Wednesday, March 27, 2013

ತುರಿ ಬಂದ ಮೈಯ ಬೆರಲಿಂ ಕೆರೆವುದೊಂದು ಸುಖ (394)

ತುರಿ ಬಂದ ಮೈಯ ಬೆರಲಿಂ ಕೆರೆವುದೊಂದು ಸುಖ |
ಎರೆದು ಬಿಸಿನೀರ ಪಲ್ಕಿರಿವುದೊಂದು ಸುಖ ||
ಉರಿಯೆಂದು ಲೇಪಗಳ ಸವರಲಿನ್ನೊಂದು ಸುಖ |
ನರಸುಖಗಳಿವು ತಾನೆ? - ಮರುಳ ಮುನಿಯ || (೩೯೪)

(ಕೆರೆವುದು+ಒಂದು)(ಪಲ್ಕಿರಿವುದು+ಒಂದು)(ಸವರಲ್+ಇನ್ನೊಂದು)(ನರಸುಖಗಳ್+ಇವು)

ಕೆರೆತ ಮತ್ತು ನವೆ ಎಂದು ತನ್ನ ದೇಹವನ್ನು ಬೆರಳುಗಳಿಂದ ಕೆರೆದುಕೊಳ್ಳುವುದು ಒಂದು ವಿಧವಾದ ನೆಮ್ಮದಿಯನ್ನು ಕೊಡುತ್ತದೆ. ನವೆ ಇರುವ ಸ್ಥಳಕ್ಕೆ ಬಿಸಿ ಬಿಸಿಯಾದ ನೀರನ್ನು ಸುರಿದು ಹಲ್ಕಿರಿದು ಅನುಭವಿಸುವುದು ಇನ್ನೊಂದು ವಿಧವಾದ ಸಂತೋಷವನ್ನು ಕೊಡುತ್ತದೆ. ಉರಿಯುತ್ತಿದೆಯೆಂದು ಮುಲಾಮುಗಳನ್ನು ಆ ಜಾಗಕ್ಕೆ ಸವರಿಕೊಂಡು ಅನುಭವಿಸುವುದು ಮತ್ತೊಂದು ರೀತಿಯ ಸುಖವನ್ನು ಕೊಡುತ್ತದೆ. ಮನುಷ್ಯನು ಸುಖಗಳನ್ನನುಭವಿಸುವ ರೀತಿಯಿವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Scratching the scabies-infected body with fingers is one kind of happiness
Pouring very hot water on the and gnashing is another kind of happiness
Applying ointments to the burning wounds is some other kind of happiness
Is not human happiness only this much? – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment