇಡ. ನಿನಗೆ ಲೋಕದ ಜೊತೆ ಬರುವ ಪ್ರತಿದಿನ(ಪ್ರತ್ಯಹ)ದ ಸಂಬಂಧಗಳಿಂದ, ನೀನು ಮಾಡಬೇಕಾಗಿರುವ ಕೆಲಸದ (ಕೃತ್ಯ) ಸೂಚನೆಗಳು ಸಿಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Do you think that a servant cannot know his duties
And he cannot read his master’s mind
You are taught your duties through public contact
That you obtain in your daily life – Marula Muniya
(Translation from "Thus Sang Marula Muniya" by Sri. Narasimha Bhat)

Monday, March 4, 2013

ಮನೆಯೇನು ಮಠದಂತೆ ನೀತಿಪಾಠಕಶಾಲೆ (378)

ಮನೆಯೇನು ಮಠದಂತೆ ನೀತಿಪಾಠಕಶಾಲೆ |
ಅಣಗಿಪುದಹಂಕೃತಿಯ ವಿಗಡತೆಯ ಬಿಡದೆ ||
ವಿನಯಗಳ ಕಲಿಸುವುದು ಜನಹಿತವ ಬೆಳೆಯಿಪುದು |
ಗುಣ ಶೀಲ ಗುರು ಗೃಹಿತೆ - ಮರುಳ ಮುನಿಯ || (೩೭೮)

(ಅಣಗಿಪುದು+ಅಹಂಕೃತಿಯ)

ಮನೆಯೆನ್ನುವುದು ಮಠದಂತೆ ನಮಗೆ ಒಳ್ಳೆಯ ನಡತೆಗಳನ್ನು ಹೇಳಿಕೊಡುವ ಪಾಠಶಾಲೆ. ಅದು ಸಾಹಸ ಮತ್ತು ಧೈರ್ಯ(ವಿಗಡತೆ)ಗಳನ್ನು ತೊರೆಯದೆ ನಮ್ಮಗಳ ಅಹಂಕಾರವನ್ನು ಅಡಗುವಂತೆ ಮಾಡುತ್ತದೆ. ಅದು ನಮಗೆ ನಮ್ರತೆ, ಸೌಜನ್ಯಗಳನ್ನು ಕಲಿಸುತ್ತದೆ ಮತ್ತು ಲೋಕದಲ್ಲಿರುವ ಜನಗಳಿಗೆ ಒಳ್ಳೆಯದಾಗುವುದನ್ನು ವೃದ್ಧಿಪಡಿಸುತ್ತದೆ. ಈ ರೀತಿಯಾಗಿ ಗೃಹಸ್ಥನ ಜೀವನವನ್ನು ನಿರ್ವಹಿಸುವುದು (ಗೃಹಿತೆ) ಅವನ ಸಚ್ಚಾರಿತ್ರ್ಯ ಮತ್ತು ನಡವಳಿಕೆಗಳನ್ನು ಬೆಳೆಸುವ ಗುರುವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Home is a moral school like a monastery
It enables one to subdue one’s ego without giving up his tenacity
It trains one to learn cultured manners and facilitates social welfare
Household teaches one to build up good character and noble conduct – Marula Muniya
(Translation from "Thus Sang Marula Muniya" by Sri. Narasimha Bhat)