Tuesday, March 5, 2013

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ (374)

ಭೃತ್ಯನೆಂತರಿಗುಂ ಸ್ವಕರ್ತವ್ಯಮಂ ಸ್ವಾಮಿ |
ಚಿತ್ತವನು ತಾಂ ಕಾಣದಂದೆನ್ನಬೇಡ ||
ಪ್ರತ್ಯಹದಿ ನಿನಗೆ ಬಹ ಲೋಕ ಸಂಪರ್ಕದಿನೆ |
ಕೃತ್ಯಸೂಚನೆ ನಿನಗೆ - ಮರುಳ ಮುನಿಯ || (೩೭೯)

(ಭೃತ್ಯನು+ಎಂತರಿಗುಂ)(ಕಾಣದು+ಅಂದು+ಎನ್ನಬೇಡ)

ಸೇವಕನಾದವನು ತಾನು ಮಾಡಬೇಕಾದ ಕೆಲಸವನ್ನು ಎಷ್ಟು ಮಾತ್ರ ಅರ್ಥ ಮಾಡಿಕೊಂಡರೂ ಸಹ ಅವನು ತನ್ನ ಒಡೆಯನ ಮನಸ್ಸನ್ನು ತಿಳಿದುಕೊಳ್ಳಲಾರ ಎಂದು ಹೇಳಬೇಡ. ನಿನಗೆ ಲೋಕದ ಜೊತೆ ಬರುವ ಪ್ರತಿದಿನ(ಪ್ರತ್ಯಹ)ದ ಸಂಬಂಧಗಳಿಂದ, ನೀನು ಮಾಡಬೇಕಾಗಿರುವ ಕೆಲಸದ (ಕೃತ್ಯ) ಸೂಚನೆಗಳು ಸಿಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Do you think that a servant cannot know his duties
And he cannot read his master’s mind
You are taught your duties through public contact
That you obtain in your daily life – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment