Showing posts with label ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು. Show all posts
Showing posts with label ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು. Show all posts

Wednesday, June 29, 2011

ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು (33)

ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು |
ಪಾನಕಂ ಬಾಯ್ಗೆ ಸವಿ ಕಣ್ಗೆಕೈಗಿರದು ||
ನೀನಂತು ವಿಶ್ವಜೀವನಕಾಗು ಸನ್ಮಿತ್ರ |
ನೀನಾಗು ನಾನಿರದೆ - ಮರುಳ ಮುನಿಯ || (೩೩)

 (ನೀನ್+ಅಂತು)(ವಿಶ್ವಜೀವನಕೆ+ಆಗು)(ನೀನ್+ಆಗು)(ನಾನ್+ಇರದೆ)


 ಸಕ್ಕರೆಯು ನೀರಿನಲ್ಲಿ ಕರಗಿ(ಲೀನ)ಹೋದರೂ ಸಹ ಅದು ಪಾನಕವಾಗಿ ಅದರ ರುಚಿಯು ಬಾಯಿಗೆ ಸ್ಪಷ್ಟ(ವಿಶದ)ವಾಗಿ ತಿಳಿಯುತ್ತದೆ. ಆದರೆ ಅದು ಕಣ್ಣಿಗೆ ಗೋಚರವಾಗುವುದಿಲ್ಲ ಮತ್ತು ಕೈಗೆ ಸಿಗುವುದಿಲ್ಲ. ಇದೇ ರೀತಿ ನೀನೂ ಸಹ ಈ ಪ್ರಪಂಚದ ಜೀವನದಲ್ಲಿ ಒಳ್ಳೆಯ ಸ್ನೇಹಿತನಾಗಿ ಬಾಳು. ನಾನು ಎಂಬ ಅಹಂಕಾರವಿರದೆ ಬಾಳು.