Showing posts with label ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು. Show all posts
Showing posts with label ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು. Show all posts

Monday, November 21, 2011

ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು (107)


ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು |
ವ್ಯತ್ಯಸಿತ ಲೋಕ ಗತಿಯವರವರ ನಡುವೆ ||
ಉತ್ತಮತೆಯನು (ಸೊಟ್ಟ) ಸೃಷ್ಟಿಯೊಳಗರಸಿಸುವ |
ಕೃತ್ರಿಮವೆ ಶಿವಲೀಲೆ - ಮರುಳ ಮುನಿಯ || (೧೦೭)

(ಗತಿ+ಅವರವರ)(ಸೃಷ್ಟಿಯೊಳಗೆ+ಅರಸಿಸುವ)

ಬ್ರಹ್ಮ (ಪರಮೇಷ್ಠಿ) ಮತ್ತು ಮನುಷ್ಯರ ನಡುವೆ ಪ್ರತಿನಿತ್ಯವೂ ಸ್ಪರ್ಧೆ ನಡೆಯುತ್ತಿರುತ್ತದೆ. ಅವರುಗಳ ಮಧ್ಯದಲ್ಲಿ ಪಲ್ಲಟಗೊಂಡಿರುವ ಜಗತ್ತಿನ ವ್ಯವಹಾರ ಸಾಗುತ್ತಿದೆ. ಸೊಟ್ಟಗಿರುವ ಈ ಸೃಷ್ಟಿಯಲ್ಲಿ ಶ್ರೇಷ್ಠವಾಗಿರುವುದನ್ನು ಹುಡುಕಿಸುವ (ಅರಸಿಸುವ) ಕಪಟ(ಕೃತ್ರಿಮ)ವೊ ಪರಮಾತ್ಮನ ಆಟ.