Showing posts with label ದೈವವೊಂದೇ ಸತ್ತ್ವವದರ ನೆರಳೆ ಜಗತ್ತು. Show all posts
Showing posts with label ದೈವವೊಂದೇ ಸತ್ತ್ವವದರ ನೆರಳೆ ಜಗತ್ತು. Show all posts

Thursday, June 16, 2011

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು (26)

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು |
ಆವಗಮದೆಲ್ಲೆಡೆಯು ಗೂಢಮಿರುತಿಹುದು ||
ನೋವು ಸಾವುಗಳೆಲ್ಲವಿರುವುದರ ದವಲತ್ತು |
ನಾವದಕೆ ಮಣಿವಮೆಲೊ- ಮರುಳ ಮುನಿಯ || (೨೬)

 (ದೈವವು+ಒಂದೇ)(ಸತ್ತ್ವ+ಅದರ)(ಆವಗಮ್+ಅದು+ಎಲ್ಲೆಡೆಯು)(ಗೂಢಮ್+ಇರುತ+ಇಹುದು)(ಸಾವುಗಳು+ಎಲ್ಲ+ಇರುವುದರ)(ನಾವು+ಅದಕೆ)(ಮಣಿವಂ+ಎಲೊ)


ದೇವರು ಒಂದೇ ಸತ್ತ್ವ. ಆ ಸತ್ತ್ವದ ನೆರಳೇ ಈ ಜಗತ್ತು. ಈ ಸತ್ತ್ವವು ಯಾವಾಗಲೂ (ಆವಗ್ಂ) ಎಲ್ಲೆಲ್ಲಿಯೂ (ಎಲ್ಲೆಡೆಯು) ರಹಸ್ಯ(ಗೂಢ)ವಾಗೇ ಇರುತ್ತದೆ. ನಾವುಗಳು ಪಡುವ ನೋವು ಮತ್ತು ಅನುಭವಿಸುವ ಸಾವುಗಳೆಲ್ಲವೂ ಇದರ ಅಧಿಕಾರದ ದರ್ಪ(ದವಲತ್ತು)ದಿಂದ ನಡೆಯುತ್ತದೆ. ನಾವು ಈ ರಹಸ್ಯವಾಗಿರುವ ಸತ್ತ್ವಕ್ಕೆ ನಮಸ್ಕರಿಸೋಣ (ಮಣಿವಂ).