Showing posts with label ನಾನು ನೀನವನು ತಾನೆನುತ ಗುರುತಿಸಿಕೊಳುವ. Show all posts
Showing posts with label ನಾನು ನೀನವನು ತಾನೆನುತ ಗುರುತಿಸಿಕೊಳುವ. Show all posts

Wednesday, January 11, 2012

ನಾನು ನೀನವನು ತಾನೆನುತ ಗುರುತಿಸಿಕೊಳುವ (140)

ನಾನು ನೀನವನು ತಾನೆನುತ ಗುರುತಿಸಿಕೊಳುವ |
ಭಾನಶಕ್ತಿ ಸಮಾನವೆಲ್ಲ ಜೀವರಿಗಂ ||
ನಾನಾ ಪ್ರಪಂಚಗಳನಂತೊಂದುಗೂಡಿಪಾ |
ಜ್ಞಾನಸೂತ್ರವೆ ಬೊಮ್ಮ - ಮರುಳ ಮುನಿಯ || (೧೪೦)

(ನೀನ್+ಅವನು)(ತಾನ್+ಎನುತ)(ಸಮಾನ+ಎಲ್ಲ)(ಪ್ರಪಂಚಗಳನ್+ಅಂತು+ಒಂದುಗೂಡಿಪ+ಆ)

ನಾನು, ನೀನು, ಅವನು ಮತ್ತು ತಾನು ಎಂದು ಗುರುತಿಸಿಕೊಂಡು ಕಾಣಿಸಿಕೊಳ್ಳುವ ಸಾಮರ್ಥ್ಯ (ಭಾನಶಕ್ತಿ) ಎಲ್ಲ ಜೀವಗಳಿಗೂ ಸಮಾನವಾಗಿದೆ. ಅನೇಕ ಪ್ರಪಂಚಗಳನ್ನು ಹೀಗೆ ಒಂದುಗೂಡಿಸುವ ತಿಳುವಳಿಕೆಯ ಸೂತ್ರವೇ ಆ ಪರಬ್ರಹ್ಮ.