Showing posts with label ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ. Show all posts
Showing posts with label ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ. Show all posts

Tuesday, June 14, 2011

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ (24)

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ |
ನೂರು ನೂರಾಕೃತಿ ವಿಲಾಸ ವಿಭವಗಳಿಂ- ||
ದಾರಾಧನೆಯನಾವನಂಗೀಕರಿಪನೊ ಅವ-|
ನೋರುವಂಗೀ ನಮನ -ಮರುಳ ಮುನಿಯ || (೨೪)


(ವಿಭವಗಳಿಂದ+ಆರಾಧನೆಯನು+ಆವನ್+ಅಂಗೀಕರಿಪನೊ)(ಅವನ್+ಓರುವಂಗೆ+)


 ನೂರಾರು ಗುಡಿಗಳಲ್ಲಿ ನೂರಾರು ಹೆಸರುಗಳಲ್ಲಿ, ನೂರಾರು ಆಕಾರ, ಬೆಡಗು ಮತ್ತು ವೈಭವ(ವಿಭವ)ಗಳಿಂದ ಯಾವನು ಪೂಜೆಯನ್ನು (ಆರಾಧನೆ) ಒಪ್ಪಿಸಿಕೊಳ್ಳುತ್ತಿರುವನೋ ಆ ಒಬ್ಬನಿಗೆ (ಓರುವಂಗೆ) ಈ ನಮಸ್ಕಾರವನ್ನು ಸಲ್ಲಿಸುತ್ತಿದ್ದೇನೆ.