Friday, March 29, 2013

ಏನೆಂದು ರಚಿಸಿದನೊ ಧಾತನೀ ಜಂತುವನು (396)

ಏನೆಂದು ರಚಿಸಿದನೊ ಧಾತನೀ ಜಂತುವನು |
ಮಾನಿಸನೆನಿಪ್ಪ ಮೃಗ ದೈವ ಸಂಕರವ ||
ಬಾನಿಗೆಗರುವನೊಮ್ಮೆ ಮಣ್ಣಿಗೆರಗುವನೊಮ್ಮೆ |
ತಾಣವೊಂದರೊಳಿರನು - ಮರುಳ ಮುನಿಯ || (೩೯೬)

(ಏನು+ಎಂದು)(ಧಾತನು+ಈ)(ಮಾನಿಸನ್+ಎನಿಪ್ಪ)(ಬಾನಿಗೆ+ಎಗರುವನ್+ಒಮ್ಮೆ)(ಮಣ್ಣಿಗೆ+ಎರಗುವನ್+ಒಮ್ಮೆ)(ತಾಣ+ಒಂದರೊಳ್+ಇರನು)

ಪಶು ಮತ್ತು ದೈವೀ ಗುಣಗಳ ಮಿಶ್ರಣದಿಂದ (ಸಂಕರ) ಒಡಗೂಡಿರುವ ಮನುಷ್ಯ(ಮಾನಿಷ)ನೆಂದೆನ್ನಿಸಿಕೊಳ್ಳುವ ಈ ಪ್ರಾಣಿಯನ್ನು ಏನೆಂದು ತಿಳಿದುಕೊಂಡು ನಿರ್ಮಾಣ ಮಾಡಿದನೋ ಈ ಬ್ರಹ್ಮ (ಧಾತ) ನಮಗೆ ಅರ್ಥವಾಗುತ್ತಿಲ್ಲ. ಒಂದೊಂದು ಸಲ ಇವನು ಆಕಾಶಕ್ಕೆ (ಬಾನಿಗೆ) ಹಾರುತ್ತಾನೆ, ಮತ್ತೊಂದು ಸಲ ಮಣ್ಣಿಗೆ ಬೀಳುತ್ತಾನೆ. ಇವನು ಯಾವಾಗಲೂ ಒಂದೇ ಸ್ಥಳದಲ್ಲಿ (ತಾಣ) ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

For what purpose did the Lord bring out this creature?
This human being a hybrid of animal and God?
One moment he soars to the sky, the next moment he rolls on dust,
He never sticks to any one place – Marula Muniya (396)
(Translation from "Thus Sang Marula Muniya" by Sri. Narasimha Bhat)

No comments:

Post a Comment